ಇದೇ ಅರ್ಜುನ್ ಜನ್ಯ ಹುಟ್ಟುಹಬ್ಬದ ಸ್ಪೆಷಾಲಿಟಿ ...

Arjun Janya Final
Published on

ಕನ್ನಡ ಚಿತ್ರರಂಗದಲ್ಲಿ ಮ್ಯಾಜಿಕಲ್ ಕಂಪೋಸರ್ ಎಂದೇ ಜನಪ್ರಿಯರಾಗಿರುವ ಅರ್ಜುನ್ ಜನ್ಯ, ಬುಧವಾರವಷ್ಟೇ (ಮೇ 13) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತೀ ವರ್ಷ ಹೆಚ್ಚು ಧಾಂ ಧೂಂ ಇಲ್ಲದೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅರ್ಜುನ್ ಜನ್ಯ, ಈ ವರ್ಷ ಸಹ ಮನೆ ಮಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಹೀಗಿರುವಾಗಲೇ ಬುಧವಾರ ರಾತ್ರಿ ನಿರ್ದೇಶಕ ಯೋಗರಾಜ್ ಭಟ್, ಗಾಯಕ ವಿಜಯ್‌ಪ್ರಕಾಶ್, ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮುಂತಾದವರು ಜನ್ಯ ಮನೆಗೆ ಸರ್‌ಪ್ರೈಸ್ ವಿಸಿಟ್ ಕೊಟ್ಟಿದ್ದಷ್ಟೇ ಅಲ್ಲ, ಅವರಿಗೊಂದು ವಿಶೇಷವಾದ ಗ್‌ಟಿ ಸಹ ಕೊಟ್ಟಿದ್ದಾರೆ. ಆ ಗ್‌ಟಿ ಏನು ಎಂಬ ಪ್ರಶ್ನೆ ಬಂತಾ? ಅದೇ ಹಾರ್ಮೋನಿಯಂ ಆಕಾರದ ಕೇಕ್.

ಹೌದು, ಅರ್ಜುನ್ ಜನ್ಯ ಸದಾ ವಾದ್ಯಗಳಿಂದ ಸುತ್ತವರಿದವರು. ಅಷ್ಟೇ ಅಲ್ಲ, ಹಲವು ವಾದ್ಯಗಳನ್ನು ಸುಲಭವಾಗಿ ನುಡಿಸಬಲ್ಲವರು. ಅರ್ಜುನ್ ಅವರ ವಾದ್ಯ ಪ್ರೀತಿಯ ಬಗ್ಗೆ ಗೊತ್ತಿದ್ದ ಅವರು ಸ್ನೇಹಿತರು, ಹಾರ್ಮೋನಿಯಂ ಆಕಾರದ ಕೇಕ್ ಮಾಡಿಸಿಕೊಂಡು ಹೋಗಿದ್ದಾರೆ. ಆ ಕೇಕ್ ಕತ್ತರಿಸಿ, ಅರ್ಜುನ್ ಜನ್ಯ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಅರ್ಜುನ್ ಜನ್ಯ ಸದ್ಯಕ್ಕೆ ಕನ್ನಡ ಚಿತ್ರರಂಗದ ಸಖತ್ ಬ್ಯುಸಿ ಸಂಗೀತ ನಿರ್ದೇಶಕ. ಅವರು ಸಂಗೀತ ನಿರ್ದೇಶನದ ‘ಕೋಟಿಗೊಬ್ಬ 3’, ‘ರಾಬರ್ಟ್’, ‘ಗಾಳಿಪಟ 2’, ‘ರೆಮೋ’, ‘ಏಕ್ ಲವ್ ಯಾ’ ಮುಂತಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಆ ಚಿತ್ರಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಬೇಕಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net