ಹೈದರಾಬಾದ್: ನಿರ್ದೇಶಕ ಸುಕುಮಾರ್ ಅವರ 'ಪುಷ್ಪ: ದಿ ರೈಸ್' ಚಿತ್ರದ ಶೂಟಿಂಗ್ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆಯ ಸಂಕೇತವಾಗಿ ಸಿನಿಮಾ ಪ್ರೊಡಕ್ಷನ್ ವರ್ಕರ್ಸ್ಗೆ ತಲಾ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ. "ನನ್ನ ಸಿನಿಮಾದ ಪ್ರೊಡಕ್ಷನ್ ವರ್ಕರ್ಸ್ಗಳ ನಿರಂತರ ಬೆಂಬಲವನ್ನು ಶ್ಲಾಘಿಸಬೇಕಾಗಿದೆ. ಪ್ರೊಡಕ್ಷನ್ ಬಾಯ್ಗಳು, ಕ್ಯಾಮೆರಾಮೆನ್, ಲೈಟ್ ಮ್ಯಾನ್ಗಳು ಮತ್ತು ಇತರರು 'ಪುಷ್ಪ'ಗಾಗಿ ಹಗಲಿರುಳು ಒಟ್ಟಿಗೆ ಕೆಲಸ ಮಾಡಿದ್ದಾರೆ. ಹಾಗಾಗಿ, ಮೆಚ್ಚುಗೆಯ ಸಂಕೇತವಾಗಿ ನಾನು ಅವರಿಗೆ ಉಡುಗೊರೆಯನ್ನು ನೀಡಲು ಬಯಸುತ್ತೇನೆ. ಪ್ರೊಡಕ್ಷನ್ ವರ್ಕರ್ಸ್ಗಳಿಗೆ ತಲಾ 1 ಲಕ್ಷ ರೂ. ನೀಡಲಿದ್ದೇನೆ'' ಎಂದು ಸುಕುಮಾರ್ ಘೋಷಿಸಿದರು.