

ಸಿನಿಮಾದ ಜತೆಗೆ ಕಿರುತೆರೆ, ಒಟಿಟಿ, ಜಾಹೀರಾತು ಹೀಗೆ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡು ಸದಾ ಬಿಜಿಯಾಗಿರುವ ನಟಿ ತಮನ್ನಾ ಭಾಟಿಯಾ, ಇದೀಗ ಹೊಸ ಪ್ರಯೋಗಕ್ಕೆ ಅಡಿ ಇಟ್ಟಿದ್ದಾರೆ. ಇಲ್ಲಿಯವರೆಗೂ ನಟನೆಯಲ್ಲಿಯೇ ಹೆಚ್ಚು ಸಕ್ರಿಯರಾಗಿರುತ್ತಿದ್ದ ಅವರು, ಇದೀಗ ನಿರೂಪಣೆಗೂ ಸೈ ಎಂದಿದ್ದಾರೆ. ಹೌದು, ಅಡುಗೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಶೋಕ್ಕೆ ತಮನ್ನಾ ಸಹಿ ಹಾಕಿದ್ದಾರೆ.
ಹಿಂದಿಯಲ್ಲಿ "ಮಾಸ್ಟರ್ ಶ್ೆ' ರಿಯಾಲಿಟಿ ಶೋ ಯಶಸ್ವಿಯಾಗಿತ್ತು. ಇದೀಗ ಅದೇ ಮಾದರಿಯ ಶೋ ತೆಲುಗಿನಲ್ಲಿಯೂ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ತಮನ್ನಾ ಹೋಸ್ಟ್ ಮಾಡಲಿದ್ದಾರೆ. ವಿಶೇಷ ಏನೆಂದರೆ, ಕನ್ನಡ ದಲ್ಲಿಯೂ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಇಲ್ಲಿ ನಟ ಕಿಚ್ಚ ಸುದೀಪ್ ಶೋ ನಡೆಸಿಕೊಡಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಹೊರಬಿದ್ದಿದೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಹಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ತಮನ್ನಾ ನಟಿಸುತ್ತಿದ್ದು, ಇನ್ನೇನು ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಅವುಗಳ ಶೂಟಿಂಗ್ನಲ್ಲಿ ಭಾಗವಹಿ ಸಲಿದ್ದಾರೆ. "ಮೇಸ್ಟ್ರೊ' ಚಿತ್ರ ಬಹುತೇಕ ಕೊನೇ ಹಂತದ ಲ್ಲಿದ್ದು, ಅದರಲ್ಲಿ ನೆಗೆಟಿವ್ ಶೇಡ್ನಲ್ಲಿ ತಮನ್ನಾ ನಟಿಸಿದ್ದಾರೆ.