

ಆಂಧ್ರಪ್ರದೇಶ: ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಹರೀಶ್ ಶಂಕರ್ ಕಾಂಬಿನೇಷ್ನಲ್ಲಿ ಮೂಡಿಬರಲಿರುವ ಬಹುನಿರೀಕ್ಷಿತ ಉಸ್ತಾದ್ ಭಗತ್ ಸಿಂಗ್ ಚಿತ್ರದಿಂದ ನಟಿ ಪೂಜಾ ಹೆಗ್ಡೆ ಹೊರ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣವೇನು? ಎಂಬ ಪ್ರಶ್ನೆಗಳು ಇದೀಗ ಅಭಿಮಾನಿಗಳನ್ನು ಬೆಂಬಿಡದೆ ಕಾಡುತ್ತಿದೆ.
ಉಸ್ತಾದ್ ಭಗತ್ ಸಿಂಗ್ ಚಿತ್ರದಿಂದ ಪೂಜಾ ಹೆಗ್ಡೆ ಹೊರನಡೆದ ಬಗ್ಗೆ ಈ ಹಿಂದಿನಿಂದಲೂ ಸಾಕಷ್ಟು ವದಂತಿಗಳು ಹರಿದಾಡುತ್ತಲೇ ಇತ್ತು. ಭಾರೀ ನಿರೀಕ್ಷಿತ ಪ್ರಾಜೆಕ್ಟ್‌ನಲ್ಲಿ ಇನ್ನು ಮುಂದೆ ಪೂಜಾ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಇದೀಗ ವ್ಯಾಪಕವಾಗಿ ಹರಿದಾಡುತ್ತಿದೆ.
ಇತ್ತೀಚಿನ ವರದಿಯ ಪ್ರಕಾರ, ಪೂಜಾ ಹೆಗ್ಡೆ ಚಿತ್ರದಿಂದ ಹೊರಹೋಗಲು ಕಾರಣ, ತಮ್ಮ ನಟನೆಗೆ ಅವರು ಕೇಳಿದ ಅಧಿಕ ಸಂಭಾವನೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಉಸ್ತಾದ್ ಭಗತ್ ಸಿಂಗ್ ತಂಡದಿಂದ ನಟಿ ನಿರ್ಗಮಿಸಲು ಇದೇ ಬಲವಾದ ಕಾರಣವಿರಬಹುದು ಎಂದು ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ: ಬೋನಿನಲ್ಲಿ ಸೆರೆಯಾದ ಗಂಡು ಚಿರತೆ
ತಮ್ಮ ಚಿತ್ರಗಳ ಆಯ್ಕೆಯಲ್ಲಿ ಬಹಳ ಸಲೆಕ್ಟಿವ್ ಆಗಿರುವ ಪೂಜಾ ಹೆಗ್ಡೆ, ಕಳೆದ ಕೆಲವು ತಿಂಗಳಿನಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಟಾಲಿವುಡ್ ಅಂಗಳದಲ್ಲಿ ಭಾರೀ ಸುದ್ದಿಯಾಗುತ್ತಿದ್ದಾರೆ. ನಟಿಯ ಮುಂದಿನ ಸಿನಿಮಾಗಳು ಯಾವುದು? ಯಾವ ಪಾತ್ರವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಹಲವು ಪ್ರಶ್ನೆಗಳು ಅವರ ಅಭಿಮಾನಿಗಳಲ್ಲಿ ಕಾಡತೊಡಗಿದೆ,(ಏಜೆನ್ಸೀಸ್).