ನಮ್ಮ ರಾಜ್ಯದಲ್ಲಿ ಸೋಂಕು ಇಳಿಮುಖ ಎಂದ ಸಿಎಂ ಚೌಹಾಣ್

chouhan
Published on

ಭೋಪಾಲ್ : ಭಾರತಾದ್ಯಂತ ಕರೊನಾ ಪ್ರಕರಣಗಳು ಏರುತ್ತಲೇ ಇದ್ದು, ಕರ್ನಾಟಕವು ಸೋಂಕಿನ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಿರುವಾಗ ಮಧ್ಯಪ್ರದೇಶದಲ್ಲಿ ಸೋಂಕು ಇಳಿಕೆಯಾಗುತ್ತಿರುವ ಶುಭಸೂಚನೆ ಇರುವುದಾಗಿ ರಾಜ್ಯದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಕರೊನಾ ಹರಡುವುದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಶೇ.24 ಕ್ಕೂ ಮೀರಿದ್ದ ಪಾಸಿಟಿವಿಟಿ ದರವು ಇದೀಗ ಶೇ. 10.68 ಕ್ಕೆ ಇಳಿದಿದೆ. ಕೆಲವು ಜಿಲ್ಲೆಗಳಲ್ಲಿ ಶೇ. 5ಕ್ಕಿಂತ ಕಡಿಮೆ ಇದೆ. ಹೊಸ ಸೋಂಕು ಪ್ರಕರಣಗಳು ಸತತವಾಗಿ ಕಡಿಮೆಯಾಗುತ್ತಿವೆ ಎಂದು ಚೌಹಾಣ್ ​ ಅವರು ಇಂದು ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಏನೂ ಸಮಸ್ಯೆಯಿಲ್ಲ. ಬೆಡ್​ ಮತ್ತು ಆಕ್ಸಿಜನ್ ಸೇರಿ ಎಲ್ಲ ಲಭ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿರು ಜನರು ತಮಗೆ ಯಾವುದಾದರೂ ರೋಗಲಕ್ಷಣಗಳು ಕಂಡುಬಂದಲ್ಲಿ ಮುಚ್ಚಿಡದೆ ನಮ್ಮ ಸಮೀಕ್ಷೆ ತಂಡಕ್ಕೆ ತಿಳಿಸಿ. ಅವರು ಸೂಕ್ತ ಚಿಕಿತ್ಸೆ ಒದಗಿಸುತ್ತಾರೆ ಎಂದು ಸಿಎಂ ಚೌಹಾಣ್ ಜನರಲ್ಲಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net