ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಧಾನಿ ಹೇಳಿಕೆ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ತಡರಾತ್ರಿ ತುರ್ತು ಸಭೆ

UCC
Published on

ದೆಹಲಿ: ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಜನತೆಯನ್ನುದ್ದೇಶಿಸಿ ಮಾತನಾಡಿದ ಬೆನ್ನಲ್ಲೇ, ನಿನ್ನೆ ರಾತ್ರಿ ಭಾರತದ ಉನ್ನತ ಮುಸ್ಲಿಂ ಸಂಸ್ಥೆಯಾದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ತುರ್ತು ಸಭೆ ನಡೆಸಿದೆ.

ಸಭೆಯ ಸದಸ್ಯರು ಯುಸಿಸಿಯನ್ನು ವಿರೋಧಿಸಲು ನಿರ್ಧರಿಸಿದ್ದು, ಇದರಡಿಯಲ್ಲಿನ ಕಾನೂನಿನ ಅಂಶಗಳನ್ನು ಚರ್ಚಿಸಿದರು. ಯುಸಿಸಿ ಕುರಿತಾಗಿ ಕಾನೂನು ಆಯೋಗದ ಮುಂದೆ ಮುಸ್ಲಿಂ ಕಾನೂನು ಮಂಡಳಿಯು ತಮ್ಮ ಕಡೆಯಿಂದ ದಾಖಲೆಗಳನ್ನು ಪ್ರಸ್ತುತಪಡಿಸಲು ಮಂಡಳಿಯ ಸದಸ್ಯರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಶ್ವಾನಗಳಿಗೆ ನಡೆಯಿತು ಅದ್ಧೂರಿ ವಿವಾಹ! ನಂತರ ನಡೆದಿದ್ದು ಮದುವೆಯ ಸೈಡ್​ ಎಫೆಕ್ಟ್​, ವಿಡಿಯೋ ವೈರಲ್​​

ಭೋಪಾಲ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಒಂದೇ ದೇಶದಲ್ಲಿ ಎರಡು ಕಾನೂನುಗಳು ಕಾರ್ಯ ನಿರ್ವಹಿಸುವುದಿಲ್ಲ. ಸಂವಿಧಾನವು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡಿದ್ದು, ಸುಪ್ರೀಂ ಕೋರ್ಟ್‌ನ ತೀರ್ಪುಗಳು ಏಕರೂಪದ ಕಾನೂನುಗಳಿಗೆ ಕರೆ ನೀಡಿದೆ ಎಂದು ಹೇಳಿದರು. ಯುಸಿಸಿ ವಿಷಯವನ್ನು ಮುಸ್ಲಿಂ ಸಮುದಾಯಗಳ ದಿಕ್ಕು ತಪ್ಪಿಸಲು ಮತ್ತು ಪ್ರಚೋದಿಸಲು ಪ್ರತಿಪಕ್ಷಗಳು ಬಳಸುತ್ತಿವೆ ಎಂದು ಆರೋಪಿಸಿದರು.

ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಧಾನಿ ಮೋದಿಯವರ ಹೇಳಿಕೆಯನ್ನು ಟೀಕಿಸಿದ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಕುಟುಂಬ ಮತ್ತು ರಾಷ್ಟ್ರದ ನಡುವಿನ ಹೋಲಿಕೆ ಸೂಕ್ತವಲ್ಲ ಮತ್ತು ಯುಸಿಸಿಯನ್ನು ಯಾರ ಮೇಲೂ ಬಲವಂತವಾಗಿ ಹೇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net