ನೆದರ್ಲೆಂಡ್ ಯುವಕನಿಗೆ ಮನಸೋತ ತಮಿಳು ಯುವತಿ! ಹಿಂದು ಸಂಪ್ರದಾಯದಂತೆ ನಡೆಯಿತು ಮದುವೆ​ | Border Love Story

Border Love Story

Border Love Story : ಪ್ರೀತಿಗೆ ಯಾವುದೇ ಮಿತಿ ಅಥವಾ ಗಡಿಗಳಿಲ್ಲ. ಪ್ರೀತಿ ಎಂಬುದು ಜಾತಿ, ಧರ್ಮ, ಬಣ್ಣ, ಭಾಷೆ, ವಯಸ್ಸು ಹಾಗೂ ಅಂತಸ್ತು ಎಲ್ಲವನ್ನು ಮೀರಿದ್ದು ಎನ್ನುತ್ತಾರೆ. ತನ್ನ ಪ್ರೇಮಿಯನ್ನು ಮದುವೆಯಾಗಲು ದೇಶ ಬಿಟ್ಟು ಹೋಗುವವರೂ ಇದ್ದಾರೆ, ವಿದೇಶದಿಂದ ಬಂದವರೂ ಇದ್ದಾರೆ.

ತಾಜಾ ಸಂಗತಿ ಏನೆಂದರೆ, ತಮಿಳುನಾಡಿನ ಯುವತಿಯೊಬ್ಬಳು ಪ್ರೀತಿಗೆ ಯಾವುದೇ ಗಡಿಯಿಲ್ಲ ಎಂಬುದನ್ನು ಇದೀಗ ಸಾಬೀತುಪಡಿಸಿದ್ದಾಳೆ. ತನ್ನ ಹಿರಿಯರ ಅನುಮತಿಯೊಂದಿಗೆ ವಿದೇಶಿ ಯುವಕನನ್ನು ಮದುವೆಯಾಗುವ ಮೂಲಕ ಭಾರಿ ಸುದ್ದಿಯಾಗಿದ್ದಾಳೆ. ಇದೀಗ ಅವರ ಪ್ರೇಮ ವಿವಾಹವನ್ನು ಎಲ್ಲರೂ ಹೊಗಳುತ್ತಿದ್ದು, ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಪ್ರೇಮಲತಾ, ಕೊಯಮತ್ತೂರು ಜಿಲ್ಲೆಯ ಪೆರಿಯನಾಯಕನಪಾಳ್ಯಂ ಬಳಿಯ ಚಾಮನಾಯಕನಪಾಳ್ಯಂ ಪ್ರದೇಶದವರು. ಐಟಿ ಉದ್ಯೋಗಿಯಾಗಿದ್ದು, ನೆದರ್ಲೆಂಡ್​ನ ಐಟಿ ಕಂಪನಿಯೊಂದರಲ್ಲಿ ಆಡಳಿತ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ, ಅವರು ನೆದರ್ಲೆಂಡ್​ನ ದೂರದರ್ಶನ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದ ಸ್ಟೀನ್‌ಹೀಸ್ ಅವರನ್ನು ಭೇಟಿಯಾದರು.

ಇದನ್ನೂ ಓದಿ: ಗ್ಯಾಸ್​​ ಸಿಲಿಂಡರ್​​ ಏಕೆ​ ಕೆಂಪು ಬಣ್ಣದಲ್ಲಿರುತ್ತೆ? ಕಾರಣವೇನು? ಇಲ್ಲಿದೆ ನೋಡಿ ಉತ್ತರ… Gas Cylinders

ಮೊದಲ ಭೇಟಿಯ ಪರಿಚಯ ಕೆಲವು ದಿನಗಳ ನಂತರ ಪ್ರೀತಿಯಾಗಿ ಬದಲಾಯಿತು. ಕಳೆದ ಐದು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಇದೀಗ ಮದುವೆಯಾಗಲು ನಿರ್ಧರಿಸಿದ್ದು, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ, ಜನವರಿ 19ರಂದು ಕೊಯಮತ್ತೂರಿನ ಪೆರಿಯನಾಯಕನಪಾಳ್ಯಂನ ಇಡಿಗರೈ ಬಳಿಯ ವಿವಾಹ ಮಂಟಪದಲ್ಲಿ ಎರಡೂ ಕುಟುಂಬಗಳ ಸಂಬಂಧಿಕರ ಸಮ್ಮುಖದಲ್ಲಿ ಹಿಂದೂ ವಿಧಿವಿಧಾನಗಳ ಪ್ರಕಾರ ವಿವಾಹವಾದರು.

ನೆದರ್ಲೆಂಡ್​ನಿಂದ ಬಂದಿದ್ದ ಸ್ಟೀನ್‌ಹೀಸ್ ಅವರ ಪೋಷಕರು, ಅವರ ಸ್ನೇಹಿತರು ಮತ್ತು ಸಂಬಂಧಿಕರು ಎಲ್ಲರೂ ಸಾಂಪ್ರದಾಯಿಕ ತಮಿಳು ಧೋತಿ ಮತ್ತು ಸೀರೆಗಳನ್ನು ಧರಿಸಿ ಮದುವೆಯಲ್ಲಿ ಭಾಗವಹಿಸಿ ವಧು-ವರರನ್ನು ಅಭಿನಂದಿಸಿದರು. (ಏಜೆನ್ಸೀಸ್​)

ಸೂಪರ್​ ಗ್ಲೂ ಹಾಕಿ ತುಟಿಗಳನ್ನು ಮುಚ್ಚಿದ ಯುವಕ! ಕೊನೆಗೆ ಏನಾಯ್ತು ಗೊತ್ತಾ? ಆಘಾತಕಾರಿ ವಿಡಿಯೋ ಇಲ್ಲಿದೆ… Super glue

ಕುವೈತ್​ನಿಂದ ಭಾರತಕ್ಕೆ ಬಂದು ಹೋದ ಬೆನ್ನಲ್ಲೇ ಟ್ರಕ್​ ಚಾಲಕನಿಗೆ ಒಲಿಯಿತು 10 ಕೋಟಿ ಬಂಪರ್ ಬಹುಮಾನ! Truck Driver

Share This Article

ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips

ಕುತ್ತಿಗೆ ಮತ್ತು ಭುಜದ ಸುತ್ತಲಿನ ಪ್ರದೇಶದಲ್ಲಿನ ನೋವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಸರ್ವಿಕಲ್…

ಅಳದಿದ್ದರು ಕಣ್ಣೀರು ಬರುತ್ತಿದೆಯೇ; ತಜ್ಞರು ಸೂಚಿಸಿರುವ ಸಿಂಪಲ್ ಪರಿಹಾರ ಹೀಗಿದೆ.. Health Tips

ಸೌಂದರ್ಯವನ್ನು ಅಳೆಯಲು ಕಣ್ಣುಗಳು ಒಂದು ಪ್ರಮುಖ ಮಾನದಂಡವಾಗಿದೆ. ಇದು ಪ್ರಮುಖ ಇಂದ್ರಿಯಗಳಲ್ಲಿ ಒಂದಾಗಿದೆ. ಅದಿಲ್ಲದೆ ಜೀವನವನ್ನು…

ಮ್ಯಾರೇಜ್​ಗೆ ಸರಿಯಾದ ವಯಸ್ಸೇಷ್ಟು ಗೊತ್ತೆ?; ತಡವಾಗಿ ಮದುವೆಯಾಗುವುದರಿಂದ ಅನುಕೂಲ, ಅನಾನೂಕುಲಗಳೇನು? | Marriage

marriage: ಕೆಲ ದಶಕಗಳ ಹಿಂದೆ ಬಾಲ್ಯ ವಿವಾಹ ನಡೆಯುವುದು ಸಾಮಾನ್ಯವಾಗಿತ್ತು. ಬಳಿಕ ಕಾನೂನು ಕಣ್ತಪ್ಪಿಸಿ ಕದ್ದು…