ವಿಜಯಲಕ್ಷ್ಮೀ ಮೇಲೆ ಇನ್ನೊಂದು ದೂರು ... ಈ ಬಾರಿ ಕೊಟ್ಟವರು ಲಾಡ್ಜ್​ ಓನರ್​

Vijayalakshmi 1
Published on

ಚೆನ್ನೈ: 'ನಾಗಮಂಡಲ' ಖ್ಯಾತಿಯ ವಿಜಯಲಕ್ಷ್ಮೀ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ. ಅದರ ಜತೆಗೆ ಹಲವರ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ. ಕಳೆದ ವರ್ಷ ನಟ ರವಿಪ್ರಕಾಶ್​ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಆಸ್ಪತ್ರೆಯಲ್ಲಿದ್ದುಕೊಂಡೇ ಪ್ರತಿಭಟಿಸಿದ್ದರು. ಇತ್ತೀಚೆಗಷ್ಟೇ, ರಾಜಕಾರಣಿ ಸೀಮಾನ್​ ತಮಗೆ ನಂಬಿಸಿ ಮೋಸ ಮಾಡಿದ್ದಾರೆ ಎಂದು ಅವರ ಮೇಲೆ ಆರೋಪ ಮಾಡಿದ್ದರು.

ಈ ಬಾರಿ ಅವರ ಮೇಲೆ ಆರೋಪ ಕೇಳಿ ಬಂದಿದೆ. ಆರೋಪ ಮಾಡಿರುವುದು ಒಬ್ಬ ಲಾಡ್ಜ್​ ಓನರ್​. ತಿರುವನ್ಮಿಯುರ್​ ಪೊಲೀಸ್​ ಸ್ಟೇಶನ್​ನಲ್ಲಿ ವಿಜಯಲಕ್ಷ್ಮೀ ವಿರುದ್ಧ ಅವರು ಒಂದು ದೂರು ದಾಖಲಿಸಿದ್ದಾರೆ.

ಇಷ್ಟಕ್ಕೂ ಆಗಿದ್ದೇನೆಂದರೆ, ಈ ವರ್ಷದ ಆರಂಭದಲ್ಲಿ ಬೆಂಗಳೂರು ಬಿಟ್ಟ ವಿಜಯಲಕ್ಷ್ಮೀ, ಚೆನ್ನೈನ ತಿರುವನ್ಮಯುರ್​ನ ಲಾಡ್ಜ್​ವೊಂದರಲ್ಲಿ ರೂಮ್​ ಮಾಡಿಕೊಂಡು ಉಳಿದುಕೊಂಡಿದ್ದಾರೆ. ಕಳೆದ ಎಂಟು ತಿಂಗಳುಗಳಿಂದ ಲಾಡ್ಜ್​ನಲ್ಲಿ ಬೀಡುಬಿಟ್ಟಿರುವ ವಿಜಯಲಕ್ಷ್ಮೀ ನಯಾಪೈಸೆ ಕೊಟ್ಟಿಲ್ಲ ಎಂಬುದು ಆ ಲಾಡ್ಜ್​ ಓನರ್​ನ ಆರೋಪ.

ಅದೇ ಕಾರಣಕ್ಕೆ ಅವರು ತಿರುವನ್ಮಿಯುರ್​ ಪೊಲೀಸ್​ ಸ್ಟೇಶನ್​ಗೆ ಹೋಗಿ, ವಿಜಯಲಕ್ಷ್ಮೀ ತಮಗೆ ಕಳೆದ ಎಂಟು ತಿಂಗಳ ಬಿಲ್​ ಪಾವತಿಸಿಲ್ಲ ಎಂದು ದೂರು ನೀಡಿದ್ದಾರೆ. ಎಂಟು ತಿಂಗಳಗಳಿಂದ ಮೂರು ಲಕ್ಷ ಪಾವತಿಸಬೇಕು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಆ ಹಣವನ್ನು ಕೊಡಿಸುವಂತೆ ಅವರು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

ದೂರು ಸ್ವೀಕರಿಸಿರುವ ಪೊಲೀಸರು, ಸದ್ಯದಲ್ಲೇ ವಿಜಯಲಕ್ಷ್ಮೀ ಅವರನ್ನು ಕರೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net