More

  ಅಮೆರಿಕದಲ್ಲೂ ಬಿಸಿಲಿನ ತಾಪ..ಜನ ತತ್ತರ!

  ವಾಷಿಂಗ್ಟನ್​: ಅಮೆರಿಕದ ನೈಋತ್ಯ ರಾಜ್ಯಗಳು ಬಿಸಿಲಿನ ತಾಪಕ್ಕೆ ತತ್ತರಿಸುತ್ತಿವೆ. ಆಗ್ನೇಯ ಕ್ಯಾಲಿಫೋರ್ನಿಯಾದಿಂದ ಅರಿಜೋನಾ ಮತ್ತು ನೆವಾಡಾ ರಾಜ್ಯಗಳವರೆಗೆ ತಾಪಮಾನವು ಗುರುವಾರ ಮತ್ತು ಶುಕ್ರವಾರ 43 ಡಿಗ್ರಿ ಸೆಲ್ಸಿಯಸ್ ತಲುಪಿದೆ.

  ಇದನ್ನೂ ಓದಿ:ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್.. ಏಳು ನಕ್ಸಲೀಯರ ಹತ್ಯೆ!

  ಜನರು ತೀವ್ರ ಬಿಸಿಗಾಳಿಗೆ ತತ್ತರಿಸಿಹೋಗಿದ್ದಾರೆ. ಶನಿವಾರ ನೆವಾಡಾದ ಲಾಸ್ ವೇಗಾಸ್‌ನಲ್ಲಿ ಬಿಸಿಗಾಳಿ ಮುಂದುವರಿಯಲಿದೆ. ಅಮೆರಿಕಾದ ನೈಋತ್ಯದಲ್ಲಿ ಬೇಸಿಗೆ ಇನ್ನು ಎರಡು ವಾರವಷ್ಟೇ ಇರಲಿದೆ. ಆದರೂ ಸೂರ್ಯ ನಿಗಿನಿಗಿ ಕೆಂಡದಂತಾಗಿದ್ದು, ಜನರು ಹೈರಾಣಾಗಿದ್ದಾರೆ.

  ಫೀನಿಕ್ಸ್ ನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ನ ಹೊಸ ದಾಖಲೆ ಸೃಷ್ಟಿಸಿದೆ. 2016ರಲ್ಲಿ ಇಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ದಾಖಲಾಗಿತ್ತು. ಇಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಸಭೆಗೆ ಬಂದಿದ್ದ 11 ಮಂದಿ ಬಿಸಿಲಿನಿಂದಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು.

  ರೆನೊ, ನೆವಾಡಾದ ಸರಾಸರಿ ತಾಪಮಾನವು ಸುಮಾರು 27 ಡಿಗ್ರಿ ಸೆಲ್ಸಿಯಸ್ ಆಗಿದೆ. ಗುರುವಾರ 37 ಡಿಗ್ರಿ ಇತ್ತು. ಅರಿಝೋನಾ ರಾಜ್ಯದ ಕೆಲವು ಭಾಗಗಳಲ್ಲಿ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ಮುಂದುವರಿಯುತ್ತದೆ.

  ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಮೇಲೆ ದಾಳಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts