More

    ಕೃಷಿ ಭಾಗ್ಯ ಯೋಜನೆ ವಿಸ್ತರಣೆ; 100 ಕೋಟಿ ರೂ. ಅನುದಾನ ಮೀಸಲು

    ಬೆಂಗಳೂರು: ಬಜೆಟ್​​ನಲ್ಲಿ ಕೃಷಿ ಭಾಗ್ಯ ಯೋಜನೆಗೆ ಹೆಚ್ಚು ಒತ್ತು ನೀಡಿದ ಸಿಎಂ ಸಿದ್ದರಾಮಯ್ಯ, ಯೋಜನೆಯನ್ನು ಮತ್ತಷ್ಟು ವಿಸ್ತರಣೆಗೊಳಿಸಿದ್ದು, ಸುಮಾರು 100 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ.

    ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ದುರಸ್ತಿ ನವೀಕರಣ, ನಿರ್ವಹಣೆಗೆ‌ 100 ಕೋಟಿ ರೂ. ಮೀಸಲು

    ಈ ಬಗ್ಗೆ ಮಾತನಾಡಿದ ಸಿಎಂ, ನವೋದ್ಯಮ ಕಾರ್ಯಕ್ರಮಕ್ಕೆ 10 ಕೋಟಿ ರೂ. ಮತ್ತು ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರಾಂಡಿಂಗ್ ಮಾಡಲು ಯೋಜಿಸಿದ್ದೇವೆ. ಕೃಷಿ ಯಂತ್ರಧಾರೆ ಯೋಜನೆ ಮುಂದುವರಿಕೆಯಾಗಲಿದೆ. 300 ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಯ ಜತೆಗೆ 100 ಹಬ್ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ ಮೀಸಲು ಎಂದು ಹೇಳಿದರು.

    ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡು ಕೇಂದ್ರ ಸ್ಥಾಪನೆ ಮಾಡಲು ಗ್ರೀನ್ ಸಿಗ್ನಲ್ ನೀಡಿದ ಸಿಎಂ, ರೇಷ್ಮೆ ಬೆಳೆಗಾರರಿಗೆ 5 ಲಕ್ಷ ಶೂನ್ಯ ಬಡ್ಡಿದರದ ಸಾಲ, ಜಾನುವಾರುಗಳು ಸಾವನ್ನಪ್ಪಿದರೇ 5-10 ಸಾವಿರ ಪರಿಹಾರ ಹಣ ಮತ್ತು ಮೀನುಗಾರ ಮಹಿಳೆಯರ ಸಾಲದ ಪ್ರಮಾಣ ಹೆಚ್ಚಳ ಮಾಡಲಿದ್ದೇವೆ ಎಂದು ಹೇಳಿದರು.

    ಇದನ್ನೂ ಓದಿ: ರಾಜ್ಯದಲ್ಲಿ NEP ರದ್ದು! 9ನೇ 10ನೇ ತರಗತಿ ವಿದ್ಯಾರ್ಥಿಗಳಿಗೂ ವಾರದಲ್ಲಿ ಎರಡು ದಿನ ಮೊಟ್ಟೆ/ಬಾಳೆಹಣ್ಣು/ಶೇಂಗಾ ಚಿಕ್ಕಿ ವಿತರಣೆ…

    ಈ ಮಧ್ಯೆ ನಂದಿನಿ ಬ್ರಾಂಡ್ ಅನ್ನು ಮತ್ತಷ್ಟು ವಿಸ್ತರಣೆ ಮಾಡಲು ಚಿಂತನೆ ನಡೆಸಿದ್ದು, ಶೀಘ್ರವೇ ‘ನಂದಿನಿ ಕೆಫೆ ಮೂ’ ಮಳಿಗೆಗಳನ್ನು ವಿದೇಶಗಳಲ್ಲೂ ಪರಿಚಯಿಸಲು ಒತ್ತು ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts