ನೆಟ್​​ಫ್ಲಿಕ್ಸ್​ ಕಾಮಿಡಿ ಶೋ ನಿರೂಪಣೆಗಿಳಿದ ಹಾಲಿವುಡ್ ನಟ ವಿಲ್ ಸ್ಮಿತ್

Will-Smith
Published on

ಹಾಲಿವುಡ್ ನಟ ವಿಲ್​ ಸ್ಮಿತ್ ತಮ್ಮ ವೃತ್ತಿ ಜೀವನದಲ್ಲಿ ಹೊಸದೊಂದು ಸಾಹಸಕ್ಕೆ ಇಳಿದಿದ್ದಾರೆ. ಸಿನಿಮಾದಲ್ಲಿನ ನಟನೆಯ ಜತೆಗೆ ಇದೀಗ ನಿರೂಪಣೆಗೂ ಇಳಿಯುತ್ತಿದ್ದಾರೆ. ಅವರ ಆ ನಿರೂಪಣೆಯ ಶೋ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದೆ.

ಹಾಗಾದರೆ ಏನು ಆ ಶೋ? ವಿಲ್ ಸ್ಮಿತ್ ಆ್ಯಕ್ಷನ್​ ಸಿನಿಮಾಗಳ ಮೂಲಕವೇ ಪರಿಚಯಗೊಂಡವರು. ಇದೀಗ ಕಾಮಿಡಿ ಶೋ ಮೂಲಕ ನಗಿಸಲು ಬರುತ್ತಿದ್ದಾರೆ. ಒಂದು ಗಂಟೆಯ ಈ ಶೋದಲ್ಲಿ ನಿರೂಪಕರಾಗಿ ವಿಲ್​ ಸ್ಮಿತ್ ಕಾಣಿಸಿಕೊಂಡರೆ, ಅತಿಥಿಗಳಾಗಿ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ.


ವೆಸ್ಟ್​ ಬ್ರೋಕ್ ಸ್ಟುಡಿಯೋಸ್ ಈ ಕಾರ್ಯಕ್ರಮ ನಿರ್ಮಾಣ ಮಾಡುತ್ತಿದ್ದು, ನಿರೂಪಕರಾಗಿರುವ ಸ್ಮಿತ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಈ ಶೋದ ಕೆಲಸಗಳು ಶುರುವಾಗಿದ್ದು, ಇನ್ನೇನು ಶೀಘ್ರದಲ್ಲಿ ಕಾರ್ಯಕ್ರಮದ ಸಂಪೂರ್ಣ ವಿವರ ಹೊರಬೀಳಲಿದೆ.

ವಿಶೇಷ ಏನೆಂದರೆ, ಇದೇ ಮೊದಲ ಬಾರಿಗೆ ನಿರೂಪಣೆಯಂಥ ಶೋವನ್ನು ವಿಲ್​ ಸ್ಮಿತ್ ನಡೆಸಿಕೊಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net