ಸಿನಿಮಾ ಕುಟುಂಬದಿಂದ ಬಂದ ಈ ನಟಿಗೆ ಸೆಕ್ಸ್‌ಗಾಗಿ ಆಹ್ವಾನ ಇಟ್ಟವರೇ ಹೆಚ್ಚು!

riya
Published on

ಕಾಸ್ಟಿಂಗ್ ಕೌಚ್ ಅನ್ನೋ ಪದ ನೀವು ಈಗಾಗಲೇ ಕೇಳಿರುತ್ತೀರಿ. ಆ ಕರಾಳತೆಯನ್ನು ಎದುರಿಸಿದ್ದವರೂ ಇದ್ದಾರೆ, ಅದನ್ನು ಒಪ್ಪಿಕೊಂಡು ಸಿನಿಮಾ ಮಾಡಿದವರೂ ಇದ್ದಾರೆ. ಬಣ್ಣದ ಲೋಕ ಆಗಿರುವುದರಿಂದ ಎಲ್ಲವೂ ಇಲ್ಲಿ ತಳುಕು ಬಳುಕು. ಅದರಲ್ಲೂ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಗಾಡ್‌ಫಾದರ್ ಹಂಗಿಲ್ಲದೆ ಬಂದ ಎಷ್ಟೋ ನಟಿಯರು ಕಾಸ್ಟಿಂಗ್ ಕೌಚ್ ಕರಾಳ ಮುಖವನ್ನು ಹತ್ತಿರದಿಂದ ಕಂಡು ಬೆಚ್ಚಿ ಬಿದ್ದಿದ್ದಾರೆ. ಆದರೆ, ಸಿನಿಮಾ ಕುಟುಂಬದಲ್ಲಿಯೇ ಬೆಳೆದು, ಸಿನಿಮಾವನ್ನೇ ಜೀವಿಸಿದ್ದ ಕುಟುಂಬದ ಒಬ್ಬ ಯುವತಿಗೂ ಇಂಥ ಅನುಭವ ಆಗಿತ್ತು ಎಂದರೆ ನಂಬುತ್ತೀರಾ? ಹೌದು, ಬಾಲಿವುಡ್‌ನಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. ಆ ಘಟನೆ ನಿಮ್ಮನ್ನು ನಂಬುವಂತೆ ಮಾಡುತ್ತದೆ. ಆದರೆ ರಿಯಾ ವಿಚಾರದಲ್ಲಿ ಈ ಘಟನೆಯನ್ನು ನೇರವಾಗಿ ಕಾಸ್ಟಿಂಗ್ ಕೌಚ್ ಎಂದು ಹೇಳಲು ಸಾಧ್ಯವಿಲ್ಲ..!

ಹೆಸರು ರಿಯಾ ಸೇನ್. ಬಾಲಿವುಡ್‌ನ ಒಂದು ಕಾಲದ ಅಂದಗಾತಿ ನಟಿ ಎಂದೇ ಕರೆಸಿಕೊಂಡ ಸುಚಿತ್ರಾ ಸೇನ್ ಅವರ ಮೊಮ್ಮಗಳೇ ಈ ರಿಯಾ ಸೇನ್. ರಿಯಾ ಅವರ ತಾಯಿ ಮೂನ್ ಮೂನ್ ಸೇನ್ ಕನ್ನಡದ ‘ಯುಗಪುರುಷ’ ಸಿನಿಮಾದಲ್ಲಿ ನಟಿಸಿದ್ದರು. ಹೀಗೆ ಸಿನಿಮಾ ಹಿನ್ನೆಲೆಯಿಂದಲೇ ಒಂದ ರಿಯಾಗೆ ಸಿನಿಮಾ ಅವಕಾಶಗಳಿಗೇನು ಕೊರತೆ ಇರಲಿಲ್ಲ. ಎಳೆ ವಯಸ್ಸಲ್ಲೇ ಚಿತ್ರರಂಗ ಪ್ರವೇಶಿಸಿದ್ದ ರಿಯಾ, ಅಜ್ಜಿ, ಅಮ್ಮನಂತೆ ಚೆಂದುಳ್ಳಿ ಚೆಲುವೆ. ಶಾಲಾದಿನಗಳಲ್ಲೇ ಸೆಕ್ಸಿ ಅನ್ನೋ ಪಟ್ಟ ರಿಯಾಗೆ ಅಂಟಿಕೊಂಡಿತ್ತು. ಹೀಗಿರುವಾಗಲೇ 1998ರಲ್ಲಿ 16ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ರಿಯಾಗೆ ಆರಂಭದಲ್ಲೇ ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಪಲ್ಗುಣಿ ಪಾತಕ್ ಅವರ ‘ಯಾದ್ ಪಿಯಾ ಕಿ ಆನೇ ಲಗಿ..’ ಆ ವಿಡಿಯೋ ಆಲ್ಬಂನಲ್ಲಿ ಲೈಂಗಿಕತೆಯ ವಿಷಯವೇ ಹೆಚ್ಚು ತುಂಬಿತ್ತು. ಅದನ್ನು ಕಂಡು ಆವತ್ತೇ ಬಾಲಿವುಡ್‌ಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ಬಂದ್ದಿದ್ದರು ರಿಯಾ.

