

ಸಿನಿಮಾರಂಗಕ್ಕೆ ಬರುವ ದೃಷ್ಟಿಯಿಂದ ಅನೇಕ ಕಲಾವಿದರು ಮೂಲ ಹೆಸರನ್ನು ಬದಿಗಿಟ್ಟು, ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳುತ್ತಾರೆ. ಅದೇ ರೀತಿ ಈಗಾಗಲೇ ಹಾಗೆ ಹೆಸರು ಬದಲಿಸಿಕೊಂಡು ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತನಾಮ ಹೆಸರು ಮಾಡಿದ್ದಾರೆ. ಅದೇ ರೀತಿ ಇದೀಗ ನಟಿ ದೀಪಿಕಾ ಪಡುಕೋಣೆ ಹೆಸರಿನ ವಿಚಾರವಾಗಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಂತ ಅವರೇನು ತಮ್ಮ ಮೂಲ ಹೆಸರನ್ನೇನು ಬದಲಾಯಿಸಿಕೊಂಡಿಲ್ಲ. ಬದಲಿಗೆ ‘ಕಾಕ್ಟೈಲ್’ ಸಲುವಾಗಿ ಬದಲಾಯಿಸಿಕೊಂಡಿದ್ದಾರೆ.
ಹೌದು, ಹೋಮಿ ಅದಜಾನಿಯಾ ನಿರ್ದೇಶನದಲ್ಲಿ 2012ರ ಜುಲೈ13ಕ್ಕೆ ಕಾಕ್ಟೈಲ್ ಸಿನಿಮಾ ಬಿಡುಗಡೆಯಾಗಿತ್ತು. ಆ ಚಿತ್ರವನ್ನು ಇದೀಗ ನೆನಪು ಮಾಡಿಕೊಂಡಿದ್ದಾರೆ. ಕಾಕ್ಟೈಲ್ ಚಿತ್ರದಲ್ಲಿ ವೆರೋನಿಕಾ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದರು. ಅದೇ ಹೆಸರನ್ನು ಸೋಷಿಯಲ್ ಮೀಡಿಯಾ ಟ್ವಿಟರ್ನಲ್ಲಿ ನಮೂದು ಮಾಡಿದ್ದಾರೆ. ಅಷ್ಟೇ ಅಲ್ಲ ಆ ಚಿತ್ರದ ಪೋಸ್ಟರ್ ಅನ್ನೇ ಡಿಸ್ಪ್ಲೇ ಪಿಕ್ಚರ್ ಆಗಿ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: ಮೇಕಪ್ ಮ್ಯಾನ್ ಸಾವಿಗೆ ದರ್ಶನ್ ಕಂಬನಿ
ಸೈಫ್ ಅಲಿಖಾನ್, ದಿಯಾನಾ ಪೆಂಟಿ, ಡಿಂಪಲ್ ಕಪಾಡಿಯಾ ಸೇರಿ ಹಲವರು ಈ ಸಿನಿಮಾದಲ್ಲಿ ನಟಿಸಿದ್ದರು. ಸೈಫ್ ನಟನೆಯ ಜತೆಗೆ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದರು. 2012ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಒಳ್ಳೇ ಕಮಾಯಿ ಮಾಡುವುದರ ಜತೆಗೆ ದೀಪಿಕಾಗೂ ಹೆಸರು ತಂದುಕೊಟ್ಟಿತ್ತು. ಇದೀಗ ಇದೇ ಚಿತ್ರದ ಸೀಕ್ವೆಲ್ ತಯಾರಿಕೆಗೆ ಕೆಲಸಗಳು ನಡೆದಿವೆ ಎಂಬ ಸುದ್ದಿ ಹರಿದಾಡುತ್ತಿದೆಯಾದರೂ, ಇನ್ನೂ ಅಧಿಕೃತವಾಗಿಲ್ಲ. (ಏಜೆನ್ಸೀಸ್)