PHOTOS | ಕಾಳಿಂಗ ಸರ್ಪ ಹಿಡಿದ ಏಳು ವರ್ಷದ ಬಾಲಕ!

Snake
Published on

ಉತ್ತರಕನ್ನಡ: 'ಹಾವು' ಎಂಬ ಪದ ಕೇಳುತ್ತಿದ್ದಂತೆ ಕೆಲವೊಬ್ಬರು ಭಯ ಬೀಳುತ್ತಾರೆ. ಎಲ್ಲಾದರು ಹಾವು ಕಾಣಿಸಿಕೊಂಡರೆ ಸಾಕು, ಎಷ್ಟೇ ಧೈರ್ಯವಿದ್ದರೂ ಒಂದು ಕ್ಷಣ ಬೆಚ್ಚಿ ಬೀಳುವುದಂತು ಸತ್ಯ! ಆದರೆ ಇಲ್ಲೊಬ್ಬ ಏಳು ವರ್ಷದ ಬಾಲಕ ಕಾಳಿಂಗ ಸರ್ಪವನ್ನು ಲೀಲಾಜಾಲವಾಗಿ ಹಿಡಿದಿದ್ದಾನೆ. ಮೈನಡುಗಿಸುವ ಈ ದೃಶ್ಯ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ.

ಉರಗ ಪ್ರೇಮಿಯಾಗಿರುವ ಶಿರಸಿಯ ವಿರಾಜ್ ಪ್ರಶಾಂತ್ ಹುಲೇಕಲ್, ಒಂದನೇ ತರಗತಿ ವಿದ್ಯಾರ್ಥಿ. ಈ ಹಿಂದೆ ಸಾಕಷ್ಟು ಬಾರಿ ವಿಷ ಸರ್ಪಗಳನ್ನು ಹಿಡಿದಿದ್ದ ಬಾಲಕ, ಇದೀಗ ಕಾಳಿಂಗ ಸರ್ಪವನ್ನು ಹಿಡಿದಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿವೆ.

ಫೋಟೋ ವೈರಲ್ ಆಗುತ್ತಿದ್ದಂತೆ ಬಾಲಕನ ಸಾಹಸ ಕಂಡು ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ಧೈರ್ಯವಾ? ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net