ಮೊಬೈಲ್​ ಕೊಡ್ಲಿಲ್ಲ ಅಂದ್ರೆ ಕೊಂದು ಹಾಕ್ತೀನಿ! ಕಚೇರಿಗೆ ನುಗ್ಗಿ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿದ ವಿದ್ಯಾರ್ಥಿ | Mobile

Mobile

Mobile : ಅಪ್ರಾಪ್ತ ವಯಸ್ಕರಲ್ಲಿ ಸ್ಮಾರ್ಟ್​ಫೋನ್​ ಚಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಊಟ ಮಾಡಲು ಬೇಕು ಮೊಬೈಲ್​, ನಿದ್ರೆಗೆ ಜಾರುವಾಗಲೂ ಬೇಕಿದೆ ಮೊಬೈಲ್​. ಪುಟ್ಟ ಮಕ್ಕಳಲ್ಲಿ ಹೆಚ್ಚುತ್ತಿರುವ ಈ ಗೀಳು, ಪೋಷಕರಲ್ಲಿ ಭಾರೀ ಆತಂಕ ಸೃಷ್ಟಿಸುತ್ತಿದೆ. ಕೆಲವರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಿ, ಒಂದೆರೆಡು ಏಟು ಬಾರಿಸಿ, ಕಸಿದುಕೊಂಡರೆ, ಇನ್ನೂ ಕೆಲವು ಪೋಷಕರು ಎಷ್ಟೇ ಬುದ್ಧಿ ಮಾತು ಹೇಳಿದರು ಮಕ್ಕಳು ಬಗ್ಗದೆ, ತಂದೆ-ತಾಯಿಗೆ ತಿರುಗಿ ಮಾತನಾಡುತ್ತಾರೆ. ಸದ್ಯ ಇದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಮೊಬೈಲ್ ಕೊಡದ ಪ್ರಾಂಶುಪಾಲರಿಗೆ ಪಿಯುಸಿ ವಿದ್ಯಾರ್ಥಿ ಬೆದರಿಕೆ ಹಾಕಿದ್ದಾನೆ.

ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಅನಕ್ಕರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಕಳೆದ ಶುಕ್ರವಾರ (ಜ.17) 16 ವರ್ಷದ ಪ್ರಥಮ ಪಿಯು ವಿದ್ಯಾರ್ಥಿ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿದ್ದಾನೆ. ಸದ್ಯ ಈ ಘಟನೆ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: ನೆದರ್ಲೆಂಡ್ ಯುವಕನಿಗೆ ಮನಸೋತ ತಮಿಳು ಯುವತಿ! ಹಿಂದು ಸಂಪ್ರದಾಯದಂತೆ ನಡೆಯಿತು ಮದುವೆ​ | Border Love Story

ನಡೆದಿದ್ದೇನು?

ಶಾಲೆಗೆ ಮೊಬೈಲ್ ಫೋನ್ ತರದಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದನ್ನು ಉಲ್ಲಂಘಿಸಿ, ಪ್ರಥಮ ಪಿಯು ವಿದ್ಯಾರ್ಥಿಯೊಬ್ಬ ತರಗತಿಗೆ ಮೊಬೈಲ್​ ತಂದಿದ್ದ. ಬೋಧನಾ ಸಮಯದಲ್ಲಿ ಮೊಬೈಲ್​ ಬಳಸುವುದನ್ನು ಗಮನಿಸಿದ ಶಿಕ್ಷಕರು ತಕ್ಷಣ ವಿದ್ಯಾರ್ಥಿಯ ಬಳಿ ಹೋಗಿ ಮೊಬೈಲ್​ ವಶಕ್ಕೆ ಪಡೆದು ಪ್ರಾಂಶುಪಾಲರಿಗೆ ಒಪ್ಪಿಸಿದರು.

ಮೊಬೈಲ್​ ಕಸಿದುಕೊಂಡಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿ, ನೇರವಾಗಿ ಪ್ರಾಂಶುಪಾಲರ ರೂಮಿಗೆ ತೆರಳಿ ಮೊಬೈಲ್ ಫೋನ್ ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ, ಪ್ರಾಂಶುಪಾಲರು ಮೊಬೈಲ್​ ಕೊಡಲು ಒಪ್ಪದಿದ್ದಾಗ, ಕೊಡ್ಲಿಲ್ಲ ಅಂದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ವಿದ್ಯಾರ್ಥಿಯ ಬೆದರಿಕೆಗೆ ಹೆದರಿದ ಪ್ರಾಂಶುಪಾಲರು ಮತ್ತು ಶಿಕ್ಷಕರು ಪಿಟಿಎ ತ್ರಿಥಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹಿಂದೆಲ್ಲ ಶಿಕ್ಷಕರನ್ನು ಕಂಡರೆ ವಿದ್ಯಾರ್ಥಿಗಳು ಭಯದಿಂದ ನಡುಗುತ್ತಿದ್ದರು. ಆದರೆ, ಇಂದು ಶಿಕ್ಷಕರನ್ನೇ ಹೆದರಿಸುವ ಮಟ್ಟಕ್ಕೆ ಬೆಳೆದಿರುವುದು ಆಘಾತಕಾರಿ ಸಂಗತಿ. ಅದರಲ್ಲೂ ಒಂದು ಸಣ್ಣ ಮೊಬೈಲ್ ವಿದ್ಯಾರ್ಥಿಯನ್ನು ಈ ಮಟ್ಟಕ್ಕೆ ಇಳಿಸಿರುವುದು ಚಿಂತಿಸುವ ಗಂಭೀರ ವಿಷಯವಾಗಿದೆ. (ಏಜೆನ್ಸೀಸ್​)

ಗ್ಯಾಸ್​​ ಸಿಲಿಂಡರ್​​ ಏಕೆ​ ಕೆಂಪು ಬಣ್ಣದಲ್ಲಿರುತ್ತೆ? ಕಾರಣವೇನು? ಇಲ್ಲಿದೆ ನೋಡಿ ಉತ್ತರ… Gas Cylinders

ಸೂಪರ್​ ಗ್ಲೂ ಹಾಕಿ ತುಟಿಗಳನ್ನು ಮುಚ್ಚಿದ ಯುವಕ! ಕೊನೆಗೆ ಏನಾಯ್ತು ಗೊತ್ತಾ? ಆಘಾತಕಾರಿ ವಿಡಿಯೋ ಇಲ್ಲಿದೆ… Super glue

ಕುವೈತ್​ನಿಂದ ಭಾರತಕ್ಕೆ ಬಂದು ಹೋದ ಬೆನ್ನಲ್ಲೇ ಟ್ರಕ್​ ಚಾಲಕನಿಗೆ ಒಲಿಯಿತು 10 ಕೋಟಿ ಬಂಪರ್ ಬಹುಮಾನ! Truck Driver

Share This Article

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…

ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips

ಪ್ರಸ್ತುತ ಕಾರ್ಯನಿರತ ಜೀವನ ಮತ್ತು ಕಳಪೆ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ…