

ನವದೆಹಲಿ: ಕುಡಿದ ಮತ್ತಿನಲ್ಲಿ ವ್ಯಕ್ತಿ ಓರ್ವ ಅಪರಿಚಿತನಿಗೆ ತನ್ನ ಕಾರು, ಲ್ಯಾಪ್ಟಾಪ್ ಹಾಗು 18 ಸಾವಿರ ರೂ. ನಗದನ್ನು ನೀಡಿ ಮೋಸ ಹೋಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಘಟನೆಐ ಜೂನ್ 9ರಂದು ನಡೆದಿದ್ದು ದೆಹಲಿ ಮೂಲದ ಅಮಿತ್ ಪ್ರಕಾಶ್ ಮೋಸ ಹೋಗಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ವಂಚಕನಿಗಾಗಿ ಶೋಧ ನಡೆಸುತ್ತಿದ್ದಾರೆ.
ಗುರುಗ್ರಾಮದ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಆಮಡುತ್ತಿರುವ ಅಮಿತ್ ಶುಕ್ರವಾರ ಸಂಜೆ ಎಂದಿನಂತೆ ತಮ್ಮ ಕೆಲಸ ಮುಗಿದ ಬಳಿಕ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಲೇಕ್ ಫಾರೆಸ್ಟ್ ವೈನ್ ಶಾಪ್ಗೆ ಹೋಗಿದ್ದಾರೆ. ಈ ವೇಳೆ ಇವರು ಕುಡಿದ ಮತ್ತಿನಲ್ಲಿ ಇರುವುದನ್ನು ಗಮನಿಸಿದ ವಂಚಕ ತಾನು ಕೂಡ ಸೇರಿಕೊಳ್ಲಬಹುದೆ ಎಂದು ಕೇಳಿದ್ದಾನೆ.
ಬಳಿಕ ಅಮಿತ್ ಕುಡಿದ ಮತ್ತಿನಲ್ಲಿ ಇನ್ನೊಂದು ವೈನ್ ಬಾಟಲಿ ಖರೀದಿಸುವಂತೆ ಹೇಳಿದ್ದಾನೆ. ಈ ಸಮಯದಲ್ಲಿ ವಂಚಕ 2 ಸಾವಿರ ರೂಪಾಯಿ ಬೆಲೆ ಬಾಳುವ ಬಾಟಲಿಗೆ 20,000 ರೂ. ಪಡೆದಿದ್ದಾನೆ. ಇದಾದ ಕೆಲ ಹೊತ್ತಿನ ಬಳಿಕ ಆತನೇ ದೂರುದಾರರ ಕಾರ್ ಡ್ರೈವ್ ಮಾಡಿಕೊಂಡು ಬಂದಿದ್ದು, ಅವರನ್ನು ದೆಹಲಿಯಲ್ಲಿರುವ ಸುಭಾಷ್ ಚೌಕ್ ಮೆಟ್ರೋ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದಾನೆ.
ಮಾರನೆಯ ದಿನ ಬೆಳಗ್ಗೆ ಅಮಿತ್ ಅವರಿಗೆ ಹಿಂದಿನ ದಿನ ನಡೆದ ಘಟನೆಗಳು ಜ್ಞಾಪಕವಾಗಿದ್ದು, ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿ ದೂರು ದಾಖಲಿಸಿದ್ದಾರೆ. ಘಟನೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿರಗು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದು ಕುಡಿದ ಮತ್ತಿನಲ್ಲಿ ಮಾಡಿದ ಕೆಲಸಕ್ಕೆ ಕಿಡಿಕಾರುತ್ತಿದ್ದಾರೆ.