
MS Dhoni: ಇಂದು (ಮಾ.23) ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 18ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ.
ಇದನ್ನೂ ಓದಿ: ನಾನೊಂದು ತೀರ, ನೀನೊಂದು ತೀರ! ಮೌನಕ್ಕೆ ಶರಣಾದ ಮುಸ್ಕಾನ್ ಸರ್ಕಾರಿ ವಕೀಲರಿಗಾಗಿ ಅಳಲು | Murder Case
ಟಾಸ್ ಗೆದ್ದ ಸಿಎಸ್ಕೆ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು, ಸೂರ್ಯಕುಮಾರ್ ಯಾದವ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ನ ಸ್ಟಾರ್ ಬ್ಯಾಟರ್ಗಳು ಹೆಚ್ಚು ಕಾಲ ಕ್ರೀಸ್ನಲ್ಲಿ ನಿಂತು ಅಬ್ಬರಿಸುವಲ್ಲಿ ಮುಗ್ಗರಿಸಿದರು.
ರೋಹಿತ್ ಶರ್ಮ ಶೂನ್ಯಕ್ಕೆ ಪೆವಿಲಿಯನ್ನತ್ತ ಮುಖ ಮಾಡಿದರೆ, ಅವರ ಬೆನ್ನಲ್ಲೇ ವಿಲ್ ಜ್ಯಾಕ್ಸ್, ರಿಯಾನ್, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಕೂಡ ದಿಗ್ಗಜನ ಹಾದಿಯನ್ನೇ ಹಿಡಿದರು. ಈ ವೇಳೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಸೂರ್ಯಕುಮಾರ್ ವಿಕೆಟ್ ಕಬಳಿಸಿದ ‘ಕ್ಯಾಪ್ಟನ್ ಕೂಲ್’, ಎಂದಿನಂತೆ ತಮ್ಮ ವಿಕೆಟ್ ಕೀಪಿಂಗ್ ಚಾಣಕ್ಷತನವನ್ನು ಈ ಬಾರಿಯೂ ಪ್ರದರ್ಶಿಸಿ, ಅಪಾರ ಸಂಖ್ಯೆಯ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
ಇದನ್ನೂ ಓದಿ: ಪದ್ಮನಾಭ ಮಾಣಿಂಜರ ಶಿಸ್ತು ಎಲ್ಲರಿಗೂ ಆದರ್ಶ : ಪ್ರೀತಿತಾ ಧರ್ಮ ವಿಜೇತ್ ಹೇಳಿಕೆ
ಚಿರ ಯುವಕರನ್ನೇ ನಾಚಿಸಿದ ಧೋನಿ
43ನೇ ವಯಸ್ಸಿನಲ್ಲೂ ಐಪಿಎಲ್ ಆಡುವೆ ಎಂದು ಅಖಾಡಕ್ಕಿಳಿದಿರುವ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಯಸ್ಸಾಯಿತು ಎಂಬ ಮಾತುಗಳು ಕೇಳಿಬಂದಿತ್ತು. ಈ ಬಾರಿಯ ಆವೃತ್ತಿ ಶುರುವಿಗೂ ಮುನ್ನವೇ ಅವರ ನಿವೃತ್ತಿ ಪ್ರಶ್ನೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ಇದೆಲ್ಲದರ ಮಧ್ಯೆ ಇದೀಗ ಮತ್ತೊಮ್ಮೆ ತಮ್ಮ ನಿಖರತೆ, ಚಾಣಕ್ಷತನ, ವೇಗವನ್ನು ಸ್ಟಂಪಿಂಗ್ ಮೂಲಕ ತೋರಿಸಿರುವ ಧೋನಿಗೆ ಅಭಿಮಾನಿಗಳು ಸಲಾಂ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ, ಅವರ ಬದ್ಧತೆ, ಈ ವಯಸ್ಸಿನಲ್ಲೂ ಯುವಕರಂತೆ ಆಡುವ ವೈಖರಿ.
The Greatest there is. The greatest there was. The greatest there will be.
No one can match the ERA of Ms Dhoni Keeping in the world No one 🔥 #MSDhoni𓃵 #CSKvsMIpic.twitter.com/qvxiu0pk7j
— Nick (@IamRealNick1) March 23, 2025
0.12 ಸೆಕೆಂಡ್ಗಳಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಕಬಳಿಸಿದ ಮಾಹಿ, ಮೈದಾನದಲ್ಲಿ ತಮಗಾಗಿ ಚೀರಾಡುತ್ತಿದ್ದ ಅಭಿಮಾನಿಗಳ ಉತ್ಸಾಹ, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದರು. ಈ ಸ್ಟಂಪಿಂಗ್ ಮೂಲಕ ಎಲ್ಲರ ಗಮನ ಸೆಳೆದ ಕ್ಯಾಪ್ಟನ್ ಕೂಲ್, ತಮಗೆ ವಯಸ್ಸಾಯಿತು ಎಂದವರ ಬಾಯಿ ಮುಚ್ಚಿಸಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಖುಷಿಯನ್ನು ಉಂಟು ತಂದೊಡ್ಡಿದೆ.