

ಹಿಸಾರ್: ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ರ ಪ್ರತಿಮೆಯನ್ನು ರಾತ್ರೋ ರಾತ್ರಿ ಧ್ವಂಸಗೊಳಿಸಿರುವ ಘಟನೆ ಹರಿಯಾಣದ ಹಿಸಾರ್ನ ಭಟ್ಲ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳಿಗೆ ಶಾಕ್ ರಾಯಚೂರು ಎಡಿಯ ಕಲಬುರಗಿ ತೋಟದ ಮನೆ ಮೇಲೆ ಲೋಕಾಯುಕ್ತರ ದಾಳಿ : ಬೀಗ ಒಡೆದು ಪರಿಶೀಲನೆ
ಸೋಮವಾರ ರಾತ್ರಿ ಗ್ರಾಮದ ಪಾರ್ಕ್‌ನಲ್ಲಿರುವ ಪ್ರತಿಮೆಯನ್ನು ಕೆಲ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಬೆಳಿಗ್ಗೆ ಎದ್ದ ಕೂಡಲೇ ದ್ವಂಸವಾಗಿರುವ ಪ್ರತಿಮೆಯನ್ನು ನೋಡಿದ ಗ್ರಾಮಸ್ಥರು ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕೃತ್ಯವನ್ನೆಸಗಿರುವ ದುರುಳರನ್ನು ಪತ್ತೆಹಚ್ಚಲು ಸಮೀಪದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಪ್ರಾರ್ಥನಾ ಸ್ಥಳವನ್ನು ನಾಶಪಡಿಸುವುದು, ಹಾನಿ ಮಾಡುವುದು ಅಥವಾ ಅಪವಿತ್ರಗೊಳಿಸುವುದಕ್ಕೆ ಸಂಬಂಧಿಸಿದೆ.
ಇದನ್ನೂ ಓದಿ: ಕೆ.ಆರ್ ಪುರಂ ಮಾಜಿ ತಹಶಿಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ! ಅಕ್ರಮ ಆಸ್ತಿ ಗಳಿಕೆ ಆರೋಪ
ಇನ್ನು ಆರೋಪಿಗಳನ್ನು ಕೂಡಲೇ ಬಂಧಿಸಿ ಉದ್ಯಾನವನದಲ್ಲಿ ನೂತನ ಪ್ರತಿಮೆ ಸ್ಥಾಪಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಉದ್ಯಾನದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿದರು.(ಏಜೆನ್ಸೀಸ್)