

ಡೆಹ್ರಾಡೂನ್ : ಉತ್ತರಾಖಂಡದಲ್ಲಿರುವ ಕೇದಾರನಾಥ ಸ್ವಾಮಿ ದೇವಾಲಯಕ್ಕೆ ಪೂಜೆ ಅರ್ಪಿಸಲು ಆನ್ಲೈನ್ ಪೋರ್ಟಲ್ಅನ್ನು ನಾಳೆಯಿಂದ ತೆರೆಯಲಾಗುವುದು. ಈ ಹಿನ್ನೆಲೆಯಲ್ಲಿ ದೇವಾಲಯಕ್ಕೆ 11 ಕ್ವಿಂಟಾಲ್ ಹೂವುಗಳನ್ನು ಹಾಕಿ ಅಲಂಕಾರ ಮಾಡಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಚಾರ್ ಧಾಮ್ ಯಾತ್ರೆಯ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾದ ಕೇದಾರನಾಥಕ್ಕೂ ಕರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಕ್ತರು ಖುದ್ದು ಭೇಟಿ ನೀಡಲು ಈ ಬಾರಿ ಅವಕಾಶವಿಲ್ಲ. ಆದರೆ, ಆನ್ಲೈನ್ ಪೂಜೆ ಅರ್ಪಿಸಲು ದೇವಾಲಯ ನಿರ್ವಹಣಾ ಸಮಿತಿ ಅವಕಾಶ ಮಾಡಿಕೊಟ್ಟಿದ್ದು, ನಾಳೆಯಿಂದ (ಮೇ17) ಇದಕ್ಕೆ ಸಂಬಂಧಿಸಿದ ಪೋರ್ಟಲ್ ತೆರೆಯಲಿದೆ. ವೆಬ್ಸೈಟ್ ವಿಳಾಸ ಇಲ್ಲಿದೆ : https://badrinath-kedarnath.gov.in/
ಉತ್ತರಾಖಂಡ ಚಾರ್ ಧಾಮ್ ದೇವಸ್ಥಾನಂ ಮ್ಯಾನೇಜ್ಮೆಂಟ್ ಬೋರ್ಡ್ನ ವೆಬ್ಸೈಟ್ನಲ್ಲಿ ಆನ್ಲೈನ್ ಪೂಜಾ, ಪಾಠ್, ಅರ್ಚನಾ, ಆರತಿ, ಭೋಗ್ಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಯಮುನೋತ್ರಿ ಮತ್ತು ಗಂಗೋತ್ರಿಯ ಪೋರ್ಟಲ್ಗಳು ಈಗಾಗಲೇ ತೆರೆಯಲ್ಪಟ್ಟಿವೆ. ಬದರೀನಾಥ ಧಾಮದ ಪೋರ್ಟಲ್ ಮೇ 18 ರಂದು ತೆರೆಯಲಿದೆ. (ಏಜೆನ್ಸೀಸ್)