ಹೈದರಾಬಾದ್: ಲೆಜೆಂಡರಿ ನಿರ್ದೇಶಕ ರಾಜಮೌಳಿ ಅವರ ಆರ್ಆರ್ಆರ್ ಸಿನಿಮಾ ಜಾಗತಿಕವಾಗಿ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದಲ್ಲಿ ರಾಮ್ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಒಟ್ಟಿಗೆ ನಟಿಸುವ ಮೂಲಕ ಚಿತ್ರರಂಗದಲ್ಲಿ ಒಂದೊಳ್ಳೆ ಬೆಳವಣಿಗೆಗೆ ನಾಂದಿಯಾಡಿದರು. ಅಲ್ಲೂರಿ ಸೀತಾರಾಮರಾಜ್ ಮತ್ತು ಕೊಮುರಂ ಭೀಮ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ಕಾಲ್ಪನಿಕ ಪಾತ್ರದಲ್ಲಿ ರಾಮ್ಚರಣ್ ಮತ್ತು ಜೂ. ಎನ್‌ಟಿಆರ್ ಅಭಿನಯವು ಪ್ರೇಕ್ಷಕರನ್ನು ಬೆರಗುಗೊಳಿಸಿತು.
2022, ಮಾರ್ಚ್ 25 ರಂದು ಬಿಡುಗಡೆಯಾದ ಈ ಚಲನಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಮಾತ್ರವಲ್ಲದೆ ಆಸ್ಕರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಮೊದಲ ದಿನವೇ 200 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಓಪನಿಂಗ್ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಈ ಚಿತ್ರದ ಸಂಗೀತದ ಬಗ್ಗೆ ಎಷ್ಟು ಹೇಳಿದರೂ ಸಾಲದು. ರಾಜಮೌಳಿ ಅವರ ಸಹೋದರ ಕೀರವಾಣಿ ಅವರ ಸಂಗೀತದ ಜಾದೂ ವಿಶ್ವದ ಗಡಿಗಳನ್ನು ದಾಟಿತು. ಅದರಲ್ಲೂ, ನಾಟು ನಾಟು ನಾಟು ಹಾಡು ವಿಶ್ವಮಟ್ಟದಲ್ಲಿ ಭಾರಿ ಸದ್ದು ಮಾಡಿತು.
ನಾಟು ನಾಟು ಹಾಡು ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್‌ನಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಸ್ನೇಹ, ಜನನಿ ಹಾಗೂ ಕೊಮುರಂ ಭೀಮುಡೆ ಹಾಡುಗಳು ಎಲ್ಲರ ಮನ ಮುಟ್ಟಿದವು. ನಾಟು ನಾಟು ಹಾಡಿನ ನಂತರ ಎಲ್ಲರ ಮನಗೆದ್ದ ಮತ್ತೊಂದು ಹಾಡೆಂದರೆ, “ಕೊಮ್ಮ ಉಯ್ಯಾಲ ಕೋಣ ಜಂಪಾಲಾ ಅಮ್ಮಾ ವೊಲ್ಲೊ ನೀನು ರೋಜು ಊಗಲ ರೋಜು ಊಗಲ” ಹಾಡು. ಈ ಹಾಡಿನಲ್ಲಿ ನಟಿಸಿದ ಹುಡುಗಿ ನಿಮಗೆ ನೆನಪಿದೆಯಾ? ಈ ಚಿತ್ರದಲ್ಲಿ ಈ ಹುಡುಗಿಗೆ ಪ್ರಮುಖ ಪಾತ್ರವಿದೆ. ಬುಡಕಟ್ಟು ಜನಾಂಗದ ಈ ಹುಡುಗಿ ಚೆನ್ನಾಗಿ ಹಾಡಿದ್ದಕ್ಕೆ ಬ್ರಿಟಿಷ್ ರಾಣಿ ಆಕೆಯನ್ನು ಕರೆದುಕೊಂಡು ಹೋಗುತ್ತಾಳೆ. ಇಡೀ ಕತೆಗೆ ತಿರುವು ನೀಡುವುದೇ ಈ ಘಟನೆ. ಪ್ರಮುಖ ಪಾತ್ರ ಮಾಡಿದ ಈ ಹುಡುಗಿ ಯಾರು ಗೊತ್ತಾ? ಈಗ ಎಷ್ಟು ಬದಲಾಗಿದ್ದಾಳೆ ಗೊತ್ತಾ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಅಂದಹಾಗೆ ಈ ಹುಡುಗಿ ಹೆಸರು ಟ್ವಿಂಕಲ್ ಶರ್ಮಾ. ಬಾಲ ಕಲಾವಿದೆಯಾಗಿರುವ ಟ್ವಿಂಕಲ್ ಶರ್ಮಾ ಛತ್ತೀಸ್‌ಗಢ ಮೂಲದವಳು. ಈಕೆಗೆ ನೃತ್ಯವೆಂದರೆ ಪಂಚಪ್ರಾಣ. ಹೀಗಾಗಿ ಬಾಲ್ಯದಿಂದಲೂ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾಳೆ. ಹಲವು ಜಾಹೀರಾತುಗಳಲ್ಲೂ ನಟಿಸಿದ್ದಾರೆ. ಜನಪ್ರಿಯ ಇ-ಕಾಮರ್ಸ್ ಸಂಸ್ಥೆ ಪ್ಲಿಫ್‌ಕಾರ್ಟ್‌ನಲ್ಲಿ ಆಕೆಯ ಜಾಹೀರಾತನ್ನು ನೋಡಿದ ರಾಜಮೌಳಿ, ಆಕೆಗೆ ಆರ್ಆರ್ಆರ್ ಸಿನಿಮಾದಲ್ಲಿ ಅವಕಾಶ ನೀಡಿದರು. ಅಹಮದಾಬಾದ್‌ನಲ್ಲಿ ಆಡಿಷನ್ ಮಾಡಿದ ನಂತರ ಆಕೆಗೆ ಮಲ್ಲಿ ಪಾತ್ರವನ್ನು ನೀಡಲಾಯಿತು. ಈ ಹಿಂದೆ ಸಂದರ್ಶನವೊಂದರಲ್ಲಿ ಟ್ವಿಂಕಲ್ ಶರ್ಮಾ ಈ ವಿಷಯಗಳನ್ನು ಹೇಳಿಕೊಂಡಿದ್ದಾರೆ.
ಚಿತ್ರ ಬಿಡುಗಡೆಗೂ ಮುನ್ನ ಪುಟ್ಟ ಬಾಲಕಿಯಂತಿದ್ದ ಟ್ವಿಂಕಲ್ ಶರ್ಮಾ, ಈಗ ಬೆಳೆದುಬಿಟ್ಟಿದ್ದಾಳೆ. ಆಕೆಯನ್ನು ನೋಡಿದವರು ಇವಳೇನಾ ಅವಳು ಎನ್ನುವಷ್ಟು ಟ್ವಿಂಕಲ್ ಬದಲಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋಗಳು ಮತ್ತು ವಿಡಿಯೋಗಳೊಂದಿಗೆ ಆಗಾಗ ಸದ್ದು ಮಾಡುತ್ತಿರುತ್ತಾಳೆ. ನೋಡಲು ತುಂಬಾ ಆಕರ್ಷಕವಾಗಿರುವ ಟ್ವಿಂಕಲ್, ಟಾಲಿವುಡ್ಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಾರಾ ಎಂಬುದನ್ನು ಕಾದು ನೋಡೋಣ. (ಏಜೆನ್ಸೀಸ್)
ಕೊಲೆ ಕೇಸ್ನಿಂದ ಬಚಾವಾಗಲು ನಟ ದರ್ಶನ್ ಖರ್ಚು ಮಾಡಿದ ಹಣವೆಷ್ಟು? ಚಾರ್ಜ್ಶೀಟ್ನಲ್ಲಿ ದುಡ್ಡಿನ ರಹಸ್ಯ ಬಯಲು
ನಾಳೆ ಇರುತ್ತೋ ಇಲ್ಲವೋ ಗೊತ್ತಿಲ್ಲ! ಅಪಘಾತದ ಬೆನ್ನಲ್ಲೇ ನಟಿ ರಶ್ಮಿಕಾ ಪೋಸ್ಟ್ ವೈರಲ್