ತಲ್ವಾರ್​ ಹಿಡಿದ ಧರ್ಮ ; ವೊದಲ ಬಾರಿಗೆ ಖಳನಟನಾಗಿ ಬಣ್ಣ ಹಚ್ಚುತ್ತಿರುವ ನಟ

Talwar (3)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಸಾಮಾನ್ಯವಾಗಿ ಹಿಂದೆ ಹೀರೋ ಆಗಿ ಗುರುತಿಸಿಕೊಂಡಿರುವ ನಟರು ವಿಲನ್​ ಪಾತ್ರ ಮಾಡುತ್ತಿರಲಿಲ್ಲ. ಆದರೆ, ಈಗ ಈ ಟ್ರೆಂಡ್​ ಬದಲಾಗಿದೆ. ಯಾರು ಯಾವ ಪಾತ್ರವನ್ನೂ ಮಾಡಲು ರೆಡಿಯಿದ್ದಾರೆ. ಅದೇ ಸಾಲಿಗೆ ಈಗ ಧರ್ಮ ಕೀರ್ತಿರಾಜ್​ ಕೂಡ ಸೇರಿದ್ದಾರೆ. ಧರ್ಮ ಕೀರ್ತಿರಾಜ್​ ಹಾಗೂ ಅದಿತಿ ಅಭಿನಯದ ಹೊಸ ಸಿನಿಮಾ "ತಲ್ವಾರ್​'. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ರಾವ ಮುರಳಿ ನಿರ್ದೇಶಿಸುತ್ತಿದ್ದಾರೆ.

"ಮುಮ್ತಾಜ್​' ಬಳಿಕ ಧರ್ಮ&ರಾವ ಜೋಡಿ ಈ ಸಿನಿಮಾದಲ್ಲಿ ಮತ್ತೆ ಒಂದಾಗಿದೆ. ಇದೊಂದು ವಿಭಿನ್ನ ರೌಡಿಸಂ ಕಥಾಹಂದರದ ಚಿತ್ರವಾಗಿದ್ದರೂ ಭಾವನಾತ್ಮಕ ಸ್ಪರ್ಷವಿದೆ ಮತ್ತು ಸಮಾಜಕ್ಕೆ ಸಂದೇಶವಿದೆ ಎಂದು ಹೇಳಿಕೊಂಡಿದೆ ಚಿತ್ರತಂಡ. ಧರ್ಮ ಕೀರ್ತಿರಾಜ್​ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಜಾಭಾರತ ಖ್ಯಾತಿಯ ಅವಿನಾಶ್​ ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ವಿಶೇಷ ಪಾತ್ರದಲ್ಲಿ ಜಯರಾಮ್​ ಕಾರ್ತಿಕ್​ ಮಂಗಳೂರಿನ ರೌಡಿ "ಕಲ್ಕಿ' ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಕೆ.ಬಿ. ಪ್ರವಿಣ್​ ಸಂಗೀತವಿರಲಿದೆ. ಸೆನ್ಸಾರ್​ ಮಂಡಳಿ ಯಾವುದೇ ಕಟ್ಸ್​ ಮತ್ತು ಮ್ಯೂಟ್ಸ್​ ಇಲ್ಲದೆ ಚಿತ್ರಕ್ಕೆ "ಯು/ಎ' ಪ್ರಮಾಣ ಪತ್ರ ನೀಡಿದೆ. ಸೆಪ್ಟೆಂಬರ್​ನಲ್ಲಿ ಚಿತ್ರದ ಟೀಸರ್​ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net