ನಟ ದರ್ಶನ್​ ಪತ್ನಿಗೆ ಕರೊನಾ; ಹರಿದಾಡಿದ ಸುದ್ದಿಗೆ ಸಿಕ್ತು ಸ್ಪಷ್ಟನೆ..

Darshan
Published on

ಬೆಂಗಳೂರು: ಸ್ಯಾಂಡಲ್​ವುಡ್​ ಸ್ಟಾರ್ ನಟರಿಗೂ ಇದೀಗ ಕರೊನಾ ಭಯ ಆವರಿಸಿದೆ. ನಿನ್ನೆಯಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಕ್ಕದ ಮನೆಯಲ್ಲೇ ಸೋಂಕು ಪತ್ತೆಯಾಗಿತ್ತು. ಬಳಿಕ ದರ್ಶನ್ ವಾಸವಿರುವ ಅಪಾರ್ಟ್​ಮೆಂಟ್​ನಲ್ಲಿ ಕರೊನಾ ಪಾಸಿಟಿವ್​ ವರದಿಯಾಗಿದೆ. ಅಷ್ಟೇ ಅಲ್ಲ, ದರ್ಶನ್​ ಪತ್ನಿ ವಿಜಯಲಕ್ಷ್ಮೀಗೂ ಕರೊನಾ ಪಾಟಿಸಿವ್​ ಇದೆ ಎಂದು ಒಂದಷ್ಟು ಸುದ್ದಿಗಳು ಹರಿದಾಡಿದ್ದವು. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ.

ಹೌದು, ಹೊಸಕರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್​ನಲ್ಲಿ ಕೆಲ ವರ್ಷಗಳಿಂದ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ವಾಸವಿದ್ದಾರೆ. ಹೀಗಿರುವಾಗಲೇ ಅದೇ ಅಪಾರ್ಟ್​ಮೆಂಟ್​ನಲ್ಲಿ ಕರೊನಾ ಸೋಂಕು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿತ್ತು. ಆ ಬಗ್ಗೆ ಮಾತನಾಡಿರುವ ವಿಜಯಲಕ್ಷ್ಮೀ, 'ನನಗೂ ಕರೊನಾ ಪಾಸಿಟಿವ್​ ಬಂದಿದೆ ಎಂಬ ಸುದ್ದಿ ಹೇಳಿದ್ದರೆ, ಆ ವದಂತಿ ಸುಳ್ಳು. ನಾನು ಕ್ಷೇಮವಾಗಿದ್ದೇನೆ. ಎಲ್ಲರೂ ಈ ಸಂಕಷ್ಟದ ಕಾಲದಲ್ಲಿ ಆರೋಗ್ಯವಾಗಿರಿ' ಎಂದು ಟ್ವಿಟ್​ ಮಾಡುವ ಮೂಲಕ ಹರಿದಾಡಿದ ಸುದ್ದಿಗೆ ತೆರೆ ಎಳೆದಿದ್ದಾರೆ.

ಅಚ್ಚರಿ ಏನೆಂದರೆ, ಇದೇ ಅಪಾರ್ಟ್‌ಮೆಂಟ್​ನಲ್ಲಿ ನಟ ರವಿಶಂಕರ್ ಗೌಡ ಕೂಡ ವಾಸವಿದ್ದಾರೆ. ನಟಿ ಪೂಜಾ ಗಾಂಧಿ ಕೂಡ ಅಪಾರ್ಟ್‌ಮೆಂಟ್​ನಲ್ಲಿ ಮನೆ ಹೊಂದಿದ್ದಾರೆ. ನಿನ್ನೆಯಷ್ಟೇ ಜೆಪಿ ನಗರದ ಸುದೀಪ್ ಮನೆ ಪಕ್ಕದಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿತ್ತು.‌ ಇದುವರೆಗೂ ದಕ್ಷಿಣ ವಲಯದಲ್ಲಿ 209 ಕೇಸ್​ಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಸುದೀಪ್ ಮನೆ, ರವಿಶಂಕರ್ ಗೌಡ, ವಿಜಯಲಕ್ಷ್ಮೀ ದರ್ಶನ್ ಮನೆ ಕೂಡ ಇದೇ ವಲಯದಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net