ಕರೊನಾ ಕೇಸ್​ ಇಳಿಕೆ : 24 ಗಂಟೆಗಳಲ್ಲಿ 2.81 ಲಕ್ಷ ಜನ ಪಾಸಿಟೀವ್

Corona logo 3
Published on

ನವದೆಹಲಿ : ಸುಮಾರು ಒಂದು ತಿಂಗಳ ನಂತರ ಭಾರತದಲ್ಲಿ ಕರೊನಾ ಸೋಂಕು ಪ್ರಮಾಣ 3 ಲಕ್ಷಕ್ಕಿಂತ ಕಡಿಮೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ, ನಿತ್ಯಪ್ರಕರಣಗಳ ಸಂಖ್ಯೆಯು 2.81 ಲಕ್ಷ ಮಾತ್ರ ಇದೆ. ಏಪ್ರಿಲ್ 21 ರಂದು ನಿತ್ಯಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದ್ದು, ಇದೇ ಮೊದಲ ಬಾರಿಗೆ ನಿನ್ನೆ ಕೆಳಗಿಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಕರೊನಾ ಪಾಸಿಟಿವಿಟಿ ದರ ಶೇ. 17.88 ರಷ್ಟಿದೆ ಎನ್ನಲಾಗಿದ್ದು, 4,106 ಕರೊನಾ ರೋಗಿಗಳು ಮೃತಪಟ್ಟಿದ್ದಾರೆ. ಏಪ್ರಿಲ್ 28 ರಿಂದ ದೇಶದಲ್ಲಿ ಪ್ರತಿದಿನ 3,000 ಕ್ಕೂ ಹೆಚ್ಚು ಜನ ಕರೊನಾಗೆ ಬಲಿಯಾಗುತ್ತಿದ್ದು, ಈವರೆಗೆ ದೇಶದಲ್ಲಿ 2.7 ಲಕ್ಷ ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net