ಚಿತ್ರಮಂದಿರ ತೆರೆಯುವಿಕೆಗೆ ಗ್ರೀನ್​ ಸಿಗ್ನಲ್​!; ಕೇಂದ್ರ ಸರ್ಕಾರ ನಿಗದಿಪಡಿಸಿದ ದಿನಾಂಕ ಯಾವುದು?

theatre
Published on

ಕಳೆದ ನಾಲ್ಕು ತಿಂಗಳಿಂದ ಕರೊನಾ ಲಾಕ್​ಡೌನ್ ಘೋಷಣೆ ಆದ ಬೆನ್ನಲ್ಲೇ ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಅಲ್ಲಿಂದ ಇಲ್ಲಿಯವರೆಗೂ ಚಿತ್ರಮಂದಿರಗಳ ತೆರೆಯುವಿಕೆಗೆ ಸರ್ಕಾರಗಳು ಮಾತ್ರ ಗ್ರೀನ್​ ಸಿಗ್ನಲ್​ ನೀಡಿಲ್ಲ. ಹಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಿದರು, ಚಿತ್ರಪ್ರದರ್ಶನಕ್ಕೆ ಮಾತ್ರ ಆ ಭಾಗ್ಯ ಲಭಿಸಿರಲಿಲ್ಲ. ಇದೀಗ ಸುದೀರ್ಘ ನಾಲ್ಕು ತಿಂಗಳ ಬಳಿಕ ಥಿಯೇಟರ್​ ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದಕ್ಕೆ ದಿನಾಂಕವನ್ನೂ ನಿಗದಿ ಮಾಡಿದೆ.

ಈಗಾಗಲೇ ಏಕಪರದೆ ಚಿತ್ರಮಂದಿರಗಳ ಮಾಲೀಕರು ಚಿತ್ರಪ್ರದರ್ಶನ ಇಲ್ಲದ್ದಕ್ಕೆ ಸಾಕಷ್ಟು ನಷ್ಟದಲ್ಲಿದ್ದು, ಜೀವನ ನಡೆಸಲೂ ಕಷ್ಟವಾಗುತ್ತಿದೆ ಎಂದು ದೂರಿದ್ದರು. ಅವಕಾಶ ನೀಡಿದರೆ, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡು ಚಿತ್ರಪ್ರದರ್ಶನ ಮಾಡುತ್ತೇವೆ ಎಂದಿದ್ದರು. ಅದರಂತೆ ಇದೀಗ ಆಗಸ್ಟ್ 1 ರಿಂದ ಚಿತ್ರಮಂದಿರ ತೆರೆಯುವಿಕೆಗೆ ನಿರ್ಧರಿಸಿದೆ ಎನ್ನಲಾಗುತ್ತಿದೆ.

ಅಂದಹಾಗೆ, ಚಿತ್ರಮಂದಿರ ಪ್ರದರ್ಶನಕ್ಕೂ ಒಂದಷ್ಟು ಮಾನದಂಡಗಳನ್ನು ವಿಧಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ಮಕ್ಕಳಿಗೆ ಚಿತ್ರವೀಕ್ಷಣೆಗೆ ಅವಕಾಶ ಇಲ್ಲ. ವಯಸ್ಕರಿಗಷ್ಟೇ ವೀಕ್ಷಣೆಗಷ್ಟೇ ಅವಕಾಶ ವಿಧಿಸಲಾಗುತ್ತದೆಯಂತೆ. ಕರೊನಾ ಪ್ರಕರಣಗಳು ಹೆಚ್ಚಿರುವ ಪ್ರದೇಶ ಹೊರತುಪಡಿಸಿ, ಕಡಿಮೆ ಪ್ರಮಾಣದ ಪ್ರಕರಣ ಕಂಡು ಪ್ರದೇಶದಲ್ಲಿ ಚಿತ್ರಪ್ರದರ್ಶನ ಮಾಡಲಾಗುವುದಂತೆ.

ಒಟ್ಟಿನಲ್ಲಿ ಈ ಬಗ್ಗೆ ಕೇಂದ್ರ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ. ಅದರಲ್ಲಿ ಯಾವೆಲ್ಲ ಅಂಶಗಳನ್ನು ನಮೂದಿಸುತ್ತದೆ ಎಂಬುದರ ಮೇಲೆ ಸಿನಿಮಾ ಪ್ರದರ್ಶನದ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net