ಸ್ವಿಗ್ಗಿ ಬಾಯ್ಸ್​ಗೆ ದರ್ಶನ್​ ಅಭಿಮಾನಿಗಳ ಕಡೆಯಿಂದ ಸ್ಮಾಲ್​ ಟ್ರೀಟ್​!

Untitled
Published on

ಈಗಾಗಲೇ ಗೊತ್ತಿರುವಂತೆ ಲಾಕ್​ಡೌನ್​ನಲ್ಲಿ ಕೊಂಚ ಸಡಿಲಿಕೆ ಆಗಿದೆ. ಹೋಟೆಲ್​ಗಳಲ್ಲಿ ಕೇವಲ ಪಾರ್ಸೆಲ್​ ವ್ಯವಸ್ಥೆ ಕಲ್ಪಿಸಿರುವುದರಿಂದ ಡೆಲಿವರಿ ಬಾಯ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಿರುವಾಗ ನಡುರಾತ್ರಿಯಲ್ಲೂ ಬೆನ್ನಿಗೊಂದು ಬ್ಯಾಗ್​ ಹಾಕಿಕೊಂಡು , ಅಡ್ರೆಸ್​ ಹುಡುಕಿಕೊಂಡು ಆಹಾರ ತಲುಪಿಸಿ ಬರುವ ಡೆಲಿವರಿ ಬಾಯ್​ಗಳ ಕೆಲಸವನ್ನೂ ಅಗತ್ಯ ವಸ್ತು ಪೂರೈಕೆ ಅಡಿಯಲ್ಲಿಯೇ ಗುರುತಿಸಿದೆ ಸರ್ಕಾರ. ಅವರ ಕಾರ್ಯವನ್ನು ಮೆಚ್ಚಿದ ಮೈಸೂರಿನ ದರ್ಶನ್​ ಅಭಿಮಾನಿಗಳು, ಒಂದಷ್ಟು ಡೆಲಿವರಿ ಬಾಯ್ಸ್​ಗೆ ಬಿಸಿ ಬಿಸಿ ಬಿರಿಯಾನಿ ನೀಡಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಮೈಸೂರಿನಲ್ಲಿನ ಸ್ವಿಗ್ಗಿ ಡೆಲಿವರಿ ಮಾಡುವ ಹುಡುಗರನ್ನು ಗುರುತಿಸಿ ಅವರೆಲ್ಲರ ಕಾರ್ಯವನ್ನು ಶ್ಲಾಘನೆ ಮಾಡಿ, ಆಹಾರ ವಿತರಿಸುವವರಿಗೇ ಬಿರಿಯಾನಿ ನೀಡಿದ್ದಾರೆ. ಹಾಗೇ ಬಿರಿಯಾನಿ ಪೊಟ್ಟಣಗಳನ್ನು ನೀಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ದರ್ಶನ್​ ಅಭಿಮಾನಿಗಳು, ಈ ಕಾರ್ಯದ ಹಿಂದಿನ ನಾಯಕನನ್ನು ನೆನೆಸಿಕೊಂಡಿದ್ದಾರೆ.

‘ಯಾರೆತ್ತ ಮಗನೋ, ನಮಗಾಗಿ ಬಂದನು, ಮೇಲು ಕೀಳು ಗೊತ್ತೇಯಿಲ್ಲ. ಬಡವನು ಗೆಳೆಯನೆ ಶ್ರೀಮಂತಿಕೆ ತಲೆಗತ್ತಿಲ್ಲ ಹತ್ತೂರ ಒಡೆಯಾನೆ.. ಬಾಸ್ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಇಂದು ಮೈಸೂರಿನಲ್ಲಿ ಸ್ವಿಗ್ಗಿ ಡೆಲಿವರಿ ಹುಡುಗರಿಗೆ ನಾಗಣ್ಣ ಅವರ ಕಡೆಯಿಂದ ಬಿರಿಯಾನಿ ವಿತರಿಸಿದರು‘ ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net