ಮೇಕಪ್​ ಮ್ಯಾನ್​ ಸಾವಿಗೆ ದರ್ಶನ್​ ಕಂಬನಿ

Darshan - Final
Published on

ದರ್ಶನ್​ ಅವರ ಬಳಿ ಎರಡು ದಶಕಗಳಿಂದ ಮೇಕಪ್​ ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್​ ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ.

ದರ್ಶನ್​ ಚಿತ್ರರಂಗಕ್ಕೆ ಬಂದಾಗಿನಿಂದಲೂ, ಶ್ರೀನಿವಾಸ್​ ಅವರಿಗೆ ಮೇಕಪ್​ ಮಾಡುತ್ತಿದ್ದರು. ಶ್ರೀನಿವಾಸ್​ ಅವರ ನಿಧನಕ್ಕೆ ದರ್ಶನ್​ ಕಂಬನಿ ಮಿಡಿದಿದ್ದಾರೆ. ಅಷ್ಟೇ ಅಲ್ಲ, ದರ್ಶನ್​ ಅವರ ಅಭಿಮಾನಿಗಳು ಸಹ ಸೋಷಿಯಲ್​ ಮೀಡಿಯಾದಲ್ಲಿ ಶ್ರೀನಿವಾಸ್​ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾಥಿರ್ಸಿದ್ದಾರೆ.

ಶ್ರೀನಿವಾಸ್​ ಸಾವಿನ ಕುರಿತು ಟ್ವೀಟ್​ ಮಾಡಿರುವ ದರ್ಶನ್​, 'ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.

ದರ್ಶನ್​ ಅಭಿನಯದ ಹಲವು ಚಿತ್ರಗಳಲ್ಲಿ ಅವರಿಗೆ ಮೇಕಪ್​ ಮಾಡಿದ್ದ ಶ್ರೀನಿವಾಸ್​, ಬೇರೆ ಚಿತ್ರಗಳಿಗೂ ಕೆಲಸ ಮಾಡಿದ್ದರು. ಶ್ರೀಮುರಳಿ ಅಭಿನಯದ 'ಮದಗಜ'ಕ್ಕೂ ಅವರು ಮೇಕಪ್​ ಕಲಾವಿದನಾಗಿ ಕೆಲಸ ಮಾಡಿದ್ದು, ಆ ಚಿತ್ರತಂಡ ಸಹ ಸಂತಾಪ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net