More

    ಖುಷಿ..ದರ್ಶನ್ ಮಗಳೆಂದು ನಾನು ಹೇಳಿಲ್ಲ; ನನಗೂ ಕಾನೂನು ಹೋರಾಟ ಮಾಡುವ ಹಕ್ಕಿದೆ..ಎಚ್ಚರಿಕೆ ನೀಡಿದ ಪವಿತ್ರಾ ಗೌಡ

    ಬೆಂಗಳೂರು: ಸ್ಯಾಂಡಲ್​ವುಡ್​​ ನಟ ದರ್ಶನ್‌ ಮತ್ತು ನಟಿ ಪವಿತ್ರಾ ಗೌಡರ ಒಟ್ಟಿಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ಫೋಟೋ ವೈರಲ್​ ಆಗುತ್ತಿದ್ದಂತೆ ದರ್ಶನ್​ ಪತ್ನಿ ವಿಜಯಲಕ್ಷ್ಮೀ ನಟಿ ಪವಿತ್ರಾ ವಿರುದ್ಧ ಕಿಡಿಕಾರಿ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​​ ಮಾಡಿದ್ದರು. ಈ ಬೆನ್ನಲ್ಲೆ ಪವಿತ್ರಾ ಮತ್ತೊಂದು ಪೋಸ್ಟ್​ ಮಾಡಿ ಕೆಲವು ವಿಚಾರಗಳಿಗೆ  ಸ್ಪಷ್ಟನೆ ನೀಡಿದ್ದಾರೆ.

    ಪವಿತ್ರಾ ಗೌಡಾ ಇನ್​ಸ್ಟಾಗ್ರಾಮ್​ ಮೂಲಕ ಹೇಳಿದ್ದೇನು?: ನಾನು ಪವಿತ್ರ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ life ನಲ್ಲಿ ಉಂಟಾದ ಕೆಲವು ಸಮಸ್ಯೆಯಿಂದ ಇಂದ ನಾನು ಸಂಜಯ್ ಅವರಿಂದ ಡಿವೊರ್ಸ್​​ ಪಡೆದಿದ್ದೇನೆ. ಇಲ್ಲಿಯ ವರಗೂ ಖುಷಿ ಗೌಡ ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ. ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ. plz Note this “I’m not here for any own personal needs and agenda”it’s all about pure love and care being for 10years it’s not at all easy ,,ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ ಈ ವಿಚಾರವಾಗಿ ವಿಜಯಲಕ್ಷ್ಮಿರವರೆ ನನಗೆ ಹಲವಾರು ಸಾರಿ ಕರೆ ಮಾಡಿ ನನ್ನ ಬಳಿ ಮಾತನಾಡಿದ್ದು ವಿಜಯಲಕ್ಷ್ಮಿರವರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲವೆಂದು ತಿಳಿಸಿರುತ್ತಾರೆ. (ಅದರ ಕೆಲವು ಸಾಕ್ಷಿ ಹಾಗೂ ನನ್ನ ನನ್ನ ವಿಚ್ಛೇದನದ ಪತ್ರವನ್ನು ಸಮಯ ಬಂದಾಗ ಹಂಚಿಕೊಳ್ಳುತ್ತೇನೆ). ಇದೀಗ ವಿಜಯಲಕ್ಷ್ಮಿರವರು ನನ್ನ ವಿರುದ್ಧವಾಗಿ  ಪೋಸ್ಟ್​​ಗಳನ್ನು ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. ನನ್ನ ಹಾಗೂ ನನ್ನ teenage ಮಗಳಾದ ಖುಷಿ ಗೌಡಳ ಬಗ್ಗೆ Vijayalakshmi darshan ಯಂಬ instagram post ನಲ್ಲಿ ಬಹಳಷ್ಟು ಜನ bad language ಇಂದ ನಿಂದಿಸುವುದು ನನಗೆ ಮಾನಸಿಕ ನೋವು ಉಂಟುಮಾಡಿದೇ. ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ personal photos post ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ ಈ ಮೂಲಕ ನಾನು ಹೇಳುವುದೇನೆಂದರೆ ನನಗೂ legal action ತಗೊಳೋ ಹಕ್ಕು ಇದೆ ,ಆದರೂ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ..ಕಾರಣ ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ. I hope you alll know about problems between them, what and all he had gone through.Even before,I came in to his life,. plz Recalll it 🙏 @viji_darshsn ದೆಂದು ಟ್ಯಾಗ್​ ಮಾಡಿದ್ದಾರೆ.

    Darshan

    ದರ್ಶನ್ ಜತೆ ಪವಿತ್ರಾ ಗೌಡ ಹೆಸರು ಸೇರಿಕೊಂಡಿರುವುದು ಈಗೇನಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ದರ್ಶನ್ ಜತೆ ಪವಿತ್ರಾ ಗೌಡ ಹೆಸರು ಗಾಂಧಿನಗರದಲ್ಲಿ ಓಡಾಡುತ್ತಿದೆ. ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರೀಯರಾಗಿದ್ದಾರೆ. ಆಗಾಗ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪವಿತ್ರಾ ಗೌಡ ದರ್ಶನ್‌ ಜೊತೆಗಿರುವ ಒಂದೊಂದೆ ಫೋಟೋ ಅಪ್ಲೋಡ್ ಮಾಡಿ ಸುಳಿವು ನೀಡುತ್ತಿದ್ದರು. ದರ್ಶನ್ ಮತ್ತು ಪವಿತ್ರಾ ಗೌಡ ಬಗ್ಗೆ ಗುಸುಗುಸು ಕೇಳಿಬರುತ್ತಿರುವಾಗಲೇ ದರ್ಶನ್ ಜತೆಗಿನ ಫೋಟೋ ಶೇರ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ದರ್ಶನ್ ಜತೆ ಪವಿತ್ರಾ ಆಪ್ತವಾಗಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

    ನಮ್ಮಿಬ್ಬರ ಸಂಬಂಧ 10 ವರ್ಷ ಪೂರೈಸಿದೆ. ಥ್ಯಾಂಕ್​ ಯು ಎಂದು ಹೇಳಿ ದರ್ಶನ್ ಜತೆಗಿನ ಫೋಟೋಗಳನ್ನು ಶೇರ್​ ಮಾಡಿಕೊಂಡು​ ಇನ್​ಸ್ಟಾಗ್ರಾಂನಲ್ಲಿ ದರ್ಶನ್​ಗೂ ಪವಿತ್ರಾ ಗೌಡಾ ಟ್ಯಾಗ್​ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಇನ್​​ಸ್ಟಾಗ್ರಾಂ ಮೂಲಕ ಧ್ವನಿ ಎತ್ತಿದ್ದು, ದೂರು ನೀಡುವುದಾಗಿ ಪವಿತ್ರಾ ಗೌಡಗೆ ಎಚ್ಚರಿಕೆ ನೀಡಿದ್ದಾರೆ.

    ವಿಜಯಲಕ್ಷ್ಮೀ ಹೇಳಿದ್ದೇನು?
    ಬೇರೊಬ್ಬರ ಪತಿಯ ಫೋಟೋವನ್ನು ಪೋಸ್ಟ್​ ಮಾಡುವ ಮುನ್ನ ಈ ಮಹಿಳೆ(ಪವಿತ್ರಾ ಗೌಡ)ಗೆ ತನ್ನ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಈ ರೀತಿ ಪೋಸ್ಟ್​ ಮಾಡುವುದು ಆಕೆಯ ವ್ಯಕ್ತಿತ್ವ, ನಡತೆ ಮತ್ತು ನೈತಿಕ ನಿಲುವಿನ ಬಗ್ಗೆ ಹೇಳುತ್ತದೆ. ಆ ಪುರುಷ ವಿವಾಹಿತನಾಗಿದ್ದರೂ ಆಕೆ ಇನ್ನೂ ಕೂಡ ತನ್ನ ವೈಯಕ್ತಿಕ ಅಗತ್ಯತೆಗಳು ಮತ್ತು ಅಜೆಂಡಾ ಈಡೇರಿಕೆಗಾಗಿ ಅದನ್ನೇ ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾಳೆ. ಖುಷಿ ಗೌಡ, ಪವಿತ್ರಾ ಗೌಡ ಹಾಗೂ ಸಂಜಯ್​ ಸಿಂಗ್​ ಮಗಳು ಎಂಬುದನ್ನು ಈ ಫೋಟೋಗಳು ಸ್ಪಷ್ಟವಾಗಿ ನಿರೂಪಿಸುತ್ತವೆ. ಸಾಮಾನ್ಯವಾಗಿ ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವುದಿಲ್ಲ. ಆದರೆ, ನನ್ನ ಕುಟುಂಬ ಹಿತಾಸಕ್ತಿಗಾಗಿ ಧ್ವನಿ ಎತ್ತಲು ಇದು ಸೂಕ್ತ ಸಮಯ ಎಂದು ನನಗೆ ಅನಿಸುತ್ತಿದೆ. ಫೋಟೋಗಳನ್ನು ಶೇರ್​ ಮಾಡುವ ಮೂಲಕ ಸಮಾಜಕ್ಕೆ ಬೇರೆ ಕಲ್ಪನೆ ಬಿತ್ತುತ್ತಿರುವ ಜನರ ವಿರುದ್ಧ ನಾನು ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ಮತ್ತು ಸಂಜಯ್​ ಸಿಂಗ್​ ಫೋಟೋಗಳ ಸಮೇತ ಖಡಕ್​ ಎಚ್ಚರಿಕೆ ನೀಡಿರುವ ವಿಜಯಲಕ್ಷ್ಮೀ, ಸಂಜಯ್​ ಸಿಂಗ್​, ಖುಷಿಗೌಡ ಹಾಗೂ ಪವಿತ್ರಾ ಗೌಡಗೆ ಟ್ಯಾಗ್​ ಮಾಡಿದ್ದಾರೆ. ಸ್ಯಾಂಡಲ್​​ವುಡ್​​ ನಟ ದರ್ಶನ್​​ ಅವರ ಸಂಸಾರ  ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

    ದರ್ಶನ್​ ಜತೆ 10 ವರ್ಷದಿಂದ ಸಂಬಂಧ; ವಿವಾದ ಹುಟ್ಟುಹಾಕಿದ ಈ ಪವಿತ್ರಾ ಗೌಡ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts