

ಬೆಂಗಳೂರು: ಕಾಂಗ್ರೆಸ್ನ ಚುನಾವಣಾಪೂರ್ವ ಗ್ಯಾರಂಟಿ ಜಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸವಾಲಿನ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್ ಮಂಡನೆ ಮಾಡಿದ್ದು, ವಿವಿಧ ಇಲಾಖೆಗಳಿಗೆ ಬಜೆಟ್ನಲ್ಲಿ ಹಂಚಿಕೆ ಮಾಡಿರುವ ಅನುದಾನದ ವಿವರ ಈ ಕೆಳಕಂಡಂತಿದೆ.
ಇಲಾಖೆವಾರು ಅನುದಾನ ಹಂಚಿಕೆ
1. ಶಿಕ್ಷಣ: 37,587 ಕೋಟಿ ರೂ.
2. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 24,166 ಕೋಟಿ ರೂ.
3. ನೀರಾವರಿ: 19,044 ಕೋಟಿ
4. ಇಂಧನ: 22,773 ಕೋಟಿ
5. ಗ್ರಾಮೀಣಾಭಿವೃದ್ಧಿ ಇಲಾಖೆ: 18,038 ಕೋಟಿ
6. ಒಳಾಡಳಿತ ಮತ್ತು ಸಾರಿಗೆ: 16,638 ಕೋಟಿ
7. ಕಂದಾಯ ಇಲಾಖೆ: 16,167 ಕೋಟಿ
8. ಆರೋಗ್ಯ ಇಲಾಖೆ: 14,950 ಕೋಟಿ
9. ಸಮಾಜ ಕಲ್ಯಾಣ ಇಲಾಖೆ: 11,173 ಕೋಟಿ
10. ಆಹಾರ ಮತ್ತು ನಾಗರಿಕ ಪೂರೈಕೆ: 10,460 ಕೋಟಿ
11. ಲೋಕೋಪಯೋಗಿ ಇಲಾಖೆ: 10,143 ಕೋಟಿ
12. ಕೃಷಿ: 5,860 ಕೋಟಿ
13. ಪಶುಸಂಗೋಪನೆ ಮತ್ತು ಮೀನುಗಾರಿಕೆ: 3,024 ಕೋಟಿ
ಇತರೆ: 1,09,639 ಕೋಟಿ
2023-24ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 3,27,747 ಲಕ್ಷ ಕೋಟಿ ರೂಪಾಯಿ ಆಗಿದೆ. ಸರ್ವ ಜನಾಂಗದ ಶಾಂತಿಯ ತೋಟ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ಸಿದ್ದರಾಮಯ್ಯ ಅವರು ಇಂದು 14ನೇ ಬಾರಿ ರಾಜ್ಯ ಬಜೆಟ್ ಮಂಡಿಸಿದ್ದಾರೆ.