

ನವದೆಹಲಿ: ಮದುವೆ ಎಂಬುದು ಎರಡು ಹೃದಯಗಳನ್ನು ಒಂದು ಮಾಡುವ, ಜೀವಮಾನ ನೆನಪಿನಲ್ಲಿ ಉಳಿಯುವ ಸುಮಧುರ ಕ್ಷಣ. ಇಬ್ಬರು ಸಪ್ತಪದಿ ತುಳಿದ ಬಳಿಕ ಪ್ರತಿಜ್ಞೆಯೊಂದಿಗೆ ಹೊಸ ಪಯಣವನ್ನು ಆರಂಭಿಸುತ್ತಾರೆ. ಜೀವನಪೂರ್ತಿ ವಿವಿಧ ಅಡೆತಡೆಗಳು ಮತ್ತು ಕೆಲವೊಂದಷ್ಟು ಪರಿಸ್ಥಿತಿಗಳು ದಂಪತಿ ನಡುವೆ ವೈಮನಸ್ಸು ಉಂಟುಮಾಡುತ್ತವೆ. ಕೆಲವೊಬ್ಬರು ಎಲ್ಲವನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತಾರೆ. ಆದರೆ, ಕೆಲವರು ಸಣ್ಣ ಸಣ್ಣ ವಿಚಾರಕ್ಕೆ ಕಿತ್ತಾಡುವುದು ಸಾಮಾನ್ಯವಾಗಿಬಿಟ್ಟಿದೆ.
ಇದೀಗ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಎರಡು ನಾಯಿಗಳಿಗೆ ಬಹಳ ಅದ್ಧೂರಿಯಾಗಿ ಮದುವೆ ಮಾಡಲಾಗಿದೆ. ಆದಾಗ್ಯೂ ಮದುವೆ ನಂತರ ಬಹುತೇಕ ಮನೆಗಳನ್ನು ಏನು ನಡೆಯುತ್ತದೆ ಎಂಬುದನ್ನು ವಿಡಿಯೋದ ಮತ್ತೊಂದು ವಿವರಿಸಿದೆ.
ಎರಡು ಶ್ವಾನಗಳು ವಧು-ವರರಂತೆ ಅದ್ಧೂರಿಯಾಗಿ ಉಡುಗೆ ಧರಿಸಿರುವುದನ್ನು ಕಾಣಬಹುದು. ಅವುಗಳ ಸುತ್ತ ಸಾಕಷ್ಟು ಮಂದಿ ಸುತ್ತುವರಿದಿದ್ದು, ಇಬ್ಬರು ಮಹಿಳೆಯರು ಹಾರ ವಿನಿಮಯ ಮಾಡಿಕೊಳ್ಳಲು ಶ್ವಾನಗಳಿಗೆ ಸಹಾಯ ಮಾಡುತ್ತಾರೆ. ಹಾರ ಬದಲಾವಣೆಯಾದಾಗ ಎಲ್ಲರು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಾರೆ. ಅತಿಥಿಗಳು ತುಂಬಾ ಸಂತೋಷವಾಗಿರುವಂತೆ ಕಾಣುತ್ತಾರೆ. ಆದರೆ, ಮತ್ತೊಂದು ವಿಡಿಯೋದಲ್ಲಿ ಎರಡೂ ಶ್ವಾನಗಳು ಕೊಠಡಿಯೊಂದರಲ್ಲಿ ಕಿತ್ತಾಡುತ್ತಿರುವುದನ್ನು ಕಾಣಬಹುದು.
ಈ ವಿಡಿಯೋವನ್ನು ಹಾಸ್ಯದ ದೃಷ್ಟಿಯಿಂದ ಮಾಡಿರುವಂತೆ ಕಾಣುತ್ತದೆ. ಆದರೆ, ಇದು ಮಾನವನ ಜೀವನಕ್ಕೆ ಸಂಬಂಧಿಸಿದ್ದಾಗಿದೆ. ಮದುವೆ ಬಳಿಕ ಎಲ್ಲರು ಅದರ ಸೈಡ್ ಎಫೆಕ್ಟ್ಸ್ ಅನ್ನು ಅನುಭವಿಸುತ್ತಾರೆ. ಹೀಗಾಗಿ ಸುಗಮ ಜೀವನ ನಡೆಸಲು ವಿವಾದಗಳನ್ನು ಬಹಳ ಬುದ್ಧಿವಂತಿಕೆಯಿಂದ ನಿಭಾಯಿಸಿ ಎಂಬ ಸಂದೇಶವನ್ನು ವಿಡಿಯೋ ಮೂಲಕ ಹರಿಬಿಡಲಾಗಿದೆ.
ಈ ವಿಡಿಯೋವನ್ನು ಅನಿಮಲ್ ಕೇರ್ ಲವ್ ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಾಣಿ ಪ್ರಿಯರಲ್ಲಿ ಉತ್ಸಾಹವನ್ನು ಉಂಟುಮಾಡುವುದರ ಜೊತೆಗೆ, ವೀಡಿಯೊವನ್ನು ಅನೇಕ ಬಳಕೆದಾರರು ಇಷ್ಟಪಟ್ಟಿದ್ದಾರೆ. ನೆಟಿಜನ್‌ಗಳು ಕಾಮೆಂಟ್ ವಿಭಾಗದಲ್ಲಿ ಕೆಂಪು ಹೃದಯದ ಎಮೋಜಿಗಳನ್ನು ಹರಿಬಿಡುತ್ತಿದ್ದಾರೆ. (ಏಜೆನ್ಸೀಸ್)