ಭಾರತೀಯ ಸೇನೆ ಸೇರಿದ ಹೆಬ್ಬುಲಿ ನಟ ರವಿ ಕಿಶನ್ ಮಗಳು ಇಶಿಕಾ; ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ

ravi kishan and ishita
Published on

ದೆಹಲಿ: ಬಹುಭಾಷಾ ನಟ ಮತ್ತು ಬಿಜೆಪಿ ಸಂಸದ ರವಿ ಕಿಶನ್ ಮಗಳು ಭಾರತೀಯ ಸೇನೆಗೆ ಸೇರಿದ್ದಾರೆ. ನಟನ ಅಭಿಮಾನಿಗಳು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ಛಾಯಾಗ್ರಾಹಕ ವೀರೇಂದ್ರ ಚಾವ್ಲಾ ಈ ಮಾಹಿತಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಭೋಜ್‌ಪುರಿ ನಟ ರವಿ ಕಿಶನ್​ರ 21 ವರ್ಷದ ಮಗಳು ಇಶಿತಾ ಶುಕ್ಲಾ ಅಗ್ನಿಪಥ್ ಯೋಜನೆಯಡಿ ರಕ್ಷಣಾ ಪಡೆ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಂದರ್ಶನದ ಮಧ್ಯೆಯೇ ಪ್ಯಾಂಟ್​ ಬಿಚ್ಚಲು ಯತ್ನಿಸಿದ ನಟ! ಕಕ್ಕಾಬಿಕ್ಕಿಯಾದ ಆ್ಯಂಕರ್​, ವಿಡಿಯೋ ವೈರಲ್​

ಸಾಮಾನ್ಯವಾಗಿ, ನಟ-ನಟಿಯರ ಮಕ್ಕಳು ಚಿತ್ರರಂಗದಲ್ಲಿಯೇ ಮುಂದುವರೆಯಲು ಇಷ್ಟಪಡುತ್ತಾರೆ. ಆದರೆ ಕಿಶನ್​ ಮಗಳು ದೇಶ ಸೇವೆಗೊಸ್ಕರ ಮುಂದಾಗಿರುವುದನ್ನು ಕಂಡು ನಟನಿಗೆ ಹಾಗೂ ಇಶಿತಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇಶಿತಾ ಶುಕ್ಲಾ ದೇಶಕ್ಕೆ ಸೇವೆ ಸಲ್ಲಿಸಲು ಕಳೆದ 3 ವರ್ಷಗಳಿಂದ ತುಂಬಾ ಶ್ರಮಿಸುತ್ತಿದ್ದಾರೆ. ಆಕೆ ದೆಹಲಿ ನಿರ್ದೇಶನಾಲಯದ 7 ಬಾಲಕಿಯರ ಬೆಟಾಲಿಯನ್‌ನ ಎನ್​ಸಿಸಿ ಕೆಡೆಟ್ ಆಗಿದ್ದು, ಈ ಕೊರೆಯುವ ಚಳಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಇದನ್ನು ಓದಿ: ಯುವತಿಗೆ ಗನ್ ತೋರಿಸಿ ದರೋಡೆ ಮಾಡಿ ‘ಡೇಟಿಂಗ್ ಮಾಡೋಣ್ವಾ?’ ಎಂದ ಕಳ್ಳ!

ಗಣರಾಜ್ಯೋತ್ಸವ ಪರೇಡ್‌ನಲ್ಲಿನ ಭಾಗವಹಿಸಿದ್ದ ಇಶಿತಾ:
ಎನ್‌ಸಿಸಿ ಕೆಡೆಟ್ ಆಗಿರವು ಇಶಿತಾ ಈ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆದ ಪರೇಡ್‌ನಲ್ಲೂ ಭಾಗವಹಿಸಿದ್ದರು. ಈ ವೇಳೆ ಬಿಜೆಪಿ ಸಂಸದರೂ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು. ನನ್ನ ಮಗಳ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸಂತಸ ಹಂಚಿಕೊಂಡಿದ್ದರು.

ರವಿ ಕಿಶನ್ ತಮ್ಮ ಮಗಳು ಭಾರತೀಯ ಸೇನೆಗೆ ಸೇರುವ ಕನಸನ್ನು ಹೊಂದಿದ್ದಾಳೆ ಎಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net