ಅಲ್ಲಿಂದ ಮುಂದುವರಿದ ಆ ಪಯಣ, 1999ರಲ್ಲಿ ತಮಿಳು ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ದಿನಗಳೆದಂತೆ, ಸ್ಟಾರ್ ಹೀರೋಗಳ ಜತೆ ನಟಿಸಿದರು. ಬೋಲ್ಡ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡರು. ಸಿನಿಮಾ ಮೇಕರ್‌ಗಳು ಅವರನ್ನು ನೋಡುವ ರೀತಿಯೂ ಅದೇ ರೀತಿಯಾಗಿತ್ತು. ‘ಒಂದಷ್ಟು ಒಳ್ಳೇ ಹಿಟ್ಸ್ ನೀಡಿದರೂ, ಕೆಲ ಸಿನಿಮಾಗಳಲ್ಲಿ ಅವಕಾಶ ನನಗೆ ಅವಕಾಶ ಸಿಗಲಿಲ್ಲ. ನಾನು ನಿಭಾಯಿಸಿದ ಪಾತ್ರ ನೋಡಿ ನಾನು ಕೆಟ್ಟ ನಟಿಯೆಂದೇ ಪಟ್ಟ ಕಟ್ಟಿದರು. ಹಾಗಂತ ನಾನು ಅವರನ್ನು ಬೈಯಲಾರೆ. ಆಗ ನಾನು ಮಾಡಿದ ಸಿನಿಮಾಗಳು ಲೈಂಗಿಕತೆ, ಅಶ್ಲೀಲತೆಯನ್ನೇ ಹೊರಸೂಸುತ್ತಿದ್ದವು. ನಾನು ಧರಿಸುವ ಅರೆಬರೆ ಬಟ್ಟೆ ನೋಡಿ ಬೇರೆ ಬೇರೆ ರೀತಿಯಲ್ಲಿಯೇ ನಿರ್ದೇಶಕರು, ನಿರ್ಮಾಪಕರು ತಮ್ಮ ಸಿನಿಮಾಗಳಿಗೆ ಆಹ್ವಾನಿಸುತ್ತಿದ್ದರು’ ಎಂದು ಅಂದಿನ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ 39 ವರ್ಷದ ರಿಯಾ.

‘ನನಗೆ ಸೆಕ್ಸಿ, ಬೋಲ್ಡ್ ಅನ್ನೋ ಹಣೆ ಪಟ್ಟಿ ನೆನೆದರೆ ಭಯವಾಗುತ್ತದೆ. ಆ ಟ್ಯಾಗ್‌ಗಳನ್ನು ಹೊತ್ತು ತಿರುಗಾಡುವುದೇ ಒಮ್ಮೊಮ್ಮೆ ದುಸ್ತರ ಅನಿಸಿದ್ದೂ ಉಂಟು. ಶಾಲಾ ದಿನಗಳಲ್ಲೇ ಸೆಕ್ಸಿ ಅಂತ ಕರೆಯುತ್ತಿದ್ದರು. ಅಲ್ಲಿಂದ ಶುರುವಾದ ಆ ಪದ ಇನ್ನೂ ನನ್ನ ಬಿಟ್ಟಿಲ್ಲ. ತೆರೆಮೇಲೆ ಕಾಣಿಸುವ ರೀತಿಯಲ್ಲೆ ಮನೆಯಲ್ಲೂ ಇರುತ್ತೀರಾ ಎಂದು ಎಷ್ಟೋ ಮಂದಿ ಅಂದಿದ್ದೂ ಉಂಟು’ ಹೀಗೆ ಸೆಕ್ಸಿ ಅನ್ನೋ ಒಂದೇ ಪದ ರಿಯಾ ಅವರನ್ನು ತುಂಬ ಕಾಡಿತ್ತು. ಕಿರಿಕಿರಿ ಉಂಟು ಮಾಡಿತ್ತು. ಈಗಲೂ ಅದು ಅವರನ್ನು ಮುಜುಗರಕ್ಕೀಡು ಮಾಡುತ್ತಲೇ ಇದೆಯಂತೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net