ಮುಂಬೈ: ನಟ ವಿಕ್ಕಿ ಕೌಶಲ್ ಅವರು ಇತ್ತೀಚೆಗೆ ಬಾಲಿವುಡ್ನ ಹಾಟ್ ನಟಿ ಕತ್ರಿನಾ ಕೈಫ್ ಅವರನ್ನು ಡಿ.9 ರಂದು ಮದುವೆಯಾಗಿದ್ದರು. ಸದ್ಯ ನಟ ಮಧ್ಯಪ್ರದೇಶದಲ್ಲಿ ತಮ್ಮ ಮುಂಬರುವ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಹಾಗಾಗಿ, ಚಿತ್ರದ ಶೂಟಿಂಗ್ ನಿಮಿತ್ತ ಇಂದೋರ್‌ನಲ್ಲಿರುವ ನಟ, ಹಲವು ಪ್ರಮುಖ ಬೀದಿಗಳಲ್ಲಿ ಬೈಕ್ ಓಡಿಸುತ್ತಿರುವ ತುಂಬಾ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಗಮನಾರ್ಹ ಎಂದರೆ ವಿಕ್ಕಿ ಜೊತೆ ನಟಿ ಸಾರಾ ಅಲಿ ಖಾನ್ ಕಾಣಿಸಿಕೊಂಡಿರುವುದು. ಹೌದು, ಸಾರಾ ಅಲಿ ಖಾನ್ ವಿಕ್ಕಿಯನ್ನು ತಬ್ಬಿಕೊಂಡು ಪಿಲಿಯನ್ ರೈಡ್ ಮಾಡುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.