More

    ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್​..!

    ಹೈದರಾಬಾದ್​: ಗ್ರಾಹಕನ ಸಾಕು ನಾಯಿಯಿಂದ ರಕ್ಷಿಸಿಕೊಳ್ಳಲು ಹೋಗಿ ಮೂರನೇ ಮಹಡಿಯಿಂದ ಜಿಗಿದು ಡೆಲಿವರಿ ಬಾಯ್ ಗಾಯಗೊಂಡಿರುವ ಘಟನೆ ಹೈದರಾಬಾದ್‌ನ ಪಂಚವಟಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

    ಮೊಹಮ್ಮದ್ ಇಲ್ಯಾಸ್(27) ಗಾಯಗೊಂಡ ವ್ಯಕ್ತಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್​ ಆಗಿದ್ದಾನೆ. ಗ್ರಾಹಕರ ಆರ್ಡರ್​ನ್ನು ಕೊಡಲು ಹೋದಾಗ ಮೊಹಮ್ಮದನನ್ನು ಕಂಡು ಲ್ಯಾಬ್ರಡಾರ್ ನಾಯಿ ಬೊಗಳಲು ಪ್ರಾರಂಭಿಸಿದೆ.

    ಇದನ್ನೂ ಓದಿ: ಮರು ಮತ ಎಣಿಕೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: 20 ವರ್ಷದ ಬಳಿಕ ಇಬ್ಬರು ಮಾಜಿ ಶಾಸಕರಿಗೆ ಜೈಲು ಶಿಕ್ಷೆ

    ದಿಕ್ಕುತೋಚದ ಡೆಲಿವರಿ ಬಾಯ್​, ಭಯದಿಂದ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದಿದ್ದಾನೆ. ಪರಿಣಾಮವಾಗಿ ಪಕ್ಕದ ಗೋಡೆಯ ಮೇಲೆ ಬಿದ್ದ ಇಲ್ಯಾಸ್‌ಗೆ ಹಲವು ಮೂಳೆ ಮುರಿದಿವೆ. ಗಾಯಗೊಂಡಿರುವ ಇಲ್ಯಾಸ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾನೆ.

    ಇನ್ನು, ರಾಯದುರ್ಗ ಪೊಲೀಸರು ಇಲ್ಯಾಸ್ ಹೇಳಿಕೆ ದಾಖಲಿಸಿಕೊಂಡು, ಫ್ಲಾಟ್ ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 289(ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts