More

    ಒಂದೇ ರೂಮಲ್ಲಿ ನನ್ನ ಗಂಡನ ಜತೆ ಧನುಷ್ ಏನ್​ ಮಾಡ್ತಿದ್ದ ಅನ್ನೋದು ನಂಗೆ ಮಾತ್ರ ಗೊತ್ತು ಎಂದ ಸುಚಿ!

    ಚೆನ್ನೈ: ಒಂದು ಕಾಲದಲ್ಲಿ ಸೆಲೆಬ್ರಿಟಿಗಳ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಾಲಿವುಡ್​ ಅಂಗಳದಲ್ಲಿ ತಲ್ಲಣ ಸೃಷ್ಟಿಸಿದ್ದ ತಮಿಳುನಾಡಿನ ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ ಕಾರ್ತಿಕ್ ಇದೀಗ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದು, ತನ್ನ ಗಂಭೀರ ಆರೋಪಗಳಿಂದ ಮತ್ತೆ ಭಾರಿ ಸುದ್ದಿಯಾಗುತ್ತಿದೆ.

    ತಾಜಾ ಸಂಗತಿ ತಿಳಿಯುವ ಮುನ್ನ ಸುಚಿತ್ರಾಳ ಹಳೆಯ ಪ್ರಕರಣದ ಬಗ್ಗೆ ಮೊದಲು ತಿಳಿದುಕೊಳ್ಳೋಣ. 2017ರಲ್ಲಿ ಸುಚಿತ್ರಾ ಅವರ ಟ್ವಿಟರ್ ಪೇಜ್​ನಿಂದ ಕಾಲಿವುಡ್​ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋ ಮತ್ತು ಫೋಟೋಗಳು ಹೊರಬಿದ್ದ ಬಳಿಕ ಭಾರೀ ವಿವಾದವೇ ಸೃಷ್ಟಿಯಾಗಿತ್ತು. ಇದನ್ನು ಸುಚಿ ಲೀಕ್ಸ್ ಪ್ರಕರಣ ಎಂದೇ ಕರೆಯಲಾಗಿದೆ. ಈ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದಂತೆ ನನ್ನ ಟ್ವಿಟರ್​ ಖಾತೆ ಹ್ಯಾಕ್​ ಆಗಿತ್ತು ಎಂದು ಸುಚಿತ್ರಾ ಸ್ಪಷ್ಟನೆ ನೀಡಿದ್ದರು. ಆದರೆ, ಅದು ಉದ್ದೇಶಪೂರ್ವಕವಾಗಿಯೇ ಲೀಕ್​ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು.

    ಕಾಲಿವುಡ್​ ಸೂಪರ್​ ಸ್ಟಾರ್​ ಧನುಷ್​ ಅವರ ಸಹಾಯಕರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಸುಚಿತ್ರಾ ಆರೋಪಿದ್ದರು. ಅಲ್ಲದೆ, ಧನುಷ್​ ಅವರು ನನಗೆ ಡ್ರಗ್ಸ್​ ನೀಡಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಕಾಲಿವುಡ್​ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್​ ಕೌಚ್​ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದರು.

    ಟ್ವಿಟರ್​ ಖಾತೆಯಲ್ಲಿ ಧನುಷ್, ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ಮತ್ತು ನಟಿಯರಾದ ಆಂಡ್ರಿಯಾ ಜೆರೆಮಿಯಾ, ತ್ರಿಷಾ, ಅಮಲಾ ಪೌಲ್​ ಹಾಗೂ ಸಂಚಿತಾ ಶೆಟ್ಟಿ ಅವರ ಕೆಲ ಫೋಟೋಗಳು ಮತ್ತು ವಿಡಿಯೋಗಳು ಜಾಗತಿಕ ಗಮನವನ್ನು ಸೆಳೆದವು. ಈ ಪ್ರಕರಣ ಕಾಲಿವುಡ್​ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿ, ಕೊನೆಗೆ ತಣ್ಣಗಾಯಿತು.

