More

  ಆದಿಪುರುಷದಲ್ಲಿ ರಾವಣನ ಪಾತ್ರವನ್ನು ತೋರಿಸಿದ್ದು ಇಷ್ಟವಾಗಲಿಲ್ಲ: ‘ರಾಮಾಯಣ’ ಸೀತೆ

  ಮುಂಬೈ: `ಆದಿಪುರುಷ’ ಚಿತ್ರದಲ್ಲಿನ ಪಾತ್ರಧಾರಿಗಳ ವೇಷಭೂಷಣ ನೋಡಿ ತುಂಬಾ ನೋವಾಗಿದೆ ಎಂದು ಜನಪ್ರಿಯ ಕಿರುತೆರೆ ಧಾರಾವಾಹಿ ‘ರಾಮಾಯಣ’ದ ನಟಿ ದೀಪಿಕಾ ಚಿಖ್ಲಿಯಾ ಹೇಳಿದ್ದಾರೆ.

  ಇತ್ತೀಚೆಗೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

  ಇದನ್ನೂ ಓದಿ: ರಾಮೋಜಿ ಸ್ಫೂರ್ತಿಯಲ್ಲಿ ಆಂಧ್ರ ಅಭಿವೃದ್ಧಿ: ಚಂದ್ರಬಾಬು

  ಪ್ರಭಾಸ್ ನಾಯಕನಾಗಿ ನಟಿಸಿರುವ ಓಂರಾತ್ ನಿರ್ದೇಶನದ ಸಿನಿಮಾ ‘ಆದಿಪುರುಷ’. ಈ ಚಿತ್ರದ ಪಾತ್ರಧಾರಿಗಳ ವೇಷಭೂಷಣದ ವಿಚಾರದಲ್ಲಿ ಹಲವು ವಿವಾದಗಳು ಎದ್ದಿರುವುದು ಗೊತ್ತೇ ಇದೆ. ಇದರ ಭಾಗವಾಗಿಯೇ ದೀಪಿಕಾ ಚಿಖ್ಲಿಯಾ ಆ ಚಿತ್ರದ ಪಾತ್ರಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

  ‘ಆದಿಪುರುಷ’ ನೋಡಿದ ಮಕ್ಕಳು ರಾಮಾಯಣವೇ ಹೀಗೆ ಎಂದು ಭಾವಿಸುತ್ತಾರೆ. ಇದು ಭವಿಷ್ಯಕ್ಕೆ ಅಪಾಯಕಾರಿ. ಇದನ್ನು ತಿಳಿದರೆ ಮನಸ್ಸಿಗೆ ನೋವಾಗುತ್ತದೆ. ಈ ಚಿತ್ರದಲ್ಲಿ ತೋರಿಸಿದಂತೆ ರಾವಣ ಇಲ್ಲ ಎಂದು ಯಾರೂ ಅವರಿಗೆ ವಿವರಿಸುತ್ತಿಲ್ಲ. ಹಾಗಾಗಿ ರಾಮಾಯಣದಲ್ಲಿ ರಾಮ ಮತ್ತು ಸೀತೆ ಹೀಗೇ ಇರುತ್ತಾರೆ ಎಂದು ನಿರ್ಧರಿಸುತ್ತಾರೆ. ರಾವಣ ಶಿವನ ಮಹಾ ಭಕ್ತ. ಅವನಲ್ಲಿ ಅನೇಕ ಒಳ್ಳೆಯ ಗುಣಗಳಿವೆ. ಅವನು ತನ್ನ ಜೀವನದಲ್ಲಿ ಮಾಡಿದ ಏಕೈಕ ತಪ್ಪು ಸೀತೆಯನ್ನು ಅಪಹರಣ ಮಾಡಿದ್ದು. ಆ ಒಂದು ಕೆಲಸ ಮಾಡದೇ ಇದ್ದಿದ್ದರೆ ದೊಡ್ಡ ವಿದ್ವಾಂಸನಾಗುತ್ತಿದ್ದ. ಇಂತಹ ಮಹಾನ್ ವ್ಯಕ್ತಿಯನ್ನು ‘ಆದಿಪುರುಷ’ದಲ್ಲಿ ರಸ್ತೆಬದಿಯ ರೌಡಿಯಾಗಿ ಚಿತ್ರಿಸಿರುವುದು ನನಗೆ ನೋವು ತಂದಿದೆ. ನಾನು ಇಲ್ಲಿಯವರೆಗೆ ಈ ಚಿತ್ರವನ್ನು ಸಂಪೂರ್ಣವಾಗಿ ನೋಡಿಲ್ಲ. ಅದರ ಭಾಗವನ್ನು ಟಿವಿಯಲ್ಲಿ ವೀಕ್ಷಿಸಲು ನನಗೆ ಸಹಿಸಲಾಗಲಿಲ್ಲ ಎಂದಿದ್ದಾರೆ.

  ಸೀತಾದೇವಿಯನ್ನು ಗುಲಾಬಿ ಬಣ್ಣದ ಸೀರೆಯುಟ್ಟು, ರಾವಣಾಸುರನನ್ನು ವಿಭಿನ್ನ ವೇಷಭೂಷಣದಲ್ಲಿ ತೋರಿಸುವುದು ಇಷ್ಟವಾಗಲಿಲ್ಲ. ಹೊಸದನ್ನು ಸೃಜನಾತ್ಮಕವಾಗಿ ತೋರಿಸಬೇಕೆಂಬ ಆಮಿಷದಲ್ಲಿ ರಾಮಾಯಣದ ಹಿರಿಮೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಭಾರತೀಯ ದಂತಕಥೆಗಳಲ್ಲಿ ಸಿಲುಕಿಕೊಳ್ಳದೆ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಯುವಜನತೆಗೆ ಸ್ಫೂರ್ತಿ ನೀಡುವ ಚಿತ್ರಗಳಾಗಿ ಮಾಡಿದರೆ ಉತ್ತಮ ಎಂದು ದೀಪಿಕಾ ಅಭಿಪ್ರಾಯಪಟ್ಟಿದ್ದಾರೆ.

  ಅಮೆರಿಕದಲ್ಲೂ ಬಿಸಿಲಿನ ತಾಪ..ಜನ ತತ್ತರ!

  See also  ರಾಹುಲ್​ ಗಾಂಧಿ ರಾವಣ ಪೋಸ್ಟರ್​ ಟ್ರೋಲ್​ಗೆ ಡಿಕೆಶಿ ರಿಯಾಕ್ಷನ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts