'ಬ್ಲಾಂಕ್' ಆಗಿದ್ದಾರೆ ಕೃಷಿ ತಾಪಂಡ ... ಮುಂದೇನು?

Blank - Final
Published on

ಬೆಂಗಳೂರು: ಕೃಷಿ ತಾಪಂಡ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಹಲವು ದಿನಗಳೇ ಆಗಿವೆ. 'ಬ್ಲಾಂಕ್​' ಎಂಬ ಚಿತ್ರದಲ್ಲಿ ಅವರು ನಟಿಸಿದ್ದು, ಆ ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗುವ ಸೂಚನೆ ಇದೆ.

ಏನಿದು 'ಬ್ಲಾಂಕ್​'? ಇಂಥದ್ದೊಂದು ಪ್ರಶ್ನೆ ಬರುವುದು ಸಹಜ. ಇದೊಂದು ಸೈಕಲಾಜಿಕಲ್​ ಥ್ರಿಲ್ಲರ್​ ಚಿತ್ರವಂತೆ. ಜಯ್ ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅವರೇ ಈ ಚಿತರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು ಫೆಲಿಸಿಟಿ ಫಿಲಂಸ್​ನಡಿ ಈ ಚಿತ್ರವನ್ನು ಮಂಜುನಾಥ್​ ಪ್ರಸನ್ನ ಎನ್ನುವವರು ನಿರ್ಮಾಣ ಮಾಡುತ್ತಿದ್ದಾರೆ.

ಈಗಾಗಲೇ, ಜಯ್​ ಮತ್ತು ತಂಡದರು ಸದ್ದಿಲ್ಲದೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ತುಮಕೂರು, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ಮುಗಿಸಿದ್ದಾರೆ. ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಸಹ ಮುಗಿದಿದ್ದು, ಸೆನ್ಸಾರ್​ ಮಂಡಳಿಯವರು ಚಿತ್ರ ನೋಡಿ ಗ್ರೀನ್​ ಸಿಗ್ನಲ್ ಕೊಡಬೇಕಿದೆ. ಸೆನ್ಸಾರ್​ ಮಂಡಳಿಯಿಂದ ಗ್ರೀನ್​ ಸಿಗ್ನಲ್​ ಸಿಗುತ್ತಿದ್ದಂತೆಯೇ, ಬಿಡುಗಡೆಯ ಪ್ಲಾನ್​ ಹೊರಬೀಳಲಿದೆ.

ಕೃಷಿ ತಾಪಂಡ ಜತೆಗೆ ಪೂರ್ಣಚಂದ್ರ ಮೈಸೂರು, ಪ್ರಶಾಂತ್ ಸಿದ್ದಿ, ಸುಚೇಂದ್ರ ಪ್ರಸಾದ್, ಭರತ್ ಹಾಸನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು, ಜೆ.ಪಿ.ಮ್ಯಾನ್ ಅವರ ಛಾಯಾಗ್ರಹಣ ಮತ್ತು ಶ್ರೀಶಾಸ್ತ ಅವರ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net