ನದಿಗೆ ಉರುಳಿದ ಚಲಿಸುತ್ತಿದ್ದ ಟ್ರಕ್​: ಮದುವೆಗೆ ಹೊರಟವರು ಸೇರಿದ್ದು ಮಸಣಕ್ಕೆ!

madhypradesh accident Brides Family
Published on

ದಾತಿಯಾ: ಮದುವೆ ಅತಿಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್​​ ನದಿಗೆ ಬಿದ್ದು ಮೂವರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಅವಹೇಳನಕಾರಿ ಪೋಸ್ಟ್; ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ದೂರು ದಾಖಲು

ಬುಹಾರಾ ಗ್ರಾಮದ ಬಳಿ ಸೇತುವೆ ನಿರ್ಮಾಣವಾಗುತ್ತಿದ್ದು, ಜನರ ಸಂಚರಕ್ಕಾಗಿ ಇಲ್ಲಿನ ನದಿಗೆ ಅಡ್ಡಲಾಗಿ ತಾತ್ಕಲಿಕವಾಗಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಮಂಗಳವಾರ ತಡರಾತ್ರಿ ಟ್ರಕ್​ ಇಲ್ಲಿ​ ಸಾಗುತ್ತಿದ್ದಾಗ ವಾಹನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ.

ಪರಿಣಾಮವಾಗಿ ಓರ್ವ ಮಹಿಳೆ ಹಾಗೂ ಯುವಕ, ಮೂವರು ಚಿಕ್ಕ ಮಕ್ಕಳು ಮೃತಪಟ್ಟಿದ್ದು, ಇಪ್ಪತ್ನಾಲ್ಕು ಜನರು ಗಾಯಗೊಂಡಿದ್ದಾರೆ. ಅಲ್ಲದೇ, ಹಲವಾರು ಮಕ್ಕಳು ಕಾಣೆಯಾಗಿದ್ದಾರೆ. ಟ್ರಕ್​ನಲ್ಲಿದ್ದವರೆಲ್ಲ ಗ್ವಾಲಿಯರ್‌ನ ಬಿಲ್ಹೇಟಿ ಗ್ರಾಮದ ನಿವಾಸಿಗಳಾಗಿದ್ದು. ಮದುವೆಗಾಗಿ ಟಿಕಮ್‌ಗಢ್‌ಕ್ಕೆ ಹೊರಟಿದ್ದ ವೇಳೆ ಈ ಘಟನೆ ನಡೆದು ಮದುವೆ ಮನೆಯಲ್ಲಿ ಶೋಕ ಮಡುಗಟ್ಟಿದೆ.

ಇದನ್ನೂ ಓದಿ: ಕಳಪೆ ಬಿತ್ತನೆಬೀಜ ಮಾರಿದರೆ ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಎಚ್ಚರಿಕೆ

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆದಿದ್ದಾರೆ. ಪೊಲೀಸರ ಈ ಕಾರ್ಯಾಚಾರಣೆಗೆ ಸ್ಥಳೀಯರು, ಮೀನುಗಾರರು ಕೈಜೋಡಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net