More

  ದರ್ಶನ್​ ಜತೆಗಿನ ಸಂಬಂಧಕ್ಕೆ ಪವಿತ್ರಾ ಸ್ಪಷ್ಟನೆ ಕೊಟ್ರೆ ಕರಿಮಣಿ ಮಾಲೀಕ ನೀನಲ್ಲ ಅನ್ನೋದಾ!

  ಬೆಂಗಳೂರು: ನಟ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಮತ್ತು ನಟಿ ಪವಿತ್ರಾ ಗೌಡ ನಡುವೆ ಕೆಲ ದಿನಗಳ ಹಿಂದೆ ಸೋಶಿಯಲ್​ ಮೀಡಿಯಾ ವಾರ್​ ನಡೆದಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ವಾಗ್ವಾದ ಮೊದಲ ಬಾರಿಗೆ ಬಹಿರಂಗವಾಗಿಯೇ ನಡೆಯಿತು. ಕಾಟೇರ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ನಟ ದರ್ಶನ್​ಗೆ ಕೌಟುಂಬಿಕ ಕಲಹ ಕೊಂಚ ಇರಿಸು-ಮುರುಸು ಉಂಟು ಮಾಡಿತು.

  ತಾಜಾ ಸಂಗತಿ ಏನೆಂದರೆ, ನಟಿ ಪವಿತ್ರಾ ಗೌಡ ಮಾಡಿದ್ದ ಹಳೆಯ ಪೋಸ್ಟ್​ಗೆ ನೆಟ್ಟಿಗನೊಬ್ಬ ಮಾಡಿರುವ ಕಾಮೆಂಟ್​ ಎಲ್ಲರ ಗಮನ ಸೆಳೆದಿದೆ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ಸಾಂಗ್​ ವೈರಲ್​ ಆಗುತ್ತಿದೆ. ಯಾವುದು ಆ ಸಾಂಗ್​ ಅಂದರೆ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿರುವ ಮತ್ತು ಸ್ವತಃ ಅವರೇ ಬರೆದಿರುವ ಕರಿಮಣಿ ಮಾಲೀಕ ನೀನಲ್ಲ ಎಂಬ ಸಾಂಗ್. ಜಾಲತಾಣದಲ್ಲಿ ಎಲ್ಲಿ ನೋಡಿದರೂ ಬರೀ ಈ ಸಾಂಗ್​ನ ರೀಲ್​ಗಳೇ ತುಂಬಿ ಹೋಗಿವೆ. ಇದರ ಜೊತೆಗೆ ಲೇಟೆಸ್ಟ್​ ವರ್ಸನ್​ ಕರಿಮಣಿ ಮಾಲೀಕ ರಾಹುಲ್ಲಾ ಸಾಲುಗಳು ಸಹ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದೆ.

  ಕರಿಮಣಿ ಮಾಲೀಕ ನೀನಲ್ಲ ಎಂಬ ಸಾಲಿನ ಅರ್ಥ ಹೇಳಬೇಕಿಲ್ಲ. ಏಕೆಂದರೆ, ಎಲ್ಲರಿಗೂ ಏನೆಂದು ತಿಳಿದಿದೆ. ಇದರ ನಡುವೆ ಪವಿತ್ರಾ ಅವರು ಮಾಡಿರುವ ಪೋಸ್ಟ್​ಗೆ ನೆಟ್ಟಿಗನೊಬ್ಬ “ಓ ನಲ್ಲ ನೀ ನಲ್ಲ ಕರಿಮಣಿ ಮಾಲೀಕ ನೀ ನಲ್ಲ” ಎಂದು ಕಾಮೆಂಟ್​ ಮಾಡಿದ್ದಾನೆ. ಆರಂಭದಲ್ಲಿ ಪವಿತ್ರಾ ಗೌಡ ಅವರು ಕಾಮೆಂಟ್​ ಬಾಕ್ಸ್​ ಲಾಕ್​ ಮಾಡಿದ್ದರು. ಆದರೆ, ಈಗ ಲಾಕ್​ ಓಪನ್​ ಮಾಡಿದ್ದು, ಈಗಲೂ ಕಾಮೆಂಟ್​ಗಳು ಬರುತ್ತಲೇ ಇವೆ. ಸಾಕಷ್ಟು ಮಂದಿ ಕಾಮೆಂಟ್​ ಮಾಡಿದ್ದು, ಅದರಲ್ಲಿ ಓ ನಲ್ಲ ನೀ ನಲ್ಲ ಕರಿಮಣಿ ಮಾಲೀಕ ನೀ ನಲ್ಲ ಎಂಬ ಕಾಮೆಂಟ್​ ಗಮನ ಸೆಳೆದಿದೆ. ಅದಕ್ಕೆ ಪ್ರಸ್ತುತ ಟ್ರೆಂಡ್ ಕೂಡ ಕಾರಣವಾಗಿದೆ.

