ಚೆನ್ನೈ ಬಿಟ್ಟು ಹೈದರಾಬಾದ್​ಗೆ ಹೊರಟು ನಿಂತ್ರು ಕಮಲ್ ಹಾಸನ್, ಸೂರ್ಯ, ಕಾರ್ತಿ

22kamal-hassan6
Published on

ಹೈದರಾಬಾದ್: ತಮಿಳಿನ ಖ್ಯಾತ ನಟರೆಲ್ಲರೂ ಇದೀಗ ಚೆನ್ನೈ ಬಿಟ್ಟು ಹೈದರಾಬಾದ್ ಹಾದಿ ಹಿಡಿದಿದ್ದಾರೆ. ಹಾಗೆಂದ ಮಾತ್ರಕ್ಕೆ ಖಾಯಂ ಆಗಿ ಅಲ್ಲಿಗೆ ತೆರಳುತ್ತಿಲ್ಲ. ಬದಲಿಗೆ ಸಿನಿಮಾ ಚಿತ್ರೀಕರಣಕ್ಕೆ ಹೊರಟು ನಿಂತಿದ್ದಾರೆ.

ಹೌದು, ತಮಿಳುನಾಡಿಗೆ ಹೋಲಿಕೆ ಮಾಡಿದರೆ, ಹೈದರಾಬಾದ್​ನಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದೆ. ಆ ಒಂದು ಕಾರಣವನ್ನೇ ಗಮನದಲ್ಲಿಟ್ಟುಕೊಂಡು ನಟರಾದ ಕಮಲ್ ಹಾಸನ್, ಸೂರ್ಯ, ಕಾರ್ತಿ ತಮ್ಮ ಸಿನಿಮಾಗಳ ಚಿತ್ರೀಕರಣಕ್ಕೆ ರಾಮೋಜಿ ಫಿಲಂ ಸಿಟಿಯನ್ನು ಆರಿಸಿಕೊಂಡಿದ್ದಾರೆ.

ಈಗಾಗಲೇ ಕಳೆದ ಒಂದೂವರೆ ತಿಂಗಳಿಂದ ಹೈದರಾಬಾದ್​ನಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ಬೇರೆ ಬೇರೆ ಭಾಷೆಗಳ ಸೀರಿಯಲ್​ ತಂಡಗಳು ಬೀಡು ಬಿಟ್ಟಿದ್ದು, ಶೂಟಿಂಗ್​ ಮಾಡಿಕೊಳ್ಳುತ್ತಿವೆ. ಕನ್ನಡದ ಸಾಕಷ್ಟು ಧಾರಾವಾಹಿಗಳು ಶೂಟಿಂಗ್​ ನಡೆಸಿವೆ. ಇದೀಗ ಸಿನಿಮಾಕ್ಕೂ ಅನುವು ಮಾಡಿಕೊಟ್ಟಿದ್ದು, ಸಿನಿಮಾ ತಂಡಗಳೇ ಇದೀಗ ಹೈದರಾಬಾದ್​ನತ್ತ ಮುಖ ಮಾಡಿವೆ.

ಕಮಲ್ ಹಾಸನ್​ ನಟಿಸುತ್ತಿರುವ ವಿಕ್ರಂ, ಕಾರ್ತಿ ನಟಿಸಲಿರುವ ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರ ಮತ್ತು ಸೂರ್ಯ ಹೊಸ ಸಿನಿಮಾಗಳೂ ಶೂಟಿಂಗ್ ಆರಂಭಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net