ಬೇಕಂತಲೇ ಕಿಸ್ಸಿಂಗ್​ ದೃಶ್ಯ ಸೇರಿಸಿದ್ರಾ ಧನುಷ್​!? ಬಿರುಗಾಳಿ ಎಬ್ಬಿಸಿದ ಖ್ಯಾತ ನಿರ್ದೇಶಕನ​ ಹೇಳಿಕೆ! Dhanush

Dhanush
Published on

Dhanush : ಕಾಲಿವುಡ್​ ಸೂಪರ್​ ಸ್ಟಾರ್​ ಧನುಷ್ ನಟನೆಯ 2019ರಲ್ಲಿ ತೆರೆಕಂಡ 'ಎನೈ ನೋಕಿ ಪಾಯುಮ್ ತೋಟ' ಸಿನಿಮಾವನ್ನು ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ನಿರ್ದೇಶಿಸಿದರು. ಆದರೆ, ಆ ಸಿನಿಮಾ ನನ್ನದಲ್ಲ ಎಂದು ಗೌತಮ್ ಮೆನನ್​ ಹೇಳಿರುವ ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿವೆ.

ಗೌತಮ್ ವಾಸುದೇವ್ ಮೆನನ್ ಗಲಾಟ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಎನೈ ನೋಕಿ ಪಾಯುಮ್ ತೋಟ ಚಿತ್ರದ ಬಗ್ಗೆ ನಿರೂಪರು ಕೇಳಿದಾಗ ಯಾವ ಚಿತ್ರದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಗೌತಮ್​ ಮೆನನ್​ ನಿರೂಪಕರನ್ನು ಮರು ಪ್ರಶ್ನಿಸುತ್ತಾರೆ. ಚಿತ್ರದ ಹೆಸರು ಹೇಳಿದಾಗ, ಅದು ನನ್ನ ಸಿನಿಮಾ ಅಲ್ಲ ಮತ್ತು ಅದರಲ್ಲಿ ಒಂದು ಹಾಡನ್ನು ಮಾತ್ರ ನೆನಪಿದೆ ಎಂದು ಗೌತಮ್​ ಉತ್ತರಿಸುತ್ತಾರೆ. ಇದೇ ವಿಡಿಯೋ ತುಣುಕು ಇದೀಗ ವಿವಾದಕ್ಕೆ ಕಾರಣವಾಗಿದೆ.

ತಾವೇ ನಿರ್ದೇಶಿಸಿದ ಚಿತ್ರವನ್ನು ಗೌತಮ್​ ಏಕೆ ನಿರಾಕರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಈವರೆಗೂ ಗೌತಮ್​ ಮೆನನ್​ ಉತ್ತರ ನೀಡಿಲ್ಲ. ಆದರೆ, ಆ ಚಿತ್ರಕ್ಕೆ ಸಂಬಂಧಪಟ್ಟವರು ಕೆಲವೊಂದು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.

ಗೌತಮ್ ಮೆನನ್ ಅವರ ಚಿತ್ರವಾದರೂ, ಕೆಲವರು ಎನೈ ನೋಕಿ ಪಾಯುಮ್ ತೋಟ' ಸಿನಿಮಾವನ್ನು ನಟ ಧನುಷ್ ಅವರ ಇಚ್ಛೆಯಂತೆ ನಿರ್ಮಿಸಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಧನುಷ್ ಅವರು ಸಿನಿಮಾದ ಚಿತ್ರಕಥೆಯಲ್ಲಿ ಅನಗತ್ಯ ಬದಲಾವಣೆಗಳನ್ನು ಮಾಡಿ, ಅನಗತ್ಯ ಚುಂಬನ ದೃಶ್ಯಗಳನ್ನು ಸೇರಿಸಿದರು ಎಂದು ಕೆಲವರು ದೂರಿದ್ದಾರೆ.

ಗೌತಮ್ ವಾಸುದೇವ್ ಮೆನನ್ ಸಿನಿಮಾದ ನಿರ್ದೇಶಕರಾದರೂ ಧನುಷ್ ವಾಸ್ತವವಾಗಿ ಸಿನಿಮಾವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಸ್ವತಃ ನಿರ್ದೇಶಿಸಿದ್ದಾರೆ ಎಂಬ ಬಲವಾದ ವದಂತಿ ಕಾಲಿವುಡ್‌ನಲ್ಲಿ ಹಬ್ಬಿದೆ. ಸದ್ಯ ಈ ಘಟನೆ ದೊಡ್ಡ ವಿವಾದವಾಗಿದೆ. ಗೌತಮ್ ತಮ್ಮದೇ ಚಿತ್ರವನ್ನು ತಿರಸ್ಕರಿಸಲು ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ. ಧನುಷ್ ಕೂಡ ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ ಕಾಲಿವುಡ್​ ಗಲ್ಲಿಯಲ್ಲಿ ಚರ್ಚೆ ನಡೆಯುತ್ತಲೇ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net