  Pavihra Gowda

  ಇನ್ನು ಕಾಮೆಂಟ್​ ಬಾಕ್ಸ್​ನಲ್ಲಿ ಕೆಲವು ಪವಿತ್ರಾ ಗೌಡ ಬೆಂಬಲವಾಗಿ ನಿಂತಿದ್ದಾರೆ. ವೈಯಕ್ತಿಕ ವಿಚಾರ ಕೆದಕುವ ಹಕ್ಕು ಯಾರಿಗೂ ಇಲ್ಲ, ಕೆಟ್ಟ ಕಾಮೆಂಟ್​ಗಳಿಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ಎನ್ನುವ ಮೂಲಕ ಪವಿತ್ರಾ ಪರ ಬ್ಯಾಟ್​ ಬೀಸಿದ್ದಾರೆ. ಇನ್ನು ಕೆಲವರು ಪವಿತ್ರಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದರ್ಶನ್​ ಕುಟುಂಬದ ವಿಚಾರದಲ್ಲಿ ನೀವು ತಲೆಹಾಕಿದ್ದು ಸರಿಯಲ್ಲ ಎಂದಿದ್ದಾರೆ.

  ವಿಜಯಲಕ್ಷ್ಮೀ-ಪವಿತ್ರಾ ನಡುವಿನ ವಾಗ್ವಾದಕ್ಕೆ ಕಾರಣವೇನು?
  ದರ್ಶನ್​ ಮತ್ತು ಪವಿತ್ರಾ ವಿಚಾರ ಬಹುದಿನಗಳಿಂದಲೂ ಹರಿದಾಡುತ್ತಿತ್ತು. ಆದರೆ, ಕಳೆದು ತಿಂಗಳು ವಿಜಯಲಕ್ಷ್ಮೀ ತಮ್ಮ ಪುತ್ರ ಮತ್ತು ಪತಿ ದರ್ಶನ್​ ಜತೆಗಿರುವ ಫೋಟೋವನ್ನು ಶೇರ್​ ಮಾಡಿಕೊಂಡು, ಇದು ನಾವು, ನಮ್ಮದು ಮತ್ತು ನಮ್ಮದು ಮಾತ್ರ ಎಂದು ಬರೆದುಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪವಿತ್ರಾ ಗೌಡ ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿ, ಒಂದು ದಶಕ ಕಳೆಯಿತು ಮತ್ತು ಶಾಶ್ವತವಾಗಿ ಹೋಗುವುದು. ನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆ. ಧನ್ಯವಾದಗಳು ಎಂದು ಬರೆದುಕೊಂಡಿದ್ದರು. ವಿಡಿಯೋದಲ್ಲಿ ದರ್ಶನ್​ ಜತೆಗಿರುವ ಫೊಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ದೃಢಪಡಿಸುವ ಮೂಲಕ ವಿಜಯಲಕ್ಷ್ಮೀಗೆ ಟಾಂಗ್​ ಕೊಟ್ಟಿದ್ದರು.

  ಇದಾದ ಬೆನ್ನಲ್ಲೇ ಸಿಡಿದೆದ್ದ ವಿಜಯಲಕ್ಷ್ಮೀ, ಪವಿತ್ರಾ ಗೌಡಳ ಹಳೆಯ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟು ತಿರುಗೇಟು ನೀಡಿದರು. ಇಲ್ಲಿಯವರೆಗೂ ಪವಿತ್ರಾ ಬಗ್ಗೆ ಮಾತ್ರ ಜನರಿಗೆ ಗೊತ್ತಿತ್ತು. ಆದರೆ ಈಗ ಪವಿತ್ರಾಳ ಗಂಡನ ಫೋಟೋವನ್ನು ಸಹ ವಿಜಯಲಕ್ಷ್ಮೀ ಹಂಚಿಕೊಂಡಿದ್ದರು. ಅಲ್ಲದೆ ಪವಿತ್ರಾ ಗೌಡ ಹೆಸರನ್ನು ಉಲ್ಲೇಖಿಸಿಯೇ ವಿಜಯಲಕ್ಷ್ಮೀ ಸರಿಯಾಗಿ ತಿರುಗೇಟು ನೀಡಿ, ದೂರು ನೀಡುವುದಾಗಿಯೂ ಎಚ್ಚರಿಕೆ ನೀಡಿದ್ದರು.

  ವಿಜಯಲಕ್ಷ್ಮೀ ಹೇಳಿದ್ದೇನು?
  ಬೇರೊಬ್ಬರ ಪತಿಯ ಫೋಟೋವನ್ನು ಪೋಸ್ಟ್​ ಮಾಡುವ ಮುನ್ನ ಈ ಮಹಿಳೆ(ಪವಿತ್ರಾ ಗೌಡ) ಗೆ ತನ್ನ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಈ ರೀತಿ ಪೋಸ್ಟ್​ ಮಾಡುವುದು ಆಕೆಯ ವ್ಯಕ್ತಿತ್ವ, ನಡತೆ ಮತ್ತು ನೈತಿಕ ನಿಲುವಿನ ಬಗ್ಗೆ ಹೇಳುತ್ತದೆ. ಆ ಪುರುಷ ವಿವಾಹಿತನಾಗಿದ್ದರೂ ಆಕೆ ಇನ್ನೂ ಕೂಡ ತನ್ನ ವೈಯಕ್ತಿಕ ಅಗತ್ಯತೆಗಳು ಮತ್ತು ಅಜೆಂಡಾ ಈಡೇರಿಕೆಗಾಗಿ ಅದನ್ನೇ ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾಳೆ. ಖುಷಿ ಗೌಡ, ಪವಿತ್ರಾ ಗೌಡ ಹಾಗೂ ಸಂಜಯ್​ ಸಿಂಗ್​ ಮಗಳು ಎಂಬುದನ್ನು ಈ ಫೋಟೋಗಳು ಸ್ಪಷ್ಟವಾಗಿ ನಿರೂಪಿಸುತ್ತವೆ. ಸಾಮಾನ್ಯವಾಗಿ ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವುದಿಲ್ಲ. ಆದರೆ, ನನ್ನ ಕುಟುಂಬ ಹಿತಾಸಕ್ತಿಗಾಗಿ ಧ್ವನಿ ಎತ್ತಲು ಇದು ಸೂಕ್ತ ಸಮಯ ಎಂದು ನನಗೆ ಅನಿಸುತ್ತಿದೆ. ಫೋಟೋಗಳನ್ನು ಶೇರ್​ ಮಾಡುವ ಮೂಲಕ ಸಮಾಜಕ್ಕೆ ಬೇರೆ ಕಲ್ಪನೆ ಬಿತ್ತುತ್ತಿರುವ ಜನರ ವಿರುದ್ಧ ನಾನು ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ಮತ್ತು ಸಂಜಯ್​ ಸಿಂಗ್​ ಫೋಟೋಗಳ ಸಮೇತ ಖಡಕ್​ ಎಚ್ಚರಿಕೆ ನೀಡಿರುವ ವಿಜಯಲಕ್ಷ್ಮೀ, ಸಂಜಯ್​ ಸಿಂಗ್​, ಖುಷಿಗೌಡ ಹಾಗೂ ಪವಿತ್ರಾ ಗೌಡಗೆ ಟ್ಯಾಗ್​ ಮಾಡಿದ್ದರು.

  ಪವಿತ್ರಾ ತಿರುಗೇಟು ಏನು?
  ನಾನು ಪವಿತ್ರ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಜೀವನದಲ್ಲಿ ಉಂಟಾದ ಕೆಲವು ಸಮಸ್ಯೆಯಿಂದ ನಾನು ಸಂಜಯ್ ಅವರಿಂದ ಡಿವೋರ್ಸ್​​ ಪಡೆದಿದ್ದೇನೆ. ಇಲ್ಲಿಯವರೆಗೂ ಖುಷಿ ಗೌಡ, ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ. ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ, ಸಂತೋಷವಾಗಿದ್ದೀವಿ. ದಯವಿಟ್ಟು ಇದನ್ನು ವಿಶೇಷವಾಗಿ ಗಮನಿಸಿ, ನಾನಿಲ್ಲಿ ಯಾವುದೇ ವೈಯಕ್ತಿಕ ಲಾಭ ಅಥವಾ ಅಜೆಂಡಾಗೋಸ್ಕರ ಇಲ್ಲಿಲ್ಲ, ಇದು 10 ವರ್ಷಗಳ ಕಾಲ ಶುದ್ಧ ಪ್ರೀತಿ ಮತ್ತು ಕಾಳಜಿಯ ಬಗ್ಗೆ. ಇದು ಸುಲಭವಲ್ಲ, ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ. ಈ ವಿಚಾರವಾಗಿ ವಿಜಯಲಕ್ಷ್ಮಿ ಅವರೇ ನನಗೆ ಹಲವಾರು ಬಾರಿ ಕರೆ ಮಾಡಿ ನನ್ನ ಬಳಿ ಮಾತನಾಡಿದ್ದು ತಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲವೆಂದು ತಿಳಿಸಿರುತ್ತಾರೆ. (ಅದರ ಕೆಲವು ಸಾಕ್ಷಿ ಹಾಗೂ ನನ್ನ ನನ್ನ ವಿಚ್ಛೇದನದ ಪತ್ರವನ್ನು ಸಮಯ ಬಂದಾಗ ಹಂಚಿಕೊಳ್ಳುತ್ತೇನೆ). ಇದೀಗ ವಿಜಯಲಕ್ಷ್ಮಿ ಅವರು ನನ್ನ ವಿರುದ್ಧವಾಗಿ ಪೋಸ್ಟ್​​ಗಳನ್ನು ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. ನನ್ನ ಹಾಗೂ ನನ್ನ ಮಗಳಾದ ಖುಷಿ ಗೌಡಳ ಬಗ್ಗೆ Vijayalakshmi darshan ಎಂಬ ಇನ್​ಸ್ಟಾಗ್ರಾಮ್​​ನಲ್ಲಿ ಬಹಳಷ್ಟು ಜನ ಕೆಟ್ಟ ಪದಗಳಿಂದ ನಿಂದಿಸುವುದು ನನಗೆ ಮಾನಸಿಕ ನೋವು ಉಂಟುಮಾಡಿದೆ. ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ ವಯಕ್ತಿಕ ಪೋಟೋಗಳು ಶೇರ್​ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ ಈ ಮೂಲಕ ನಾನು ಹೇಳುವುದೇನೆಂದರೆ ನನಗೂ ಕಾನೂನು ಕ್ರಮ ತೆಗೆದುಕೊಳ್ಳುವ ಹಕ್ಕು ಇದೆ. ಆದರೂ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ! ಕಾರಣ ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ. ಅವರ ನಡುವಿನ ಸಮಸ್ಯೆಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ನಾನು ಮುಂಚೆಯೇ ಅವರ ಜೀವನದಲ್ಲಿ ಬಂದೆ. ದಯವಿಟ್ಟು ಅದನ್ನು ನೆನಪಿಸಿಕೊಳ್ಳಿ ಎಂದು @viji_darshsn ಅವರನ್ನು ಟ್ಯಾಗ್​ ಮಾಡಿದ್ದರು.

  ವಿಜಯಲಕ್ಷ್ಮೀಗೆ ನೆಟ್ಟಿಗರ ಬೆಂಬಲ
  ವಿಜಯಲಕ್ಷ್ಮೀ ಮಾಡಿರುವ ಪೋಸ್ಟ್​ಗೆ ನೆಟ್ಟಿಗರು ಬೆಂಬಲ ಸೂಚಿಸಿದ್ದು, ಪವಿತ್ರಾ ಗೌಡ ವಿರುದ್ಧ ಹರಿಹಾಯ್ದಿದ್ದಾರೆ. ತನ್ನ ಗಂಡನನ್ನು ಬಿಟ್ಟು, ಅವನ ಮಗಳನ್ನು ದುಡ್ಡಿಗೋಸ್ಕರ ಇನ್ನೊಬ್ಬರ ಗಂಡನ ಮಗಳಾಗಿ ಬಿಂಬಿಸಿದರೆ, ಪಾಪ ಪ್ರೀತಿಸಿ ಮದುವೆ ಆಗಿ ತನ್ನ ಗಂಡನಿಗೆ ಹುಟ್ಟಿದ ಮಗನನ್ನು ಸಾಕಿ ಸಲುಹಿ, ತಾನಾಯಿತು ತನ್ನ ಸಂಸಾರವಾಯಿತು ಅಂತ ಬದುಕುವವರು, ಇಂತಹ ಮನೆಹಾಳರಿಗೆ ತಮ್ಮ ಗಂಡನನ್ನು ಬಿಟ್ಟು ಕೊಟ್ಟು, ತಮಗೆ ಹುಟ್ಟಿದ ಮಗನಿಗೆ ನೋವು ಮಾಡಲು ಸಾಧ್ಯವೆ? ತಮ್ಮ ಸಂಸಾರ ಉಳಿಸಿಕೊಳ್ಳಲು ಯಾವುದೇ ಹೆಣ್ಣು ಕೊನೆಗೆ ವಿಧಿ ಇಲ್ಲದೆ ಇದನ್ನಷ್ಟೇ ಮಾಡಬಲ್ಲರು. ವಿಜಿ ಅತ್ತಿಗೆಯವರನ್ನು ಒಂದು ಹೆಣ್ಣಾಗಿ ಎಷ್ಟು ನೋವು ಪಡುತ್ತಿರಬಹುದು ಅನ್ನೋದನ್ನು ಅರ್ಥ ಮಾಡಿಕೊಂಡರೆ ಸಾಕು, ಸೆಲೆಬ್ರಿಟಿ ಹೆಂಡತಿಯಾಗಿ ಆಮೇಲೆ ಪರಿಗಣಿಸಿದರಾಯಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮೂಲಕ ತಿಳಿಸಿದ್ದರು.

  ವಿಜಯಲಕ್ಷ್ಮೀ ವಿರುದ್ಧ ಪವಿತ್ರಾ ತಿರುಗಿಬೀಳಲು ಪ್ರಚೋದನೆ ಕೊಟ್ಟಿದ್ಯಾರು? ಇಲ್ಲಿದೆ ಅಚ್ಚರಿಯ ಸಂಗತಿ

  ವಿಜಯಲಕ್ಷ್ಮೀಗೆ ಟಾಂಗ್​​ ಕೊಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಪವಿತ್ರಾ! ಮುಚ್ಚಿಟ್ಟಿದ್ದ ರಹಸ್ಯ ಬಯಲು

  ಇನ್ಮುಂದೆ ಸುಮ್ಮನಿರಲ್ಲ… ಪರ್ಸನಲ್​ ಫೋಟೋಗಳನ್ನು ಹರಿಬಿಟ್ಟು ಪವಿತ್ರಾಗೆ ವಿಜಯಲಕ್ಷ್ಮೀ ಖಡಕ್​ ಎಚ್ಚರಿಕೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts