ದರ್ಶನ್​-ಪವಿತ್ರಾ ಸಂಬಂಧ: ಇಬ್ಬರಲ್ಲಿ ಮೊದಲು ಗಾಳ ಹಾಕಿದ್ಯಾರು? ಚಾರ್ಜ್​ಶೀಟ್​ನಲ್ಲಿ ಲವ್​ ರಹಸ್ಯ ಬಯಲು

Pavithra gowda

ಬೆಂಗಳೂರು: ಪವಿತ್ರಾ ಗೌಡ ಮತ್ತು ನಟ ದರ್ಶನ್​ ನಡುವಿನ ಸಂಬಂಧ ಏನೂ ಎಂಬುದು ಬಹುತೇಕರಿಗೆ ತಿಳಿದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 4ರಂದು ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ಸ್ವತಃ ದರ್ಶನ್​ ನಮ್ಮಿಬ್ಬರ ನಡುವೆ ಲಿವಿಂಗ್​ ರಿಲೇಶನ್​ಶಿಪ್​ ಇತ್ತೆಂದು ಹೇಳಿಕೊಂಡಿದ್ದಾರೆ. ಪವಿತ್ರಾ ಗೌಡ ಕೂಡ ಇದನ್ನೇ ಹೇಳಿದ್ದಾರೆ. ಆದರೆ, ಇಬ್ಬರ ನಡುವೆ ಸಂಬಂಧ ಬೆಳೆದಿದ್ದು ಹೇಗೆ? ಯಾರು ಯಾರನ್ನು ಮೊದಲು ಸಂಬಂಧದ ಬಲೆಯಲ್ಲಿ ಸಿಲುಕಿಸಿದರು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದೀಗ ಚಾರ್ಜ್​ಶೀಟ್​ನಲ್ಲಿ ಅದಕ್ಕೆಲ್ಲ ಉತ್ತರ ಸಿಕ್ಕಿದೆ.

ಕೋರ್ಟ್​ಗೆ ಸಲ್ಲಿಸಿರುವ 3991 ಪುಟಗಳ ಚಾರ್ಜ್​ಶೀಟ್​ನಲ್ಲಿ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ದರ್ಶನ್​ ಸ್ವಇಚ್ಛಾ ಹೇಳಿಕೆಗಳನ್ನು ನೀಡಿದ್ದಾರೆ. ಪವಿತ್ರಾ ಗೌಡ ನೀಡಿರುವ ಹೇಳಿಕೆಯಲ್ಲಿ ದರ್ಶನ್​ ಜತೆಗಿನ ಸಂಬಂಧ ಹೇಗೆ ಶುರುವಾಯ್ತು? ಮನೆ ಯಾವಾಗ ಖರೀದಿ ಮಾಡಲಾಯಿತು ಮತ್ತು ರೇಣುಕಾಸ್ವಾಮಿ ಕೊಲೆಗೂ ಮುಂಚೆ ಏನೇನು ನಡೆಯಿತು ಎಂಬಿತ್ಯಾದಿ ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ದರ್ಶನ್​ ಜತೆಗಿನ ಸಂಬಂಧದ ಬಗ್ಗೆ ಹೇಳಿಕೆ ನೀಡಿರುವ ಪವಿತ್ರಾ ಗೌಡ, ನಾನು ಮತ್ತು ದರ್ಶನ್​ ಪರಸ್ಪರ ಪ್ರೀತಿ ಮಾಡುತ್ತಿದ್ದೆವು. ದರ್ಶನ್​ಗೆ ಮೊದಲೇ ವಿಜಯಲಕ್ಷ್ಮೀ ಅವರೊಂದಿಗೆ ಮದುವೆಯಾಗಿ ಮಗ ಇರುವುದು ಗೊತ್ತಿರಲಿಲ್ಲ. ಪ್ರೀತಿ ಮಾಡಲು ಶುರು ಮಾಡಿದ ಬಳಿಕ ಆ ಬಗ್ಗೆ ಗೊತ್ತಾಯಿತು. ನಾನು 2014ರಲ್ಲಿ ಬುಲ್​ಬುಲ್​ ಚಿತ್ರದ ಆಡಿಷನ್​ಗೆ ಹೋಗಿದ್ದೆ. ಈ ವೇಳೆ ನಾನು ನನ್ನ ಮಾಡೆಲಿಂಗ್​ ವಿವರವನ್ನು ದರ್ಶನ್​ ಅವರಿಗೆ ನೀಡುವಂತೆ ಹೇಳಿ ಅವರ ಮ್ಯಾನೇಜರ್​ ಅವರಿಂದ ನಂಬರ್​ ಪಡೆದುಕೊಂಡಿದ್ದೆ. ಇದಾದ ಬಳಿಕ ಆಡಿಷನ್​ ವಿಚಾರವಾಗಿ ಫೋನ್​ ಮಾಡಿದಾಗ ಈಗಾಗಲೇ ಆಡಿಷನ್​ ಮುಗಿದಿದೆ ಎಂದರು. ಅಲ್ಲದೆ, ಬೇರೆ ಯಾವುದಾದರೂ ಚಿತ್ರವಿದ್ದರೆ ಮಾಹಿತಿ ನೀಡುವುದಾಗಿ ತಿಳಿಸಿದರು. ನಾನು ಅದನ್ನೇ ನೆಪವಾಗಿ ಇಟ್ಟುಕೊಂಡು ದರ್ಶನ್​ ಅವರನ್ನು ಆಗಾಗ ಫೋನ್​ ಮತ್ತು ಮೆಸೇಜ್​ ಮೂಲಕ ಸಂಪರ್ಕಿಸುತ್ತಿದ್ದೆ. ದಿನಗಳು ಕಳೆದಂತೆ ಚಾಟಿಂಗ್​ ಮತ್ತು ಫೋನ್​ ಕರೆ ಮಾಡಿ ಮಾತನಾಡುತ್ತಿದ್ದೆವು. ಅಲ್ಲದೆ, ಆಗಾಗ ಇಬ್ಬರು ಭೇಟಿಯಾಗುತ್ತಿದ್ದೆವು ಎಂದು ಪವಿತ್ರಾ ಗೌಡ ನೀಡಿರುವ ಹೇಳಿಕೆ ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

ನಾನು ವಾಸ ಮಾಡುತ್ತಿದ್ದ ಮನೆಗೆ ಆಗಾಗ ದರ್ಶನ್​ ಬರುತ್ತಿದ್ದರು. ಇಬ್ಬರು ಕೂಡ ಲಾಂಗ್​ ಡ್ರೈವ್​ ಹೋಗುತ್ತಿದ್ದೆವು. ಒಟ್ಟಿಗೆ ವಾಸ ಮಾಡುವ ಉದ್ದೇಶದಿಂದ ಆರ್​ಆರ್​ ನಗರದಲ್ಲಿ ನನಗಾಗಿ ದರ್ಶನ್​ ಮನೆ ಖರೀದಿ ಮಾಡಿದ್ದರು. ನಾನು, ನನ್ನ ಮಗಳು ಮತ್ತು ದರ್ಶನ್​ ಇರುತ್ತಿದ್ದೆವು. ಮನೆಯನ್ನು ನನ್ನ ಹೆಸರಿನಲ್ಲೇ ಖರೀದಿ ಮಾಡಿದ್ದಾರೆ. ಇದಕ್ಕಾಗಿ ನಿರ್ಮಾಪಕ ಸೌಂದರ್ಯ ಜಗದೀಶ್‌ ಬಳಿ 1.75 ಕೋಟಿ ರೂ. ಹಣವನ್ನು ಪಡೆದಿದ್ದರು. 2018ರ ಫೆಬ್ರವರಿ ತಿಂಗಳಲ್ಲಿ ಮನೆಯ ಗೃಹಪ್ರವೇಶ ಮಾಡಿ ಅಲ್ಲೇ ವಾಸವಿದ್ದೆವು.

