More

    ವಿಜಯಲಕ್ಷ್ಮೀ ವಿರುದ್ಧ ಪವಿತ್ರಾ ತಿರುಗಿಬೀಳಲು ಪ್ರಚೋದನೆ ಕೊಟ್ಟಿದ್ಯಾರು? ಇಲ್ಲಿದೆ ಅಚ್ಚರಿಯ ಸಂಗತಿ

    ಬೆಂಗಳೂರು: ನಟ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಮತ್ತು ನಟಿ ಪವಿತ್ರಾ ಗೌಡ ನಡುವೆ ಶೀತಲ ಸಮರ ಆರಂಭವಾಗಿದೆ. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ವಾಗ್ವಾದ ಇದೀಗ ಬಯಲಿಗೆ ಬಂದಿದೆ. ವಿಜಯಲಕ್ಷ್ಮೀ ಏಟಿಗೆ ಪವಿತ್ರಾ ಗೌಡ ಸಹ ಎದಿರೇಟು ನೀಡಿದ್ದು, ಮುಂದೆ ಈ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬ ಕುತೂಹಲ ಸಹ ಇದೆ. ಇಷ್ಟು ದಿನ ಮೌನವಾಗಿದ್ದ ವಿಜಯಲಕ್ಷ್ಮೀ ಒಮ್ಮೆಲೆ ಧ್ವನಿ ಏರಿಸಲು ಪವಿತ್ರಾ ಗೌಡ ಪೋಸ್ಟ್​ ಮಾಡಿದ ವಿಡಿಯೋ ಕಾರಣವಾದರೆ, ಪವಿತ್ರಾ ಗೌಡ ಸಹ ವಿಜಯಲಕ್ಷ್ಮೀ ವಿರುದ್ಧ ಗುಡುಗಿದ್ದಾರೆ. ಅದಕ್ಕೆ ಕಾರಣ ವಿಜಯಲಕ್ಷ್ಮೀ ಹಂಚಿಕೊಂಡಿದ್ದ ಪೋಸ್ಟ್​ ಒಂದೆಡೆಯಾದರೂ ಪ್ರಮುಖ ಕಾರಣ ಬೇರೇನೆ ಇದೆ. ಅದೇನೆಂದರೆ, ಕೆಲ ನೆಟ್ಟಿಗರು ತೀರಾ ಕೆಳ ಮಟ್ಟದ ಕಾಮೆಂಟ್​ ಮಾಡಿದ್ದು, ಇದರಿಂದ ಅಸಮಾಧಾನಗೊಂಡಿರುವ ಪವಿತ್ರಾ, ವಿಜಯಲಕ್ಷ್ಮೀ ವಿರುದ್ಧ ತಿರುಗಿಬಿದ್ದಿದ್ದಾರೆ.

    ನೆಟ್ಟಿಗರು ತನ್ನ ವಿರುದ್ಧ ಕಿಡಿಕಾರುತ್ತಾರೆ ಅಂತಾ ಪವಿತ್ರಾಗೆ ಮೊದಲೇ ತಿಳಿದಿತ್ತು. ಆ ಕಾರಣಕ್ಕೆ ತಾನು ಮಾಡಿರುವ ಎರಡೂ ಪೋಸ್ಟ್​ಗೂ ಕಾಮೆಂಟ್​ ಬಾಕ್ಸ್​ ಲಾಕ್​ ಮಾಡಿದ್ದಾರೆ. ಯಾರೂ ಕೂಡ ಪವಿತ್ರಾ ಪೋಸ್ಟ್​ ಅಭಿಪ್ರಾಯ ಹಂಚಿಕೊಳ್ಳಲು ಸಾಧ್ಯವಿಲ್ಲ. ಮೊದಲ ಪೋಸ್ಟ್​ನಲ್ಲಿ ದರ್ಶನ್​ ಜತೆಗಿನ ಫೋಟೋಗಳನ್ನು ಕೊಲ್ಯಾಜ್​ ಮಾಡಿರುವ ವಿಡಿಯೋವನ್ನು ಪವಿತ್ರಾ ಹಂಚಿಕೊಂಡಿದ್ದಾರೆ. ಇನ್ನೊಂದು ಪೋಸ್ಟ್​ನಲ್ಲಿ ವಿಜಯಲಕ್ಷ್ಮೀಗೆ ತಿರುಗೇಟು ನೀಡಿದ್ದಾರೆ.

    ಆದರೆ, ಕೆಲ ನೆಟ್ಟಿಗರು ಪವಿತ್ರಾರನ್ನು ಗುರಿಯಾಗಿಸಿಕೊಂಡಿದ್ದು, ಅವರ ಹಳೆಯ ಪೋಸ್ಟ್​ಗಳಲ್ಲಿ ಕೆಟ್ಟ ಕೆಟ್ಟ ಪದಗಳನ್ನು ಪ್ರಯೋಗ ಮಾಡಿ ಅಶ್ಲೀಲ ಕಾಮೆಂಟ್​ಗಳನ್ನು ಮಾಡಿದ್ದಾರೆ. ವಿಜಯಲಕ್ಷ್ಮೀ ಅವರ ಪೋಸ್ಟ್​ನಲ್ಲಂತೂ ಬರೀ ಪವಿತ್ರಾ ವಿರುದ್ಧ ಕೆಟ್ಟ ಕೆಟ್ಟ ಕಾಮೆಂಟ್​ಗಳಿಂದಲೇ ತುಂಬಿವೆ. ಬಳಸಬಾರದಂತ ಪದಗಳನ್ನೆಲ್ಲ ಕೆಲ ನೆಟ್ಟಿಗರು ಬಳಸಿದ್ದಾರೆ. ಕಾಮೆಂಟ್​ಗಳನ್ನು ನೋಡಿರುವ ಪವಿತ್ರಾ ತುಂಬಾ ಯೋಚನೆ ಮಾಡಿ, ಹೀಗೆ ಇದ್ದರೆ ಇನ್ನಷ್ಟು ನಿಂದನೆಗಳನ್ನು ಕೇಳಬೇಕಾಗುತ್ತದೆ ಎಂದು ವಿಜಯಲಕ್ಷ್ಮೀ ಮಾಡಿದ ಪೋಸ್ಟ್​ಗೆ ಒಂದು ದಿನದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ತನ್ನದು ಯಾವುದೇ ತಪ್ಪಿಲ್ಲ ಎಂದು ಹೇಳಿಕೊಂಡಿದ್ದಾರೆ. ಏಕೆಂದರೆ, ವಿಜಯಲಕ್ಷ್ಮೀ ಅವರ ಮೇಲೆ ನೆಟ್ಟಿಗರು ಭಾರಿ ಕರುಣೆ ಹೊಂದಿದ್ದು, ಪವಿತ್ರಾರನ್ನು ವಿಲನ್ ರೀತಿ ನೋಡುತ್ತಿದ್ದಾರೆ. ಹೀಗಾಗಿ ನಮ್ಮದು ಒಪ್ಪಿತ ಸಂಬಂಧ ಮತ್ತು ವಿಜಯಲಕ್ಷ್ಮೀಗೂ ಈ ಬಗ್ಗೆ ಗೊತ್ತಿದೆ ಎನ್ನುವ ಮೂಲಕ ನೆಟ್ಟಿಗರಿಗೆ ಪರೋಕ್ಷವಾಗಿ ತನ್ನದು ಯಾವುದೇ ತಪ್ಪಿಲ್ಲ ಎಂದಿದ್ದಾರೆ. ತಾವು ಮಾಡಿರುವ ಪೋಸ್ಟ್​ನಲ್ಲಿ ವಿಶೇಷವಾಗಿ ಕಾಮೆಂಟ್​ಗಳನ್ನು ಓದಿ ಮನಸ್ಸಿಗೆ ತುಂಬಾ ನೋವಾಯಿತು ಎಂದು ಪವಿತ್ರಾ ಹೇಳಿಕೊಂಡಿರುವುದನ್ನು ಗಮನಿಸಬಹುದು.​

    ಮತ್ತೆ ಬೀದಿಗೆ ಬಿದ್ದ ಸಂಸಾರದ ಗಲಾಟೆ
    ದರ್ಶನ್​ ಮತ್ತು ಪವಿತ್ರಾ ವಿಚಾರ ಬಹುದಿನಗಳಿಂದಲೂ ಹರಿದಾಡುತ್ತಿದೆ. ನಿನ್ನೆಯಷ್ಟೇ ವಿಜಯಲಕ್ಷ್ಮೀ ತಮ್ಮ ಪುತ್ರ ಮತ್ತು ಪತಿ ದರ್ಶನ್​ ಜತೆಗಿರುವ ಫೋಟೋವನ್ನು ಶೇರ್​ ಮಾಡಿಕೊಂಡು, ಇದು ನಾವು, ನಮ್ಮದು ಮತ್ತು ನಮ್ಮದು ಮಾತ್ರ ಎಂದು ಬರೆದುಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪವಿತ್ರಾ ಗೌಡ ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿ, ಒಂದು ದಶಕ ಕಳೆಯಿತು ಮತ್ತು ಶಾಶ್ವತವಾಗಿ ಹೋಗುವುದು. ನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ದರ್ಶನ್​ ಜತೆಗಿರುವ ಫೊಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ದೃಢಪಡಿಸುವ ಮೂಲಕ ವಿಜಯಲಕ್ಷ್ಮೀಗೆ ಟಾಂಗ್​ ಕೊಟ್ಟರು.

    ಇದಾದ ಬೆನ್ನಲ್ಲೇ ಸಿಡಿದೆದ್ದ ವಿಜಯಲಕ್ಷ್ಮೀ, ಪವಿತ್ರಾ ಗೌಡಳ ಹಳೆಯ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟು ತಿರುಗೇಟು ನೀಡಿದರು. ಇಲ್ಲಿಯವರೆಗೂ ಪವಿತ್ರಾ ಬಗ್ಗೆ ಮಾತ್ರ ಜನರಿಗೆ ಗೊತ್ತಿತ್ತು. ಆದರೆ ಈಗ ಪವಿತ್ರಾಳ ಗಂಡನ ಫೋಟೋವನ್ನು ಸಹ ವಿಜಯಲಕ್ಷ್ಮೀ ಹಂಚಿಕೊಂಡಿದ್ದಾರೆ. ಅಲ್ಲದೆ ಪವಿತ್ರಾ ಗೌಡ ಹೆಸರನ್ನು ಉಲ್ಲೇಖಿಸಿಯೇ ವಿಜಯಲಕ್ಷ್ಮೀ ಸರಿಯಾಗಿ ತಿರುಗೇಟು ನೀಡಿದ್ದಾರೆ. ದೂರು ನೀಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

    ವಿಜಯಲಕ್ಷ್ಮೀ ಹೇಳಿದ್ದೇನು?
    ಬೇರೊಬ್ಬರ ಪತಿಯ ಫೋಟೋವನ್ನು ಪೋಸ್ಟ್​ ಮಾಡುವ ಮುನ್ನ ಈ ಮಹಿಳೆ(ಪವಿತ್ರಾ ಗೌಡ) ಗೆ ತನ್ನ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಈ ರೀತಿ ಪೋಸ್ಟ್​ ಮಾಡುವುದು ಆಕೆಯ ವ್ಯಕ್ತಿತ್ವ, ನಡತೆ ಮತ್ತು ನೈತಿಕ ನಿಲುವಿನ ಬಗ್ಗೆ ಹೇಳುತ್ತದೆ. ಆ ಪುರುಷ ವಿವಾಹಿತನಾಗಿದ್ದರೂ ಆಕೆ ಇನ್ನೂ ಕೂಡ ತನ್ನ ವೈಯಕ್ತಿಕ ಅಗತ್ಯತೆಗಳು ಮತ್ತು ಅಜೆಂಡಾ ಈಡೇರಿಕೆಗಾಗಿ ಅದನ್ನೇ ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾಳೆ. ಖುಷಿ ಗೌಡ, ಪವಿತ್ರಾ ಗೌಡ ಹಾಗೂ ಸಂಜಯ್​ ಸಿಂಗ್​ ಮಗಳು ಎಂಬುದನ್ನು ಈ ಫೋಟೋಗಳು ಸ್ಪಷ್ಟವಾಗಿ ನಿರೂಪಿಸುತ್ತವೆ. ಸಾಮಾನ್ಯವಾಗಿ ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವುದಿಲ್ಲ. ಆದರೆ, ನನ್ನ ಕುಟುಂಬ ಹಿತಾಸಕ್ತಿಗಾಗಿ ಧ್ವನಿ ಎತ್ತಲು ಇದು ಸೂಕ್ತ ಸಮಯ ಎಂದು ನನಗೆ ಅನಿಸುತ್ತಿದೆ. ಫೋಟೋಗಳನ್ನು ಶೇರ್​ ಮಾಡುವ ಮೂಲಕ ಸಮಾಜಕ್ಕೆ ಬೇರೆ ಕಲ್ಪನೆ ಬಿತ್ತುತ್ತಿರುವ ಜನರ ವಿರುದ್ಧ ನಾನು ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ಮತ್ತು ಸಂಜಯ್​ ಸಿಂಗ್​ ಫೋಟೋಗಳ ಸಮೇತ ಖಡಕ್​ ಎಚ್ಚರಿಕೆ ನೀಡಿರುವ ವಿಜಯಲಕ್ಷ್ಮೀ, ಸಂಜಯ್​ ಸಿಂಗ್​, ಖುಷಿಗೌಡ ಹಾಗೂ ಪವಿತ್ರಾ ಗೌಡಗೆ ಟ್ಯಾಗ್​ ಮಾಡಿದ್ದಾರೆ.

    ಪವಿತ್ರಾ ತಿರುಗೇಟು ಏನು?
    ನಾನು ಪವಿತ್ರ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಜೀವನದಲ್ಲಿ ಉಂಟಾದ ಕೆಲವು ಸಮಸ್ಯೆಯಿಂದ ನಾನು ಸಂಜಯ್ ಅವರಿಂದ ಡಿವೋರ್ಸ್​​ ಪಡೆದಿದ್ದೇನೆ. ಇಲ್ಲಿಯವರೆಗೂ ಖುಷಿ ಗೌಡ, ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ. ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ, ಸಂತೋಷವಾಗಿದ್ದೀವಿ. ದಯವಿಟ್ಟು ಇದನ್ನು ವಿಶೇಷವಾಗಿ ಗಮನಿಸಿ, ನಾನಿಲ್ಲಿ ಯಾವುದೇ ವೈಯಕ್ತಿಕ ಲಾಭ ಅಥವಾ ಅಜೆಂಡಾಗೋಸ್ಕರ ಇಲ್ಲಿಲ್ಲ, ಇದು 10 ವರ್ಷಗಳ ಕಾಲ ಶುದ್ಧ ಪ್ರೀತಿ ಮತ್ತು ಕಾಳಜಿಯ ಬಗ್ಗೆ. ಇದು ಸುಲಭವಲ್ಲ, ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ. ಈ ವಿಚಾರವಾಗಿ ವಿಜಯಲಕ್ಷ್ಮಿ ಅವರೇ ನನಗೆ ಹಲವಾರು ಬಾರಿ ಕರೆ ಮಾಡಿ ನನ್ನ ಬಳಿ ಮಾತನಾಡಿದ್ದು ತಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲವೆಂದು ತಿಳಿಸಿರುತ್ತಾರೆ. (ಅದರ ಕೆಲವು ಸಾಕ್ಷಿ ಹಾಗೂ ನನ್ನ ನನ್ನ ವಿಚ್ಛೇದನದ ಪತ್ರವನ್ನು ಸಮಯ ಬಂದಾಗ ಹಂಚಿಕೊಳ್ಳುತ್ತೇನೆ). ಇದೀಗ ವಿಜಯಲಕ್ಷ್ಮಿ ಅವರು ನನ್ನ ವಿರುದ್ಧವಾಗಿ ಪೋಸ್ಟ್​​ಗಳನ್ನು ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. ನನ್ನ ಹಾಗೂ ನನ್ನ ಮಗಳಾದ ಖುಷಿ ಗೌಡಳ ಬಗ್ಗೆ Vijayalakshmi darshan ಎಂಬ ಇನ್​ಸ್ಟಾಗ್ರಾಮ್​​ನಲ್ಲಿ ಬಹಳಷ್ಟು ಜನ ಕೆಟ್ಟ ಪದಗಳಿಂದ ನಿಂದಿಸುವುದು ನನಗೆ ಮಾನಸಿಕ ನೋವು ಉಂಟುಮಾಡಿದೆ. ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ ವಯಕ್ತಿಕ ಪೋಟೋಗಳು ಶೇರ್​ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ ಈ ಮೂಲಕ ನಾನು ಹೇಳುವುದೇನೆಂದರೆ ನನಗೂ ಕಾನೂನು ಕ್ರಮ ತೆಗೆದುಕೊಳ್ಳುವ ಹಕ್ಕು ಇದೆ. ಆದರೂ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ! ಕಾರಣ ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ. ಅವರ ನಡುವಿನ ಸಮಸ್ಯೆಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ನಾನು ಮುಂಚೆಯೇ ಅವರ ಜೀವನದಲ್ಲಿ ಬಂದೆ. ದಯವಿಟ್ಟು ಅದನ್ನು ನೆನಪಿಸಿಕೊಳ್ಳಿ ಎಂದು @viji_darshsn ಅವರನ್ನು ಟ್ಯಾಗ್​ ಮಾಡಿದ್ದಾರೆ.

    ವಿಜಯಲಕ್ಷ್ಮೀಗೆ ನೆಟ್ಟಿಗರ ಬೆಂಬಲ
    ವಿಜಯಲಕ್ಷ್ಮೀ ಮಾಡಿರುವ ಪೋಸ್ಟ್​ಗೆ ನೆಟ್ಟಿಗರು ಬೆಂಬಲ ಸೂಚಿಸಿದ್ದು, ಪವಿತ್ರಾ ಗೌಡ ವಿರುದ್ಧ ಹರಿಹಾಯ್ದಿದ್ದಾರೆ. ತನ್ನ ಗಂಡನನ್ನು ಬಿಟ್ಟು, ಅವನ ಮಗಳನ್ನು ದುಡ್ಡಿಗೋಸ್ಕರ ಇನ್ನೊಬ್ಬರ ಗಂಡನ ಮಗಳಾಗಿ ಬಿಂಬಿಸಿದರೆ, ಪಾಪ ಪ್ರೀತಿಸಿ ಮದುವೆ ಆಗಿ ತನ್ನ ಗಂಡನಿಗೆ ಹುಟ್ಟಿದ ಮಗನನ್ನು ಸಾಕಿ ಸಲುಹಿ, ತಾನಾಯಿತು ತನ್ನ ಸಂಸಾರವಾಯಿತು ಅಂತ ಬದುಕುವವರು, ಇಂತಹ ಮನೆಹಾಳರಿಗೆ ತಮ್ಮ ಗಂಡನನ್ನು ಬಿಟ್ಟು ಕೊಟ್ಟು, ತಮಗೆ ಹುಟ್ಟಿದ ಮಗನಿಗೆ ನೋವು ಮಾಡಲು ಸಾಧ್ಯವೆ? ತಮ್ಮ ಸಂಸಾರ ಉಳಿಸಿಕೊಳ್ಳಲು ಯಾವುದೇ ಹೆಣ್ಣು ಕೊನೆಗೆ ವಿಧಿ ಇಲ್ಲದೆ ಇದನ್ನಷ್ಟೇ ಮಾಡಬಲ್ಲರು. ವಿಜಿ ಅತ್ತಿಗೆಯವರನ್ನು ಒಂದು ಹೆಣ್ಣಾಗಿ ಎಷ್ಟು ನೋವು ಪಡುತ್ತಿರಬಹುದು ಅನ್ನೋದನ್ನು ಅರ್ಥ ಮಾಡಿಕೊಂಡರೆ ಸಾಕು, ಸೆಲೆಬ್ರಿಟಿ ಹೆಂಡತಿಯಾಗಿ ಆಮೇಲೆ ಪರಿಗಣಿಸಿದರಾಯಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮೂಲಕ ತಿಳಿಸಿದ್ದಾರೆ.

    ಪವಿತ್ರಾ ಗೌಡ ಮಾಡಿದ್ದು ಸರಿಯಲ್ಲ, ಒಂದು ಸಂಸಾರವನ್ನು ಹಾಳು ಮಾಡಬಾರದು. ದುಡ್ಡಿಗಾಗಿ ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದು. ತಾಳಿ ಕಟ್ಟಿದ ಗಂಡನಿಗೆ ಹುಟ್ಟಿದ ಮಗಳನ್ನು ಬೇರೊಬ್ಬ ಮಹಿಳೆಯ ಗಂಡನ ಮಗು ಹೇಳುವುದು ಎಂಥಾ ನೀಚ ಸಂಸ್ಕೃತಿ ಎಂದೆಲ್ಲ ನೆಟ್ಟಿಗರು ಕಾಮೆಂಟ್​ ಮೂಲಕ ಪವಿತ್ರಾ ಗೌಡ ವಿರುದ್ಧ ಕಿಡಿಕಾರಿದ್ದಾರೆ.

    ಖುಷಿ..ದರ್ಶನ್ ಮಗಳೆಂದು ನಾನು ಹೇಳಿಲ್ಲ; ನನಗೂ ಕಾನೂನು ಹೋರಾಟ ಮಾಡುವ ಹಕ್ಕಿದೆ..ಎಚ್ಚರಿಕೆ ನೀಡಿದ ಪವಿತ್ರಾ ಗೌಡ

    ವಿಜಯಲಕ್ಷ್ಮೀಗೆ ಟಾಂಗ್​​ ಕೊಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಪವಿತ್ರಾ! ಮುಚ್ಚಿಟ್ಟಿದ್ದ ರಹಸ್ಯ ಬಯಲು

    ಇನ್ಮುಂದೆ ಸುಮ್ಮನಿರಲ್ಲ… ಪರ್ಸನಲ್​ ಫೋಟೋಗಳನ್ನು ಹರಿಬಿಟ್ಟು ಪವಿತ್ರಾಗೆ ವಿಜಯಲಕ್ಷ್ಮೀ ಖಡಕ್​ ಎಚ್ಚರಿಕೆ!

    ದರ್ಶನ್ ಜತೆ ನಾನು ಇರೋದಕ್ಕೆ ತೊಂದ್ರೆ ಇಲ್ಲ ಅಂತ ವಿಜಯಲಕ್ಷ್ಮೀ ಹೇಳಿದ್ರು; ಖಡಕ್‌ ಉತ್ತರ ಕೊಟ್ಟ ಪವಿತ್ರ ಗೌಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts