ರಾಜ್ಯದಲ್ಲಿ 2 ಸಾವಿರ ಗಡಿ ದಾಟಿದ ಡೆಂಘಿ ಕೇಸ್: ಎಚ್ಚರಿಕೆ ವಹಿಸುವಂತೆ ವೈದ್ಯರ ಸಲಹೆ

dengue
Published on

ಬೆಂಗಳೂರು: ಪಕ್ಕದ ಕೇರಳ ರಾಜ್ಯದಲ್ಲಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲೂ ಆತಂಕ ಶುರುವಾಗಿದೆ. ಪ್ರತಿ ನಿತ್ಯ ಕೇರಳದಲ್ಲಿ 10 ಸಾವಿರ ಜ್ವರದ ಕೇಸ್ ದಾಖಲಾಗುತ್ತಿವೆ. ಕಳೆದ 20 ದಿನದಲ್ಲಿ 1,48362 ಜ್ವರದ ಕೇಸ್ ದಾಖಲಾಗಿವೆ.

ಬದಲಾದ ವಾತವರಣ

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿಯೂ ಮಳೆ ಹಿನ್ನಲೆಯಲ್ಲಿ ಜ್ವರದ ಆತಂಕ ಎದುರಾಗಿದೆ. ಈಗಾಗಲೇ ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ಎರಡು ಸಾವಿರ ಗಡಿ ದಾಟಿದೆ. ಕಳೆದ 27 ದಿನದಲ್ಲಿಯೇ 334 ಡೆಂಘಿ ಕೇಸ್ ದಾಖಲಾಗಿವೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂಗಾರು ಮಳೆ ಹಾಗೂ ಬದಲಾದ ವಾತವರಣ ಹಿನ್ನಲೆಯಲ್ಲಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ.

ವೈದ್ಯರ ಸಲಹೆ

ಡೆಂಘಿ ಜೊತೆ ಚಿಕನ್ ಗುನ್ಯ ಕೇಸ್​ಗಳ ಸಂಖ್ಯೆಯಲ್ಲಿಯೂ ಕೊಂಚ ಏರಿಕೆಯಾಗಿದೆ. ಕಳೆದ ಎರಡು ವಾರದಿಂದ ಡೆಂಘಿ ಕೇಸ್​ನಲ್ಲೂ ಕೊಂಚ ಹೆಚ್ಚಳವಾಗಿದೆ. ರಾಜ್ಯದಲ್ಲಿ ಜನವರಿಯಿಂದ ನಿನ್ನೆಯವರೆಗೆ ಒಟ್ಟು 2180 ಡೆಂಘಿ ಕೇಸ್​ಗಳು ಪತ್ತೆಯಾಗಿವೆ. ಮಳೆ ಹಿನ್ನಲೆಯಲ್ಲಿ ಡೆಂಘಿ ಕೇಸ್ ಕಾಣಿಸಿಕೊಳ್ಳುತ್ತಿದ್ದು, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ 77,260 ಬ್ಲೆಡ್ ಸ್ಯಾಂಪಲ್ಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ 732 ಡೆಂಘಿ, 534 ಚಿಕನ್ ಗೂನ್ಯ ಹಾಗೂ 84 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net