2013ರಲ್ಲಿ ನಾನು ನನ್ನ ವೈಯಕ್ತಿಕ ಹಾಗೂ ಮಾಡೆಲಿಂಗ್‌ ವಿಚಾರ ಹಂಚಿಕೊಳ್ಳಲು ಇನ್‌ಸ್ಟಾಗ್ರಾಮ್‌ ಖಾತೆ ತೆರೆದೆ. ದರ್ಶನ್​ ಕೊಡಿಸಿದ ಐಫೋನ್‌ ಮ್ಯಾಕ್ಸ್‌-14 ಮೊಬೈಲ್‌ನಿಂದಲೇ ನಿರ್ವಹಣೆ ಮಾಡುತ್ತಿದ್ದೆ. ನನ್ನ ಖಾತೆಯನ್ನು ಅನೇಕ ನೆಟ್ಟಿಗರು ಫಾಲೋ ಮಾಡುತ್ತಿದ್ದರು. ಖಾತೆ ಪಬ್ಲಿಕ್‌ ಆಗಿದ್ದರಿಂದ ನೆಟ್ಟಿಗರು ನೇರವಾಗಿ ಮೆಸೇಜ್‌ ಮಾಡುತ್ತಿದ್ದರು. ಕೆಲವೊಮ್ಮೆ ಇನ್‌ಬಾಕ್ಸ್‌ ತೆರೆದು ನೋಡಿದಾಗ ಅಸಭ್ಯ ರೀತಿಯ ಮೆಸೇಜ್‌ ಕಳಿಸಿರುತ್ತಿದ್ದರು. ಅಂತಹ ನೆಟ್ಟಿಗರ ಪ್ರೊಫೈಲ್‌ಗಳನ್ನು ಬ್ಲಾಕ್‌ ಮಾಡುತ್ತಿದ್ದೆ. ಕೆಲವೊಮ್ಮೆ ಅಸಹ್ಯಕರ ಮೆಸೇಜ್‌ಗಳು ಬಂದಾಗ ಸ್ಕ್ರೀನ್‌ ಶಾಟ್‌ ತೆಗೆದು ದರ್ಶನ್‌ ಅವರಿಗೂ ತೋರಿಸುತ್ತಿದ್ದೆ ಎಂದು ಪವಿತ್ರಾ ಗೌಡ ಹೇಳಿರುವುದು ಚಾರ್ಜ್​ಶೀಟ್​ನಲ್ಲಿ ದಾಖಲಾಗಿದೆ.

ಅಂದಹಾಗೆ ಇನ್​ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮಾಡಿರುವ ಸಂಪೂರ್ಣ ಮೆಸೇಜ್​ಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ‘Goutham_KS_1990’ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ, ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್​ಗಳನ್ನು ಮಾಡಿದ್ದ ಎಂದು ತಿಳಿದುಬಂದಿದೆ. ಕಿಡ್ನಾಪ್​ ಆಗುವ 8 ದಿನಗಳಿಗೂ ಮುಂಚೆ ಪವಿತ್ರಾ ಗೌಡಳ pavitragowda777_official ಹೆಸರಿನ ಅಧಿಕೃತ ಇನ್​ಸ್ಟಾಗ್ರಾಂ ಖಾತೆಗೆ ರೇಣುಕಾಸ್ವಾಮಿ ಮೆಸೇಜ್​ ಮಾಡಿದ್ದ. ದರ್ಶನ್​ರನ್ನು ಬಿಟ್ಟು ತನ್ನ ಜೊತೆ ಇರುವಂತೆ ಪಟ್ಟು ಹಿಡಿದಿದ್ದ. ಅಲ್ಲದೆ, ಪವಿತ್ರಾಳ ದೇಹದ ಬಗ್ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ನಾನು ನಿಮ್ಮ ಅಭಿಮಾನಿ ಎಂದು ಹೇಳಿಕೊಂಡು, ಆಕೆಯನ್ನು ಲೈಂಗಿಕ ಬಯಕೆ ಈಡೇರಿಸುವಂತೆ ಆಹ್ವಾನಿಸಿದ್ದ. ಇದಿಷ್ಟೇ ಅಲ್ಲದೆ, ತನ್ನ ಮರ್ಮಾಂಗದ ಫೋಟೋ ಸೇರಿದಂತೆ ತನ್ನ ಅನೇಕ ಫೋಟೋಗಳನ್ನು ಪವಿತ್ರಾಗೆ ಕಳುಹಿಸಿದ್ದ ಎಂದು ಚಾರ್ಜ್​ಶೀಟ್​ ಉಲ್ಲೇಖಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೇಣುಕಾಸ್ವಾಮಿಯ ವರ್ತನೆ ಪವಿತ್ರಾ ಗೌಡಳ ಕೋಪಕ್ಕೆ ಕಾರಣವಾಯಿತು. ಈ ವಿಚಾರವನ್ನು ತನ್ನ ಮ್ಯಾನೇಜರ್​ ಪವನ್​ಗೆ ಪವಿತ್ರಾ ತಿಳಿಸಿದಳು. ಬಳಿಕ ಪವನ್​ ಪವಿತ್ರಾ ತನ್ನ ಹೆಸರಿನಲ್ಲಿ ರೇಣುಕಾಸ್ವಾಮಿಗೆ ಮಸೇಜ್​ ಮಾಡಿ, ಆತನಿಂದ ಎಲ್ಲ ಮಾಹಿತಿ ಪಡೆದುಕೊಂಡನು. ಈ ಸಂಗತಿಯನ್ನು ನಟ ದರ್ಶನ್​ಗೆ ತಿಳಿಸಿದನು. ನಂತರ ಚಿತ್ರದುರ್ಗ ಜಿಲ್ಲೆಯ ದರ್ಶನ್​ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರಗೆ ತಿಳಿಸಿದ್ದು, ಆತ ಒಂದು ತಂಡವನ್ನು ಕಟ್ಟಿಕೊಂಡು ರೇಣುಕಾಸ್ವಾಮಿಯನ್ನು ಕಿಡ್ನಾಪ್​ ಮಾಡಿ, ಆರ್​ಆರ್​ ನಗರದ ಪಟ್ಟಣಗೆರೆ ಶೆಡ್​ಗೆ ಕರೆತಂದಿದ್ದಾನೆ. ಇದೇ ಸಂದರ್ಭದಲ್ಲಿ ಆರ್​ಆರ್​ ನಗರದ ಸ್ಟೋನಿ ಬ್ರೂಕ್​ ರೆಸ್ಟೋರೆಂಟ್​ನಲ್ಲಿ ಪಾರ್ಟಿ ಮಾಡುತ್ತಿದ್ದ ನಟ ದರ್ಶನ್​ಗೆ ಈ ವಿಚಾರವನ್ನು ತಿಳಿಸಲಾಗಿದೆ. ತಕ್ಷಣ ರೆಸ್ಟೋರೆಂಟ್​ನಿಂದ ಹೊರಟ ದರ್ಶನ್​, ಪವಿತ್ರಾ ಗೌಡ ಮನೆಗೆ ತೆರಳಿ, ಆಕೆಯನ್ನು ತನ್ನ ಜತೆ ಕರೆದುಕೊಂಡು ಪಟ್ಟಣಗೆರೆ ಶೆಡ್​ ಬಳಿ ಬಂದಿದ್ದಾರೆ. ಶೆಡ್​ನಲ್ಲಿ ತೀವ್ರ ಹಲ್ಲೆ ಮಾಡಿದ ಬಳಿಕ ಮೃತಪಟ್ಟ ರೇಣುಕಾಸ್ವಾಮಿಯನ್ನು ಕಾಮಾಕ್ಷಿಪಾಳ್ಯ ಬಳಿಯ ಮೋರಿಯಲ್ಲಿ ಎಸೆಯಲಾಯಿತು ಎಂದು ಚಾರ್ಜ್​ಶೀಟ್​ನಲ್ಲಿ ಹೇಳಲಾಗಿದೆ.

ಕೊಲೆ ಕೇಸ್​ನಿಂದ ಬಚಾವಾಗಲು ನಟ ದರ್ಶನ್​ ಖರ್ಚು ಮಾಡಿದ ಹಣವೆಷ್ಟು? ಚಾರ್ಜ್​ಶೀಟ್​ನಲ್ಲಿ ದುಡ್ಡಿನ ರಹಸ್ಯ ಬಯಲು

ನಾಳೆ ಇರುತ್ತೋ ಇಲ್ಲವೋ ಗೊತ್ತಿಲ್ಲ! ಅಪಘಾತದ ಬೆನ್ನಲ್ಲೇ ನಟಿ ರಶ್ಮಿಕಾ ಪೋಸ್ಟ್​ ವೈರಲ್​

RRR ಚಿತ್ರದ ಈ ಪುಟ್ಟ ಹುಡುಗಿ ನಿಮಗೆ ನೆನಪಿದೆಯಾ? ಈಗ ಎಷ್ಟು ಬದಲಾಗಿದ್ದಾರೆ ನೋಡಿ…

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…