

ಮೇಷ: ವೃತ್ತಿಜೀವನದಲ್ಲಿ ಗಮನಾರ್ಹ ಬದಲಾವಣೆ ಆಗಲಿದೆ. ಸಭೆ- ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಆಪ್ತ ಸ್ನೇಹಿತರೊಂದಿಗೆ ವಿಹಾರ. ಶುಭಸಂಖ್ಯೆ: 7
ವೃಷಭ: ಪತ್ನಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸೀತು. ಸಜ್ಜನರ ಸಹವಾಸದಿಂದ ಸಮಾಧಾನ. ಪೀಠೋಪಕರಣ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3
ಮಿಥುನ: ಲೆಕ್ಕ ಪರಿಶೋಧಕರ ವೃತ್ತಿಯಲ್ಲಿ ಪ್ರಗತಿಯಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಅಡೆತಡೆ. ರೈತಾಪಿ ವರ್ಗದವರಿಗೆ ಕೆಲಸಗಾರರ ಸಮಸ್ಯೆ. ಶುಭಸಂಖ್ಯೆ: 5
ಕಟಕ: ಸಹೋದ್ಯೋಗಿಗಳೊಂದಿಗೆ ವಿರೋಧ ಉಂಟಾದೀತು. ಕೈಗಾರಿಕಾ ರಂಗದವರಿಗೆ ಶುಭ. ಸ್ತ್ರೀಯರಿಗೆ ಅಧಿಕಾರ ಪ್ರಾಪ್ತಿ ಯೋಗ. ಶುಭಸಂಖ್ಯೆ: 3
ಸಿಂಹ: ಗೃಹ ನಿರ್ವಣದ ಸಾಮಗ್ರಿಗಳ ವ್ಯಾಪಾರದಲ್ಲಿ ಸುಧಾರಣೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಾಹಿತಿ, ಕವಿಗಳಿಗೆ ಗೌರವ ಪ್ರಾಪ್ತಿ. ಶುಭಸಂಖ್ಯೆ: 3
ಕನ್ಯಾ: ಕಾಳುಕಡಿ ವ್ಯಾಪಾರದಲ್ಲಿ ಮೋಸ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ. ಮಿತ್ರರ ಆಗಮನ. ಲಾಭದಾಯಕ ಉದ್ಯೋಗಕ್ಕೆ ಯತ್ನ. ಶುಭಸಂಖ್ಯೆ: 1
ತುಲಾ: ಆರ್ಥಿಕ ಪರಿಸ್ಥಿತಿ ಸುಧಾರಣೆ. ಭೂ ವ್ಯವಹಾರದಲ್ಲಿ ಆಶಾಕಿರಣ. ಮನೆ ಬದಲಾವಣೆಗೆ ಅಂತಿಮ ನಿರ್ಧಾರ ತೆಗೆದುಕೊಳ್ಳವಿರಿ. ಶುಭಸಂಖ್ಯೆ: 4
ವೃಶ್ಚಿಕ: ಮೇಲಧಿಕಾರಿಯಿಂದ ಪ್ರಶಂಸೆ. ಕಲಾವಿದರಿಗೆ ವೇದಿಕೆ ಲಭ್ಯ. ಕ್ರೀಡಾಳುಗಳಿಗೆ ವಿದೇಶ ಪ್ರಯಾಣ. ಕುತೂಹಲಕಾರಿ ಸಮಾಚಾರ. ಶುಭಸಂಖ್ಯೆ: 9
ಧನಸ್ಸು: ಆಸ್ತಿ ಖರೀದಿಸುವ ವಿಚಾರದಲ್ಲಿ ಮೋಸವಾದೀತು. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಆರೋಗ್ಯ ಕ್ಷೇತ್ರದವರಿಗೆ ಉನ್ನತಿ. ಶುಭಸಂಖ್ಯೆ: 2
ಮಕರ: ಕೆಲಸದ ಸ್ಥಳದಲ್ಲಿ ಮಾತಿನಲ್ಲಿ ಹಿಡಿತವಿರಲಿ. ವಿದೇಶದಲ್ಲಿರುವ ಮಕ್ಕಳಿಂದ ಅಶುಭ ವಾರ್ತೆ. ರಾಜಕೀಯ ಕ್ಷೇತ್ರದವರಿಗೆ ಶುಭ. ಶುಭಸಂಖ್ಯೆ: 2
ಕುಂಭ: ಗುರು ಹಿರಿಯರ ಮಾರ್ಗದರ್ಶನದಿಂದ ಸಮಾಧಾನ. ಧರ್ಮಕಾರ್ಯದಲ್ಲಿ ಆಸಕ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಮನಸ್ತಾಪ. ಶುಭಸಂಖ್ಯೆ: 4
ಮೀನ: ಅವಿವಾಹಿತರಿಗೆ ವಿವಾಹ ಕೂಡಿ ಬರಲಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ದಂಪತಿಗಳಲ್ಲಿ ಐಕ್ಯಮತ. ಶುಭಸಂಖ್ಯೆ: 1