‘ಓಂ’ ಸಿಲ್ವರ್ ಜ್ಯೂಬಿಲಿಗೆ ಶಿವಣ್ಣ ಅಭಿಮಾನಿಗಳ ಭರ್ಜರಿ ಪ್ಲಾನ್!

OM - 25 Years Final
Published on

ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ ಶಿವರಾಜಕುಮಾರ್ ಅಭಿನಯದ ಮತ್ತು ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರವು ಬಿಡುಗಡೆಯಾಗಿ ಇದೇ 19ಕ್ಕೆ 25 ವರ್ಷಗಳು ಪೂರ್ತಿಯಾಗಲಿವೆ. 1995ರ ಮೇ 19ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುವುದರ ಜತೆಗೆ ಸೂಪರ್ ಹಿಟ್ ಆಗಿತ್ತು. ಈಗ ಚಿತ್ರ ಸಿಲ್ವರ್ ಜ್ಯೂಬಿಲಿ ಪೂರೈಸುತ್ತಿರುವ ಸಂಭ್ರಮವನ್ನು ಶಿವರಾಜಕುಮಾರ್ ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಆಚರಿಸುವುದಕ್ಕೆ ಸಿದ್ಧರಾಗುತ್ತಿದ್ದಾರೆ.

ಪ್ರಮುಖವಾಗಿ ಇಡೀ ದಿನ ಟ್ವಿಟರ್‌ನಲ್ಲಿ ಸಂಭ್ರಮಾಚರಣೆ ಮಾಡುವುದಕ್ಕೆ ಅಭಿಮಾನಿಗಳು ತಯಾರಿ ನಡೆಸಲಾಗಿದೆ. ಮೇ 18ರ ರಾತ್ರಿ ಏಳಕ್ಕೆ ಶುರುವಾಗಲಿರುವ ಈ ಸಂಭ್ರಮಾಚರಣೆ, ಮೇ 19ರ ರಾತ್ರಿ ಏಳಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಕಾಮನ್ ಡಿಸ್‌ಪ್ಲೇ ಪಿಕ್ಚರ್ ಬಿಡುಗಡೆ ಮಾಡುವುದಕ್ಕೆ ಭರ್ಜರಿ ತಯಾರಿ ನಡೆಸಲಾಗಿದೆ.

ನಿರ್ದೇಶಕರಾದ ರಿಷಭ್ ಶೆಟ್ಟಿ, ಯೋಗಿ ಜಿ ರಾಜ್, ಸಂತೋಷ್ ಆನಂದರಾಮ್, ‘ಬಹದ್ದೂರ್’ ಚೇತನ್, ‘ಸಿಂಪಲ್’ ಸುನಿ ಮತ್ತು ಪವನ್ ಒಡೆಯರ್, ಏಕಕಾಲಕ್ಕೆ ಸಿಡಿಪಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸಂಜೆ ನಾಲ್ಕರಿಂದ ಒಂಬತ್ತರವರೆಗೆ ಪ್ರತಿ ಒಂದು ತಾಸಿಗೊಮ್ಮೆ ಸೆಲೆಬ್ರಿಟಿ ಪೋಸ್ಟರ್ ಬಿಡುಗಡೆಯಾಗಲಿದೆಯಂತೆ.

ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು, ಶಿವರಾಜಕುಮಾರ್ ಅವರ ಅಭಿಮಾನಿಗಳ ಕೈ ಜೋಡಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net