    ತಾಜಾ ಸಂಗತಿ ಏನೆಂದರೆ, ಸುಚಿತ್ರಾ ಅವರು ಮರಳಿ ಬಂದಿದ್ದು, ತಮಿಳು ಯೂಟ್ಯೂಬ್​ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸುಚಿತ್ರಾ ಅವರು ಆಡಿರುವ ಮಾತುಗಳು ಮತ್ತೆ ವಿವಾದದ ಸ್ವರೂಪ ಪಡೆದುಕೊಂಡಿದೆ. ಮಾಜಿ ತಾರಾ ದಂಪತಿ ಧನುಷ್​ ಮತ್ತು ಐಶ್ವರ್ಯಾ ರಜಿನಿಕಾಂತ್​ ಒಬ್ಬರಿಗೊಬ್ಬರು ವಂಚನೆ ಮಾಡುತ್ತಿದ್ದರು. ಮನೆಯಿಂದ ಹೊರಗಡೆ ಇಬ್ಬರು ಬೇರೆಯವರೊಂದಿಗೆ ಸರಸವಾಡುತ್ತಿದ್ದರು ಎಂದು ಸುಚಿತ್ರಾ ಆರೋಪಿಸಿದ್ದಾರೆ. ಅಲ್ಲದೆ, ನಟ ಧನುಷ್​ ಓರ್ವ ಸಲಿಂಗಕಾಮಿ ಮತ್ತು ಮಾದಕ ವ್ಯಸನಿ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.

    ನನ್ನ ಗಂಡನೊಂದಿಗೆ ಸಂಬಂಧ
    ನನ್ನ ಗಂಡ (ಕಾರ್ತಿಕ್​) ಓರ್ವ ಸಲಿಂಗಕಾಮಿ. ಇದನ್ನು ಹೇಳಿಕೊಳ್ಳಲು ಆತನಿಗೆ ಧೈರ್ಯವಿಲ್ಲ. ನನ್ನ ಮದುವೆಯಾದ ಎರಡು ವರ್ಷಗಳ ಬಳಿಕ ನಾನದನ್ನು ತಿಳಿದುಕೊಂಡೆ. ನನ್ನ ಗಂಡನಿಗೂ ಮತ್ತು ಧನುಷ್​ಗೂ ಸಂಬಂಧವಿದೆ. ದಿನವಿಡಿ ಕುಡಿದು ಇಬ್ಬರು ಒಂದೇ ರೂಮಿಗೆ ಹೋಗುತ್ತಾರೆ. ಆ ರೂಮಿನಲ್ಲಿ ಏನು ಮಾಡುತ್ತಾರೆ ಅಂತ ನನಗೆ ಮಾತ್ರ ತಿಳಿದಿದೆ. ಕಾರ್ತಿಕ್​ ಮತ್ತು ನನ್ನದು, ನನ್ನ ತಂದೆ-ತಾಯಿ ನಿಶ್ಚಯಿಸಿದ ಮದುವೆ. ಹೀಗಾಗಿ ನಾನು ಅವನಿಂದ ಪ್ರೀತಿಯನ್ನು ನಿರೀಕ್ಷಿಸಿರಲಿಲ್ಲ. ಮೊದಲು ವಿಚ್ಛೇದನ ಕೇಳಿದ್ದು ನಾನೇ. ಇಬ್ಬರು ಡಿವೋರ್ಸ್​ ಆಗಿದ್ದೇವೆ. ಸುಚಿ ಲೀಕ್ಸ್​ ಪ್ರಕರಣದ ರುವಾರಿಯೇ ಅವರು ಎಂದು ಸುಚಿತ್ರಾ ಗಂಭೀರ ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)

    ಧನುಷ್​ ಓರ್ವ ಸಲಿಂಗಕಾಮಿ, ಮನೆಯಿಂದಾಚೆಗೆ ಐಶ್ವರ್ಯಾ ಸರಸಸಲ್ಲಾಪ! ಮತ್ತೆ ಬಂದಳು ಸುಚಿ

    ನಾನು ಮಾಡಿದ ಈ ಒಂದು ತಪ್ಪನ್ನು ನನ್ನ ಮಗಳು ಮಾಡಲು ಬಿಡುವುದಿಲ್ಲ! ಹೀಗ್ಯಾಕಂದ್ರು ಆಲಿಯಾ ಭಟ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts