More

    ನಾಳೆ ನೆಟ್​​ಫ್ಲಿಕ್ಸ್​ನಲ್ಲಿ ಧನುಷ್​ ನಟನೆಯ ಜಗಮೇ ತಂಧಿರಮ್; 17 ಭಾಷೆಗಳಲ್ಲಿ ಚಿತ್ರ ನೋಡಬಹುದು!

    ಚೆನ್ನೈ: ಕಾಲಿವುಡ್​ ಸ್ಟಾರ್ ನಟ ಧನುಷ್ ಇದೀಗ ಚೊಚ್ಚಲ ಓಟಿಟಿ ವೇದಿಕೆಗೆ ಪದಾರ್ಪಣೆ ಮಾಡಲು ಸಿದ್ಧತೆಯಲ್ಲಿದ್ದಾರೆ. ತುಂಬ ಸದ್ದು ಮಾಡಿರುವ ಜಗಮೇ ತಂಧಿರಮ್ ಚಿತ್ರ ಇದೀಗ ನೆಟ್​ಫ್ಲಿಕ್ಸ್​​ನಲ್ಲಿ ಸ್ಟ್ರೀಮ್ ಆಗಲಿದೆ. ಜೂನ್ 18ಕ್ಕೆ ಅಂದರೆ ನಾಳೆ ಚಿತ್ರ ಬಿಡುಗಡೆ ಆಗಲಿದೆ. ಅಷ್ಟೇ ಅಲ್ಲ ಭಾರತದ ಇನ್ಯಾವುದೇ ಸಿನಿಮಾ ಮಾಡದ ಹೊಸ ದಾಖಲೆಯನ್ನು ಈ ಚಿತ್ರ ಮಾಡಿದೆ ಎಂದರೆ ನಂಬಲೇಬೇಕು.

    ಇದನ್ನೂ ಓದಿ: ನಿನಗೆ ಗಿಣಿ ಅಂದ್ರೆ ಇಷ್ಟ, ಅದಕ್ಕೆ ಅದನ್ನೇ ದತ್ತು ಪಡೆದಿದ್ದೇನೆ; ‘ಸಂಚಾರಿ’ ನೆನಪಲ್ಲಿ ಚಕ್ರವರ್ತಿ ಚಂದ್ರಚೂಡ

    17 ಭಾಷೆಗಳಲ್ಲಿ, 190 ದೇಶಗಳಲ್ಲಿ ಜಗಮೇ ತಂಧಿರಮ್ ಸಿನಿಮಾ ಪ್ರಸಾರವಾಗಲಿದೆ. ಇಲ್ಲಿಯವರೆಗೂ ಒಟಿಟಿಯಲ್ಲಿ ಕಾಲಿವುಡ್​ನ ಬೇರಾವ ನಟನಿಗೂ ಈ ಮಟ್ಟದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಧನುಷ್ ಸಿನಿಮಾವೊಂದು ಈ ಮಟ್ಟದ ಹೈಪ್ ಗಿಟ್ಟಿಸಿಕೊಂಡಿದೆ.


    ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಬೇಕಿತ್ತು. ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಎರಡೆರಡು ಬಾರಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.

    ಇದನ್ನೂ ಓದಿ: ಚೆನ್ನೈ ಬಿಟ್ಟು ಹೈದರಾಬಾದ್​ಗೆ ಹೊರಟು ನಿಂತ್ರು ಕಮಲ್ ಹಾಸನ್, ಸೂರ್ಯ, ಕಾರ್ತಿ

    ಚೆನ್ನೈ ಮೂಲದ ವೈನಾಟ್ ಸ್ಟುಡಿಯೋಸ್ ಮತ್ತು ರಿಲಯನ್ಸ್ ಎಂಟರ್​ಟೈನ್ಮೆಂಟ್​ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಜೂ. 1ಕ್ಕೆ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಮೆಚ್ಚುಗೆ ಗಳಿಸಿತ್ತು. ಜಗಮೇ ತಂಧಿರಮ್ ಸಿನಿಮಾ ಗ್ಯಾಂಗ್​ಸ್ಟರ್​ ವೊಬ್ಬನ ಹಿನ್ನೆಲೆಯ ಕಥಾನಕ. ಚಿತ್ರದಲ್ಲಿ ಗ್ಯಾಂಗ್​ಸ್ಟರ್ ಆಗಿ ಧನುಷ್ ಕಾಣಿಸಿಕೊಂಡಿದ್ದು, ಐಶ್ವರ್ಯಾ ಲಕ್ಷ್ಮೀ, ಜೊಜಿ ಜಾರ್ಜ್, ಕಲೈಅರಸನ್ ಶರತ್ ರವಿ, ಜೇಮ್ಸ್ ಕೊಸ್ಮೋ ಪಾತ್ರವರ್ಗದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts