CSK ವಿರುದ್ಧ ಮೋಸದಾಟ ಆರೋಪ! ಕ್ಯಾಮರಾ ಕಣ್ಣಿಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ರಾ ಖಲೀಲ್​-ರುತು!? ಹೀಗಿದೆ ವರದಿ

ವಿಜಯವಾಣಿ (66)
Published on

CSK: ನಿನ್ನೆ (ಮಾ.23) ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 18ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿ ಗೆಲುವಿಗಾಗಿ ಭರ್ಜರಿ ಪೈಪೋಟಿ ನಡೆಸಿತು. ಕೊನೆಯವರೆಗೂ ರೋಚಕತೆಯಲ್ಲೇ ಸಾಗಿದ ಈ ಪಂದ್ಯದಲ್ಲಿ ಅಂತಿಮವಾಗಿ ಸಿಎಸ್​ಕೆ 4 ವಿಕೆಟ್​ಗಳ ಭರ್ಜರಿ ಗೆಲುವನ್ನು ಸಾಧಿಸಿತು.

ಐಪಿಎಲ್​ನ ಮೂರನೇ ಪಂದ್ಯ ಇದಾಗಿದ್ದು, ಟಾಸ್ ಗೆದ್ದ ರುತುರಾಜ್ ಗಾಯಕ್ವಾಡ್ ಮುಂಬೈ ಪಡೆಗೆ​ ಮೊದಲು ಬ್ಯಾಟ್​ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಕಣಕ್ಕಿಳಿದ ಮುಂಬೈ ಇಂಡಿಯನ್ಸ್​, 20 ಓವರ್ ಅಂತ್ಯಕ್ಕೆ 155 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ, 19.1 ಓವರ್‌ಗಳಲ್ಲಿ ಪಂದ್ಯವನ್ನು ಗೆಲುವಿನ ಮೂಲಕ ಮುಕ್ತಾಯಗೊಳಿಸಿತು. ಇದು ಸಿಎಸ್​ಕೆ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಯಿತು. ಆದರೆ, ಈ ಪಂದ್ಯದಲ್ಲಿ ಖಲೀಲ್ ಅಹಮ್ಮದ್​ ಅವರ ಬೌಲಿಂಗ್ ವೇಳೆ ಕ್ಯಾಪ್ಟನ್​ ರುತುರಾಜ್, ಬೌಲರ್​​ ಜೇಬಿಗೆ ಏನೋ ಇಟ್ಟಂತೆ ಕಂಡುಬಂದ ದೃಶ್ಯ ಇದೀಗ ದೊಡ್ಡ ಆರೋಪಕ್ಕೆ ಗುರಿಯಾಗಿದೆ.

ಈ ಆರೋಪಕ್ಕೆ ಸಂಬಂಧಿಸಿದ ದೃಶ್ಯವೊಂದು ಸದ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿಎಸ್​ಕೆ ತಂಡದ ಖಲೀಲ್​ ಮತ್ತು ರುತುರಾಜ್​ ಬಾಲ್​ ಟಾಂಪರಿಂಗ್​​ ಮಾಡುವಲ್ಲಿ ತೊಡಗಿದ್ದರು. ಅಹಮ್ಮದ್​ ಅವರ ಜೇಬಿಗೆ ಗಾಯಕ್ವಾಡ್​ ಏನೋ ಇಟ್ಟಂತೆ ಕಂಡುಬಂದಿದೆ. ಇದರಿಂದಲೇ ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಗೆದ್ದು ಬೀಗಿದರು ಎಂದು ಕೆಲವರು ಆರೋಪಿಸಿದ್ದಾರೆ. ಆದರೆ, ಈ ಆರೋಪ ಎಷ್ಟರ ಮಟ್ಟಿಗೆ ಸುಳ್ಳು, ನಿಜ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಗಮನಿಸಬೇಕಾದ ವಿಷಯವಿದು

ಈ ದೃಶ್ಯಗಳನ್ನು ಮುಂದಿಟ್ಟು ಕಿಡಿಕಾರಿರುವ ಸಿಎಸ್​ಕೆ ವಿರೋಧಿಗಳು, ಜಾಲತಾಣಗಳಲ್ಲಿ ರುತುರಾಜ್​ ಗಾಯಕ್ವಾಡ್ ಮತ್ತು ಬೌಲರ್​ ಖಲೀಲ್ ಅಹ್ಮದ್​ರನ್ನು ವ್ಯಾಪಕವಾಗಿ ಟ್ರೋಲ್ ಮಾಡಿ ಟೀಕಿಸುತ್ತಿದ್ದಾರೆ. ಇನ್ನೂ ಕೆಲವರು ಮೂರನೇ ಬಾರಿಗೆ ಐದು ಬಾರಿ ಚಾಂಪಿಯನ್​ಗಳು ಐಪಿಎಲ್​ನಿಂದ ಬ್ಯಾನ್ ಆಗಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ಬಹುಶಃ ರುತುರಾಜ್​ ಚೂಯಿಂಗ್ ಗಮ್ ತೆಗೆದುಕೊಳ್ಳುವ ಉದ್ದೇಶದಿಂದ ಖಲೀಲ್ ಜೇಬಿಗೆ ಕೈಹಾಕಿರಬಹುದು ಎಂದು ಅಭಿಪ್ರಾಯಿಸಿದ್ದಾರೆ.

ವಿಡಿಯೋ ಡಿಲೀಟ್​

ಈ ಕುರಿತಂತೆ ಮುಂಬೈ ಇಂಡಿಯನ್ಸ್​ ಅಥವಾ ಇತರೆ ಆಟಗಾರರಿಂದ ಇಲ್ಲಿಯವರೆಗೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಇದು ಕೇವಲ ನೆಟ್ಟಿಗರ ಊಹಾಪೋಹ, ಆಧಾರವಿಲ್ಲದ ಆರೋಪಗಳು ಎಂಬುದು ಬಲವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net