ಕಪ್ಪು ಬಣ್ಣದ ಸೀರೆಯುಟ್ಟು ನ್ಯೂಯಾರ್ಕ್​​​ನಲ್ಲಿ ಮಿಂಚಿದ ಸಮಂತಾ

samg
Published on

ಸೌತ್​​​ ಬ್ಯೂಟಿ ಸಮಂತಾ 41ನೇ ಇಂಡಿಯಾ ಡೇ ಪರೇಡ್‌ನಲ್ಲಿ ಭಾಗಿಯಾಗುವ ಮೂಲಕ ಸುದ್ದಿಯಾದರು. ಸದ್ಯ ದೂರ ದೇಶದಲ್ಲಿ ಸ್ಯಾಮ್ ಮಿಂಚುತ್ತಿದ್ದಾರೆ. ನ್ಯೂಯಾರ್ಕ್​​ಗೆ ತೆರಳಿರುವ ಬಗ್ಗೆ ಅವರು ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು. ವಿವಿಧ ಬಗೆಯ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ ಇದ್ದಾರೆ.


ಕಪ್ಪು ಬಣ್ಣದ ಸೀರೆಯುಟ್ಟು ಚಸ್ಮಾ ಧರಿಸಿ ಸ್ಟೈಲ್ ಆಗಿ ನ್ಯೂಯಾರ್ಕ್ ಕಾರ್ಯಕ್ರಮವೊಂದರಲ್ಲಿ ನಟಿ ಎಂಟ್ರಿ ಕೊಟ್ಟಿದ್ದಾರೆ. 18ರ ಹುಡುಗಿಯರನ್ನೇ ಸೆಡ್ಡು ಹೊಡೆಯೋ ಹಾಗೆ ನಟಿ ಕಂಗೊಳಿಸಿದ್ದಾರೆ.


ಸಮಂತಾಗೆ Myositis ಹೆಸರಿನ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ಅವರು ಓಪನ್ ಆಗಿ ಮಾತನಾಡಿದ್ದಾರೆ. ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅವರ ಅಮೆರಿಕ ತೆರಳಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಅವರು ಅಧಿಕೃತವಾಗಿ ಹೇಳಿಕೊಂಡಿಲ್ಲ.


ಸಮಂತಾ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿದ್ದಾರೆ. ಅವರು ಒಂದು ವರ್ಷ ನಟನೆಗೆ ಮರಳುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಅವರು ನೇರವಾಗಿ ಹೇಳಿಕೊಂಡಿಲ್ಲ. ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.


ಸಮಂತಾ ನಟನೆಯ ಖುಷಿ ಸಿನಿಮಾ ಸೆಪ್ಟೆಂಬರ್ 1ರಂದು ತೆರೆಗೆ ಬರುತ್ತಿದೆ. ಲವ್ ಮಾಡಿ ಮನೆಯವರ ವಿರೋದಧ ನಡುವೆ ಮದುವೆಯಾಗುವ ಜೋಡಿಯ ಸುಂದರ ಕಥೆಯನ್ನ ಖುಷಿ ಸಿನಿಮಾದಲ್ಲಿ ತೋರಿಸಲಾಗಿದೆ. ರಿಲೀಸ್ ನಂತರ ಅದೆಷ್ಟರ ಮಟ್ಟಿಗೆ ಚಿತ್ರ ಮೋಡಿ ಮಾಡುತ್ತೆ ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net