More

  ಇನ್ಮುಂದೆ ಸುಮ್ಮನಿರಲ್ಲ… ಪರ್ಸನಲ್​ ಫೋಟೋಗಳನ್ನು ಹರಿಬಿಟ್ಟು ಪವಿತ್ರಾಗೆ ವಿಜಯಲಕ್ಷ್ಮೀ ಖಡಕ್​ ಎಚ್ಚರಿಕೆ!

  ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಫ್ಯಾಮಿಲಿ ಮ್ಯಾಟರ್​ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಟಿ ಪವಿತ್ರಾ ಗೌಡ ಮತ್ತು ದರ್ಶನ್ ಹೆಸರು ಆಗಾಗ ಕೇಳಿಬರುತ್ತಲೇ ಇತ್ತು. ಆದರೆ, ಅಷ್ಟೇ ಬೇಗ ಮರೆಯಾಗುತ್ತಿತ್ತು. ದರ್ಶನ್​ ಪತ್ನಿ ವಿಜಯಲಕ್ಷ್ಮೀ ಕೂಡ ಕೆಲವು ಸಂದರ್ಭಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದರೂ ಯಾರೊಬ್ಬರ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಟಾಂಗ್​ ಕೊಡುತ್ತಿದ್ದರು. ಆದರೆ, ತಾಳ್ಮೆಯ ಕಟ್ಟೆ ಹೊಡೆದಂತೆ ಇದೀಗ ವಿಜಯಲಕ್ಷ್ಮೀ ಜೋರಾಗಿಯೇ ಧ್ವನಿಯೇರಿಸಿದ್ದಾರೆ.

  ಇನ್​ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡ ಹೆಸರನ್ನು ಉಲ್ಲೇಖಿಸಿಯೇ ವಿಜಯಲಕ್ಷ್ಮೀ ಸರಿಯಾಗಿ ತಿರುಗೇಟು ನೀಡಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ವಿಜಯಲಕ್ಷ್ಮೀ ಇದೀಗ ಏಕಾಏಕಿ ಕೆಂಡಕಾರಲು ಕಾರಣವೂ ಇದೆ. ಅದೇನೆಂದರೆ, ಪವಿತ್ರಾ ಗೌಡ, ದರ್ಶನ್​ ಕುರಿತಾಗಿ ಮಾಡಿರುವ ಪೋಸ್ಟ್​. ನಮ್ಮಿಬ್ಬರ ಸಂಬಂಧ 10 ವರ್ಷ ಪೂರೈಸಿದೆ. ಥ್ಯಾಂಕ್​ ಯು ಎಂದು ಹೇಳಿ ದರ್ಶನ್ ಜತೆಗಿನ ಫೋಟೋಗಳನ್ನು ಶೇರ್​ ಮಾಡಿಕೊಂಡು​ ಇನ್​ಸ್ಟಾಗ್ರಾಂನಲ್ಲಿ ದರ್ಶನ್​ಗೂ ಟ್ಯಾಗ್​ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಇನ್​​ಸ್ಟಾಗ್ರಾಂ ಮೂಲಕ ಧ್ವನಿ ಎತ್ತಿದ್ದು, ದೂರು ನೀಡುವುದಾಗಿ ಪವಿತ್ರಾ ಗೌಡಗೆ ಎಚ್ಚರಿಕೆ ನೀಡಿದ್ದಾರೆ.

  ವಿಜಯಲಕ್ಷ್ಮೀ ಹೇಳಿದ್ದೇನು?
  ಬೇರೊಬ್ಬರ ಪತಿಯ ಫೋಟೋವನ್ನು ಪೋಸ್ಟ್​ ಮಾಡುವ ಮುನ್ನ ಈ ಮಹಿಳೆ(ಪವಿತ್ರಾ ಗೌಡ) ಗೆ ತನ್ನ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಈ ರೀತಿ ಪೋಸ್ಟ್​ ಮಾಡುವುದು ಆಕೆಯ ವ್ಯಕ್ತಿತ್ವ, ನಡತೆ ಮತ್ತು ನೈತಿಕ ನಿಲುವಿನ ಬಗ್ಗೆ ಹೇಳುತ್ತದೆ. ಆ ಪುರುಷ ವಿವಾಹಿತನಾಗಿದ್ದರೂ ಆಕೆ ಇನ್ನೂ ಕೂಡ ತನ್ನ ವೈಯಕ್ತಿಕ ಅಗತ್ಯತೆಗಳು ಮತ್ತು ಅಜೆಂಡಾ ಈಡೇರಿಕೆಗಾಗಿ ಅದನ್ನೇ ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾಳೆ. ಖುಷಿ ಗೌಡ, ಪವಿತ್ರಾ ಗೌಡ ಹಾಗೂ ಸಂಜಯ್​ ಸಿಂಗ್​ ಮಗಳು ಎಂಬುದನ್ನು ಈ ಫೋಟೋಗಳು ಸ್ಪಷ್ಟವಾಗಿ ನಿರೂಪಿಸುತ್ತವೆ. ಸಾಮಾನ್ಯವಾಗಿ ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವುದಿಲ್ಲ. ಆದರೆ, ನನ್ನ ಕುಟುಂಬ ಹಿತಾಸಕ್ತಿಗಾಗಿ ಧ್ವನಿ ಎತ್ತಲು ಇದು ಸೂಕ್ತ ಸಮಯ ಎಂದು ನನಗೆ ಅನಿಸುತ್ತಿದೆ. ಫೋಟೋಗಳನ್ನು ಶೇರ್​ ಮಾಡುವ ಮೂಲಕ ಸಮಾಜಕ್ಕೆ ಬೇರೆ ಕಲ್ಪನೆ ಬಿತ್ತುತ್ತಿರುವ ಜನರ ವಿರುದ್ಧ ನಾನು ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ಮತ್ತು ಸಂಜಯ್​ ಸಿಂಗ್​ ಫೋಟೋಗಳ ಸಮೇತ ಖಡಕ್​ ಎಚ್ಚರಿಕೆ ನೀಡಿರುವ ವಿಜಯಲಕ್ಷ್ಮೀ, ಸಂಜಯ್​ ಸಿಂಗ್​, ಖುಷಿಗೌಡ ಹಾಗೂ ಪವಿತ್ರಾ ಗೌಡಗೆ ಟ್ಯಾಗ್​ ಮಾಡಿದ್ದಾರೆ.

  ವಿಜಯಲಕ್ಷ್ಮೀಗೆ ನೆಟ್ಟಿಗರ ಬೆಂಬಲ
  ವಿಜಯಲಕ್ಷ್ಮೀ ಮಾಡಿರುವ ಪೋಸ್ಟ್​ಗೆ ನೆಟ್ಟಿಗರು ಬೆಂಬಲ ಸೂಚಿಸಿದ್ದು, ಪವಿತ್ರಾ ಗೌಡ ವಿರುದ್ಧ ಹರಿಹಾಯ್ದಿದ್ದಾರೆ. ತನ್ನ ಗಂಡನನ್ನು ಬಿಟ್ಟು, ಅವನ ಮಗಳನ್ನು ದುಡ್ಡಿಗೋಸ್ಕರ ಇನ್ನೊಬ್ಬರ ಗಂಡನ ಮಗಳಾಗಿ ಬಿಂಬಿಸಿದರೆ, ಪಾಪ ಪ್ರೀತಿಸಿ ಮದುವೆ ಆಗಿ ತನ್ನ ಗಂಡನಿಗೆ ಹುಟ್ಟಿದ ಮಗನನ್ನು ಸಾಕಿ ಸಲುಹಿ, ತಾನಾಯಿತು ತನ್ನ ಸಂಸಾರವಾಯಿತು ಅಂತ ಬದುಕುವವರು, ಇಂತಹ ಮನೆಹಾಳರಿಗೆ ತಮ್ಮ ಗಂಡನನ್ನು ಬಿಟ್ಟು ಕೊಟ್ಟು, ತಮಗೆ ಹುಟ್ಟಿದ ಮಗನಿಗೆ ನೋವು ಮಾಡಲು ಸಾಧ್ಯವೆ? ತಮ್ಮ ಸಂಸಾರ ಉಳಿಸಿಕೊಳ್ಳಲು ಯಾವುದೇ ಹೆಣ್ಣು ಕೊನೆಗೆ ವಿಧಿ ಇಲ್ಲದೆ ಇದನ್ನಷ್ಟೇ ಮಾಡಬಲ್ಲರು. ವಿಜಿ ಅತ್ತಿಗೆಯವರನ್ನು ಒಂದು ಹೆಣ್ಣಾಗಿ ಎಷ್ಟು ನೋವು ಪಡುತ್ತಿರಬಹುದು ಅನ್ನೋದನ್ನು ಅರ್ಥ ಮಾಡಿಕೊಂಡರೆ ಸಾಕು, ಸೆಲೆಬ್ರಿಟಿ ಹೆಂಡತಿಯಾಗಿ ಆಮೇಲೆ ಪರಿಗಣಿಸಿದರಾಯಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮೂಲಕ ತಿಳಿಸಿದ್ದಾರೆ.

  ಪವಿತ್ರಾ ಗೌಡ ಮಾಡಿದ್ದು ಸರಿಯಲ್ಲ, ಒಂದು ಸಂಸಾರವನ್ನು ಹಾಳು ಮಾಡಬಾರದು. ದುಡ್ಡಿಗಾಗಿ ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದು. ತಾಳಿ ಕಟ್ಟಿದ ಗಂಡನಿಗೆ ಹುಟ್ಟಿದ ಮಗಳನ್ನು ಬೇರೊಬ್ಬ ಮಹಿಳೆಯ ಗಂಡನ ಮಗು ಹೇಳುವುದು ಎಂಥಾ ನೀಚ ಸಂಸ್ಕೃತಿ ಎಂದೆಲ್ಲ ನೆಟ್ಟಿಗರು ಕಾಮೆಂಟ್​ ಮೂಲಕ ಪವಿತ್ರಾ ಗೌಡ ವಿರುದ್ಧ ಕಿಡಿಕಾರಿದ್ದಾರೆ.

  ಕಾಮೆಂಟ್​ ಬಾಕ್ಸ್​ ಲಾಕ್​
  ಇನ್ನು ಪವಿತ್ರಾ ಗೌಡ 10 ವರ್ಷದ ಸಂಬಂಧ ಎಂದು ಹೇಳಿ ದರ್ಶನ್​ ಜತೆಗಿರುವ ಫೋಟೋಗಳನ್ನು ಕೊಲ್ಯಾಜ್​ ಮಾಡಿ ವಿಡಿಯೋ ರೂಪದಲ್ಲಿ ಪೋಸ್ಟ್​ ಮಾಡಿದ್ದಾರೆ. ಆದರೆ, ಭಾರೀ ವಿರೋಧ ವ್ಯಕ್ತವಾಗುತ್ತದೆ ಅಂತಾ ಗೊತ್ತಿದ್ದೇ ಕಾಮೆಂಟ್​ ಬಾಕ್ಸ್​ ಲಾಕ್​ ಮಾಡಿದ್ದಾರೆ.

  ಬರ್ತಡೇ ಸೆಲೆಬ್ರೇಷನ್​
  ಕೆಲವು ದಿನಗಳ ಹಿಂದೆ ನಟ ದರ್ಶನ್​ ಪವಿತ್ರಾ ಗೌಡ ಮಗಳು ಖುಷಿ ಗೌಡ ಬರ್ತಡೇ ಆಚರಣೆಯಲ್ಲಿ ಭಾಗವಹಿಸಿ, ಆಕೆಯೊಂದಿಗೆ ಡಾನ್ಸ್​ ಮಾಡಿದ ವಿಡಿಯೋ ವೈರಲ್​ ಆಗಿತ್ತು. ಆದರೆ, ಇದು ಹೆಚ್ಚು ಸುದ್ದಿಯಾಗಲಿಲ್ಲ. ವಿಡಿಯೋ ಮಾತ್ರ ಎಲ್ಲಡೆ ಹರಿದಾಡಿತು.

  ದರ್ಶನ್​ ಹುಟ್ಟುಹಬ್ಬ ಆಚರಣೆ
  ಕಳೆದ ಫೆಬ್ರವರಿಯಲ್ಲಿ ಪವಿತ್ರಾ ಗೌಡ ಅವರು ದರ್ಶನ್​ ಹುಟ್ಟುಹಬ್ಬ ಆಚರಣೆ ಮಾಡಿದ ವಿಡಿಯೋವನ್ನು ನಟಿ ಮೇಘ ಶೆಟ್ಟಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದಾಗಲೂ ವಿಜಯಲಕ್ಷ್ಮೀ ಧ್ವನಿ ಏರಿಸಿದ್ದರು. ಇದರಿಂದ ಹೆದರಿದ ಮೇಘ ಶೆಟ್ಟಿ ತಕ್ಷಣ ವಿಡಿಯೋ ಡಿಲೀಟ್​ ಮಾಡಿದ್ದರು.

  ಇನ್ನು ದರ್ಶನ್​ ಮತ್ತು ಪವಿತ್ರಾ ಗೌಡ ವಿಚಾರ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಆದರೆ, ಈ ಬಾರಿ ವಿಜಯಲಕ್ಷ್ಮೀ ಅವರೆ ಕಾನೂನು ಹೋರಾಟ ಮಾಡುವುದಾಗಿ ಕರೆ ನೀಡಿದ್ದು, ಮುಂದೆ ಈ ಪ್ರಕರಣ ಯಾವ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

  ಉದ್ಯಮಿ ಜತೆ ಅಫೇರ್​; ಪತಿಗೆ ಡಿವೋರ್ಸ್​ ಕೊಡಲು ಮುಂದಾದ ನಮಿತಾ!? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

  ಅವರೇನೋ ಕೇಳ್ಬಿಟ್ರು ಆದ್ರೆ ನನ್ನಿಂದ ರೂಮ್​ನಿಂದ ಹೊರಗೆ ಬರಲು ಆಗಲಿಲ್ಲ: ನಟಿ ಮೀನಾ ಓಪನ್​ ಟಾಕ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts