ಮುಂಬೈ: ಕರೊನಾ ಮತ್ತೆ ಬಾಲಿವುಡ್ ಸೆಲೆಬ್ರಿಟಿಗಳನ್ನು ಕಾಡುತ್ತಿದೆ. ಹೌದು, ಇದೀಗ ನಟಿ ಕರೀನಾ ಕಪೂರ್ ಖಾನ್ ಮತ್ತು ಅಮೃತಾ ಅರೋರಾ ಅವರು ಕರೊನಾದಿಂದ ಚೇತರಿಸಿಕೊಂಡ ನಂತರ, ಕಪೂರ್ ಕುಟುಂಬದ ಇತರ ಸದಸ್ಯರಿಗೆ ಕರೊನಾ ವಕ್ಕರಿಸಿದೆ. ಅರ್ಜುನ್ ಕಪೂರ್, ಅಂಶುಲಾ ಕಪೂರ್, ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಅವರು ಸದ್ಯ ಕರೊನಾ ಪಾಸಿಟಿವ್ ಆಗಿದ್ದಾರೆ. ಇವರೆಲ್ಲ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಜೊತೆಗೆ, ನಟ ಅರ್ಜುನ್ ಕಪೂರ್ ಅವರ ಮನೆಯನ್ನು ಬಿಎಂಸಿ (BMC) ಸೀಲ್ಡೌನ್ ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ.