More

    ಮರು ಮತ ಎಣಿಕೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: 20 ವರ್ಷದ ಬಳಿಕ ಇಬ್ಬರು ಮಾಜಿ ಶಾಸಕರಿಗೆ ಜೈಲು ಶಿಕ್ಷೆ

    ಉತ್ತರ ಪ್ರದೇಶ: ಎಂಎಲ್‌ಸಿ ಚುನಾವಣೆಯ ಮರು ಮತ ಎಣಿಕೆ ಸಂದರ್ಭದಲ್ಲಿ ಕರ್ತವ್ಯನಿರತ ಅಧಿಕಾರಿಗಳ ಹಲ್ಲೆ ನಡೆಸಿ, ಮತ ಯಂತ್ರಗಳನ್ನು ಲೂಟಿ ಮಾಡಿದ ಆರೋಪದಲ್ಲಿ ಇಬ್ಬರು ಮಾಜಿ ಶಾಸಕರಿಗೆ ಶಾಸಕರ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ.

    ಶಾಸಕರ ನ್ಯಾಯಾಲಯವು ಪ್ರಮುಖ ಆರೋಪಿಗಳಾದ ಸಂಜಯ್ ಜೈಸ್ವಾಲ್​ ಹಾಗೂ ಆದಿತ್ಯ ವಿಕ್ರಮ ಸಿಂಗ್​​​ರನ್ನು ದೋಷಿಗಳೆಂದು ತೀರ್ಪು ನೀಡಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ಯಾದವ್, ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ತಲಾ 2,000 ರೂ.ದಂಡವನ್ನು ವಿಧಿಸಿದ್ದಾರೆ.

    ಇದನ್ನೂ ಓದಿ: ರೈಲು ನಿಲ್ಲಿಸಲು ಮರೆತ ಲೋಕೋ ಪೈಲಟ್​; ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು 1 ಕಿ.ಮೀ. ರಿವರ್ಸ್​ ಚಾಲನೆ

    2003ರ ಎಂಎಲ್​ಸಿ ಚುನಾವಣೆಯ ಸಂದರ್ಭದಲ್ಲಿ ಮತಗಳ ಮರು ಎಣಿಕೆ ವಿಚಾರವಾಗಿ ವಿವಾದ ಉಂಟಾದ ನಂತರ ಅಭ್ಯರ್ಥಿ ಕಾಂಚನಾ ಸಿಂಗ್ ಎಂಬುವರನ್ನು ಬೆಂಬಲಿಸುತ್ತಿದ್ದ ಕಾಂಗ್ರೆಸ್ ಮುಖಂಡ ಜೈಸ್ವಾಲ್ ಮತ್ತು ಅವರ ಆರು ಸಹಚರರು ಮತ ಎಣಿಕೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಮತಯಂತ್ರಗಳನ್ನು ಲೂಟಿ ಮಾಡಿದ್ದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts